ದಾವಣಗೆರೆ: ಇದು ರಾಜ್ಯದಲ್ಲೇ ಅತಿದೊಡ್ಡ ಇಂಟರ್ ಆಕ್ಟೀವ್ ಬೋರ್ಡ್ ಹೊಂದಿರುವ ಉರ್ದು ಶಾಲೆ. ದಾವಣಗೆರೆಯ ಈ ಶಾಲೆ ಸಂಪೂರ್ಣ ಹೈಟೆಕ್ ಆಗಿದ್ದು, ಇದೀಗ ಜಿಲ್ಲೆಯ ಗಮನ ಸೆಳೆದಿದೆ.
ಹೌದು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಉರ್ದು ಶಾಲೆಯ ಗಣಿತ ಶಿಕ್ಷಕ ಸೋಯದ್ ಬೇಗ್ ಪರಿಶ್ರಮದಿಂದ ಈ ಶಾಲೆ ಈಗ ಕೇಂದ್ರಬಿಂದುವಾಗಿದೆ. ತರಗತಿಯಲ್ಲಿ ಪಾಠ ಕೇಳುವ ಮಕ್ಕಳಿಗೆ ಹೈಟೆಕ್ ಲ್ಯಾಬ್‍ನಲ್ಲಿ ಪ್ರತ್ಯಕ್ಷವಾಗಿ ಪ್ರಯೋಗ ಮಾಡುವುದರಿಂದ ಮಕ್ಕಳ ಗ್ರಹಿಕೆ ಉತ್ತಮವಾಗಿದೆ ಅಂತ ಶಿಕ್ಷಕ ಸೋಯದ್ ಬೇಗ್ ಹೇಳ್ತಾರೆ.
Advertisement
ರಾಜ್ಯದಲ್ಲಿ ಎರಡನೇ ಅತ್ಯಂತ ದೊಡ್ಡ ಇಂಟರ್ ಆಕ್ಟಿವ್ ಬೋರ್ಡ್ ಹೊಂದಿರುವ ಉರ್ದು ಶಾಲೆ ಎಂಬ ಖ್ಯಾತಿಗೆ ಈ ಶಾಲೆ ಭಾಜನವಾಗಿದೆ. ಸೋಯದ್ ಅವರಿಗೆ ಸಹಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರ ಸಾಥ್ ಸಿಕ್ಕಿದೆ.
Advertisement
ಸರ್ಕಾರಿ ಶಾಲೆ ಅಂದ್ರೆ ಹೀಗೂ ಇರುತ್ತೆ ಅಥವಾ ಇರಿಸಬಹುದು ಅನ್ನೋದನ್ನ ಋಜುವಾತು ಮಾಡಿದ್ದಾರೆ ಕೆರೆಬಿಳಚಿ ಶಾಲೆಯ ಮೇಷ್ಟ್ರು ಸೋಯದ್ ಬೇಗ್.
Advertisement
https://www.youtube.com/watch?v=zYA3oc4tfAA
Advertisement