-ಪರಿಹಾರದ ನಿರೀಕ್ಷೆಯಲ್ಲಿ ಅನ್ನದಾತ
ಚಿಕ್ಕೋಡಿ: ಒಂದು ಕಡೆ ಪ್ರವಾಹದಿಂದ ನದಿ ತೀರದ ರೈತರು ಕಂಗೆಟ್ಟಿದ್ದರೆ, ಇತ್ತ ಉತ್ತಮ ಮಳೆಯಾದರೂ ಬಯಲು ಸೀಮೆ ರೈತರು ಸೋಯಾಬೀನ್ ಬೆಳೆದು ಕಂಗಾಲಾಗಿದ್ದಾರೆ.
Advertisement
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವ್ಯಾಪ್ತಿಯ ಹುಕ್ಕೇರಿ ರಾಯಬಾಗದ ಅಥಣಿ ತಾಲೂಕುಗಳಲ್ಲಿ ರೈತರು ಸೋಯಾಬೀನ್ ಬೆಳೆದಿದ್ದರು. ಆದರೆ ಸೋಯಾಬೀನ್‍ಗೆ ಈ ವರ್ಷ ಬೆಂಕಿ ರೋಗ ಬಿದ್ದಿರುವ ಕಾರಣ ಸುಟ್ಟು ಹಳದಿ ಬಣ್ಣಕ್ಕೆ ತಿರುಗಿದೆ. ಹೀಗಾಗಿ ಕಷ್ಟ ಪಟ್ಟು ರೈತ ಬೆಳೆದ ಬೆಳೆ ನಾಶವಾಗುವ ಸ್ಥಿತಿ ತಲುಪಿದೆ.
Advertisement
Advertisement
ಈ ಬಾರಿ ನದಿ ತೀರದಲ್ಲಿ ಪ್ರವಾಹ ಉಂಟಾಗಿ ಬೆಳೆ ನಾಶವಾಗಿದ್ದರೂ ಬಯಲು ಸೀಮೆ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಉತ್ತಮ ಫಸಲು ಬರುವ ನೀರಿಕ್ಷೆಯಲ್ಲಿ ರೈತರು ಇದ್ದರು. ಆದರೆ ಈ ಬಾರಿ ಬಿದ್ದಿರುವ ಬೆಂಕಿ ರೋಗದಿಂದ ರೈತರು ದಿಕ್ಕುದೋಚದಂತೆ ಆಗಿದ್ದಾರೆ. ಸಾಲ ಸೂಲ ಮಾಡಿ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಬೆಂಕಿ ರೋಗ ಬಿದ್ದಿರುವ ಜಮೀನುಗಳನ್ನು ಸರ್ವೇ ಮಾಡಿಸಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ:ಯಾವುದೇ ರಾಜ್ಯಕ್ಕೆ ಹೋದರೂ ಒಂದೇ ವಾಹನ ನಂಬರ್ – ಈಗಿನ ವ್ಯವಸ್ಥೆ ಹೇಗಿದೆ? ಯಾರಿಗೆ ಸಿಗಲಿದೆ?
Advertisement
ಸದಾ ಒಂದಲ್ಲಾ ಒಂದು ಸಂಕಷ್ಟದಲ್ಲಿರುವ ಅನ್ನದಾತನಿಗೆ ಈ ಬಾರಿ ಬೆಂಕಿ ರೋಗ ಮಹಾ ಸಂಕಷ್ಟ ತಂದೊಡ್ಡಿದೆ. ಬೆಂಕಿ ರೋಗವನ್ನು ಕೃಷಿ ಇಲಾಖೆ ಗಂಭೀರವಾಗಿ ಪರಿಗಣಿಸಿ ರೈತರಿಗೆ ರೋಗದ ಕುರಿತು ತಿಳುವಳಿಕೆ ನೀಡಬೇಕಿದೆ. ಅಷ್ಟೇ ಅಲ್ಲದೇ ಬೆಂಕಿ ರೋಗದಿಂದ ನಷ್ಟ ಅನುಭವಿಸುತ್ತಿರುವ ಸಹಾಯಕ್ಕೆ ಸರ್ಕಾರ ನಿಲ್ಲಬೇಕಿದೆ. ಇದನ್ನೂ ಓದಿ:ಅಪ್ರಾಪ್ತೆಗೆ ಕಿಸ್ ಮಾಡಿ ಪರಾರಿ – ಎಫ್‍ಐಆರ್ ದಾಖಲಿಸುವಂತೆ ಡಿಸಿಪಿ ಸೂಚನೆ