ಚಿಕ್ಕಮಗಳೂರು: ಪ್ರತಿದಿನ ಟಿವಿಯಲ್ಲಿ ಚಿಕ್ಕಮಗಳೂರು ಎಸ್‍ಪಿ ಕಾರ್ಯವೈಖರಿಯನ್ನು ವೀಕ್ಷಿಸುತ್ತಿದ್ದ ವಯೋವೃದ್ಧರ ಆಸೆಯನ್ನು ಅಣ್ಣಾಮಲೈ ನೆರವೇರಿಸಿದ್ದಾರೆ.
ಚುನಾವಣೆ ಪೂರ್ವದಿಂದಲೂ ಪ್ರತಿದಿನ ಟಿವಿಯಲ್ಲಿ ಅಣ್ಣಾಮಲೈ ಕಾರ್ಯವೈಖರಿಯನ್ನು ವೀಕ್ಷಿಸುತ್ತಿದ್ದ ಚಿಕ್ಕಮಗಳೂರಿನ ಗೌರಿ ಕಾಲುವೆಯಲ್ಲಿರೋ ಅನ್ನಪೂರ್ಣ ವೃದ್ಧಾಶ್ರಮದ ವಯೋವೃದ್ಧರು ಎಸ್‍ಪಿ ಅವರನ್ನು ಕಣ್ತುಂಬ ನೋಡಬೇಕೆಂದು ಇಂಗಿತ ವ್ಯಕ್ತಪಡಿಸಿದ್ದರು.
ವಿಷಯ ತಿಳಿದ ಅಣ್ಣಾಮಲೈ ಸ್ಥಳಕ್ಕೆ ಭೇಟಿ ನೀಡಿ ವಯೋವೃದ್ಧರ ಯೋಗಕ್ಷೇಮ, ಕಷ್ಟವನ್ನು ವಿಚಾರಿಸಿದ್ದಾರೆ. ಮಂಗಳವಾರ ಸಂಜೆ ದಿಢೀರನೇ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಅಣ್ಣಾಮಲೈ ಅಲ್ಲಿನ ಹಿರಿ ಜೀವಗಳ ನೋವನ್ನು ಆಲಿಸಿದ್ದಾರೆ.
ಎಸ್‍ಪಿ ಅಣ್ಣಾಮಲೈ ಅವರನ್ನು ನೋಡುತ್ತಿದ್ದಂತೆ ವಯೋವೃದ್ಧರು ಆನಂದಭಾಷ್ಪ ಸುರಿಸಿದರು. ಎಸ್‍ಪಿ ಪಕ್ಕದಲ್ಲಿ ಮಕ್ಕಳಂತೆ ಕೂತು ಹಿರಿಯ ಜೀವಗಳು ತಮ್ಮ ನೋವಗಳನ್ನು ಹೇಳಿ ಕಣ್ಣೀರಿಟ್ಟರು. ಒಬ್ಬೊಬ್ಬರ ನೋವನ್ನು ಕೇಳಿದ ಅಣ್ಣಾಮಲೈ ಅವರಿಗೆ ಸಾಂತ್ವಾನ ಹೇಳಿದ್ದರು.\