ಸಂಜೆಯ ವೇಳೆ ಟೀ ಜೊತೆ ಏನಾದರೂ ತಿನ್ನುವ ರೂಢಿ ಹಲವು ಮಂದಿಗಿರುತ್ತದೆ. ಅಲ್ಲದೇ ಮಕ್ಕಳು ಶಾಲೆಯಿಂದ ಬಂದ ತಕ್ಷಣ ಏನಾದರೂ ತಿನ್ನಲು ಕೇಳುತ್ತಾರೆ. ಸಂಜೆ ಬಿಸಿ ಬಿಸಿಯಾಗಿ ಸ್ನಾಕ್ಸ್ ಕೊಟ್ಟರೆ ಮಕ್ಕಳು ಖುಷಿಯಿಂದ ತಿನ್ನುವುದಲ್ಲದೇ ಅವರ ಹಸಿವನ್ನೂ ನೀಗಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಸೋಯಾ ಕಬಾಬ್ (Soya Kabab) ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಮಕ್ಕಳು ಇಷ್ಟಪಟ್ಟು ತಿನ್ನುವ ಈ ಸೋಯಾ ಕಬಾಬ್ ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮಕ್ಕಳಿಗಾಗಿ ಪನೀರ್ ಮಸಾಲ ರೋಲ್
Advertisement
ಬೇಕಾಗುವ ಸಾಮಗ್ರಿಗಳು:
ಸೋಯಾ ಚಂಕ್ಸ್ – 1 ಕಪ್
ಎಣ್ಣೆ – ಕರಿಯಲು ಬೇಕಾದಷ್ಟು
ಅಚ್ಚ ಖಾರದ ಪುಡಿ – ಒಂದು ಚಮಚ
ಮೈದಾ ಹಿಟ್ಟು – 3 ಚಮಚ
ಜೋಳದ ಹಿಟ್ಟು – 3 ಚಮಚ
ಅರಶಿನ ಪೌಡರ್ – ಕಾಲು ಚಮಚ
ಗರಂ ಮಸಾಲ – ಅರ್ಧ ಚಮಚ
ಜೀರಿಗೆ ಪುಡಿ – ಕಾಲು ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಮೊಸರು – 2 ಚಮಚ
ಕಲರ್ ಪೇಸ್ಟ್ – ಒಂದು ಬಿಂದು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸೋಯಾ ಚಂಕ್ಸ್ ಅನ್ನು ಒಂದು ಬೌಲ್‌ನಲ್ಲಿ ಹಾಕಿ ಅದಕ್ಕೆ ಕುದಿಯುವ ಬಿಸಿನೀರನ್ನು ಹಾಕಿ 5 ನಿಮಿಷ ನೆನೆಸಿಡಬೇಕು.
* ಬಳಿಕ ಇದನ್ನು 2ರಿಂದ 3 ಸಲ ತಣ್ಣೀರಿನಲ್ಲಿ ತೊಳೆದುಕೊಂಡು ಸೋಯಾ ಚಂಕ್ಸ್‌ನಲ್ಲಿರುವ ನೀರಿನ ಅಂಶವನ್ನೆಲ್ಲಾ ಚನ್ನಾಗಿ ಹಿಂಡಿ ತೆಗೆದು ಬೇರೆ ಪಾತ್ರೆಗೆ ಹಾಕಿಟ್ಟುಕೊಳ್ಳಿ.
* ಈಗ ಒಂದು ಪಾತ್ರೆಗೆ ಮೈದಾ ಹಿಟ್ಟು, ಜೋಳದ ಹಿಟ್ಟು, ಅರಶಿನ, ಅಚ್ಚ ಖಾರದ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಉಪ್ಪು ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಇದಕ್ಕೆ 2 ಚಮಚ ಮೊಸರನ್ನು ಹಾಕಿಕೊಂಡು ಕಲಸಿಕೊಳ್ಳಿ. ಬಳಿಕ ಇದಕ್ಕೆ ಒಂದು ಬಿಂದು ಕಲರ್ ಪೇಸ್ಟ್ ಅನ್ನು ಹಾಕಿಕೊಂಡು ಪುನಃ ಮಿಕ್ಸ್ ಮಾಡಿಕೊಳ್ಳಬೇಕು.
* ಬಳಿಕ ಈ ಮಿಶ್ರಣಕ್ಕೆ ಸೋಯಾ ಚಂಕ್ಸ್ ಅನ್ನು ಹಾಕಿಕೊಂಡು ನೀರು ಬಳಸದೇ ಸೋಯಾ ಚಂಕ್ಸ್ ಮಿಶ್ರಣವನ್ನು ಹೊಂದಿಕೊಳ್ಳುವಂತೆ ಕಲಸಿಕೊಂಡು 5ರಿಂದ 10 ನಿಮಿಷ ಹಾಗೇ ಬಿಡಿ.
* ಬಳಿಕ ಇನ್ನೊಂದು ಬಾರಿ ಅದನ್ನು ಮಿಕ್ಸ್ ಮಾಡಿಕೊಂಡು ಕಾದ ಎಣ್ಣೆಗೆ ಬಿಡಿ. ಹಾಕಿದ ತಕ್ಷಣ ಅದನ್ನು ತಿರುಚಿ ಹಾಕಿಕೊಳ್ಳಬಾರದು.
* ಸೋಯಾ ಚಂಕ್ಸ್ ಚನ್ನಾಗಿ ಬೆಂದ ಬಳಿಕ ಅದನ್ನು ಎಣ್ಣೆಯಿಂದ ತೆಗೆದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಬಿಸಿಬಿಸಿಯಾಗಿ ತಿನ್ನಲು ಕೊಡಿ. ಇದನ್ನೂ ಓದಿ: ಅವಲಕ್ಕಿಯಿಂದ ಮಾಡಿ ನಮ್ಕೀನ್ ಕೇಕ್
Advertisement
Web Stories