ಹಾಸನ: ಸಂಚಾರಿ ನಿಯಮ ಮಾಲಿಸುವ ಕುರಿತು ಅರಿವು ಮೂಡಿಸಬೇಕಾದ ಪೊಲೀಸರೇ ಹೆಲ್ಮೆಟ್ ಹಾಕದಿದ್ದರೆ ಹೇಗೆ ಅಲ್ಲವೆ, ಹೀಗಾಗಿ ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಅವರು ಎಎಸ್‍ಐಗೆ ತಕ್ಕ ಪಾಠ ಕಲಿಸಿದ್ದು, ಹೆಲ್ಮೆಟ್ ಧರಿಸದ್ದಕ್ಕೆ ಅವರಿಗೂ ಫೈನ್ ಹಾಕುವಂತೆ ಸೂಚಿಸಿದ್ದಾರೆ.
ಹಾಸನದ ಸಂತೆ ಪೇಟೆ ಸರ್ಕಲ್ ಬಳಿ ಅನವಶ್ಯಕವಾಗಿ ಓಡಾಡುತ್ತಿದ್ದ ವಾಹನಗಳನ್ನು ಎಸ್‍ಪಿ ಶ್ರೀನಿವಾಸಗೌಡ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಎಎಸ್‍ಐ ಹೆಲ್ಮೆಟ್ ಇಲ್ಲದೆ ಸ್ಕೂಟರ್‍ನಲ್ಲಿ ಆಗಮಿಸುತ್ತಿದ್ದ ರು. ಇದನ್ನು ಗಮನಿಸಿದ ಎಸ್‍ಪಿ, ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಹೆಲ್ಮೆಟ್ ಹಾಕದ್ದನ್ನು ಕಂಡು ಇವರಿಗೆ ದಂಡ ವಿಧಿಸಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಈ ಮೂಲಕ ಪೊಲೀಸರು ಸಹ ಬೇಕಾಬಿಟ್ಟಿಯಾಗಿ ಓಡಾಡದೆ, ಸಂಚಾರಿ ನಿಯಮಗಳನ್ನು ಪಾಲಿಸಿ ಶಿಸ್ತು ಕಾಪಾಡಬೇಕು ಎಂದು ತಿಳಿಸಿದ್ದಾರೆ.
Advertisement
Advertisement
ಮಂಗಳವಾರ ಈ ಘಟನೆ ನಡೆದಿದ್ದು, ನಮ್ಮ ಇಲಾಖೆಯವರು ಇತರರಿಗೆ ಮಾದರಿಯಾಗಬೇಕು. ಹೀಗಾಗಿ ಯಾರನ್ನೂ ಬಿಡುವುದಿಲ್ಲ. ಇವರಿಗೆ ಫೈನ್ ಹಾಕಿ ಎಂದು ಸೂಚಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.