ರಾಜ್ಯದ ಅನ್ನದಾತರಿಗೆ ಸರ್ಕಾರದ ಶಾಕ್ – ಬಿತ್ತನೆ ಬೀಜಗಳ ಬೆಲೆ ಶೇ.48 ಏರಿಕೆ

Public TV
2 Min Read
sowing seed price karnataka

ಸರ್ಕಾರದ ವಿರುದ್ಧ ರೈತರ ಆಕ್ರೋಶ

ಬೆಂಗಳೂರು: ಬರಗಾಲದಿಂದ ಬೀಜೋತ್ಪಾದನೆ ಕುಂಠಿತವಾದ ಕಾರಣ ದರ ಹೆಚ್ಚಳವಾಗಿದೆ. ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ (Sowing Price) ದರ ವ್ಯತ್ಯಾಸವು 2023 ಕ್ಕೆ ಹೋಲಿಸಿದರೆ ಈ ಬಾರಿ ಗರಿಷ್ಠ ಶೇ.48.50 ರಷ್ಟಿದೆ. ದರ ಹೆಚ್ಚಳದಿಂದಾಗಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ಆದಾಗ್ಯೂ ನೆರೆಯ ರಾಜ್ಯಗಳ ಹೋಲಿಕೆಯಲ್ಲಿ ಬಿತ್ತನೆ ಬೀಜಗಳ ದರ ರಾಜ್ಯದಲ್ಲಿ ಕಡಿಮೆಯಿದೆ ಎಂದು ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃಷಿ ಸಚಿವರು, ಇದು ನಮ್ಮ ವ್ಯಾಪ್ತಿಗೆ ಬರಲ್ಲ. ಆಹಾರ ಧಾನ್ಯಗಳ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ಬಾರಿ ಶಾಲಾ ಪಠ್ಯ ಪರಿಷ್ಕರಣೆ ಇಲ್ಲ: ಮಧು ಬಂಗಾರಪ್ಪ ಸ್ಪಷ್ಟನೆ

sowing seed price farmers

ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯ ಮಾಡಲು ಸಜ್ಜಾಗುತ್ತಿದ್ದಾರೆ. ಆದರೆ ಸರ್ಕಾರ ರಾಜ್ಯದ ರೈತರಿಗೆ ಶಾಕ್ ನೀಡಿದೆ. ಬಿತ್ತನೆ ಬೀಜಗಳ ದರಗಳನ್ನು ಜಾಸ್ತಿ ಮಾಡಲಾಗಿದೆ. ಹೆಸರು 805 ರೂ, ಉದ್ದು 660, ತೊಗರಿ 776, ಸೋಯಾಬಿನ್ 1,431 ರೂ. ಇದ್ದು, ಕಳೆದ ಬಾರಿಗಿಂತ ಈ ಬಾರಿ 20-30 ಪರ್ಸೆಂಟ್ ದರ ಹೆಚ್ಚಳ ಮಾಡಲಾಗಿದೆ. ಸರ್ಕಾರದ ವಿರುದ್ಧ ಧಾರವಾಡ ಜಿಲ್ಲಾ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಪ್ರಮುಖವಾಗಿ ಮುಂಗಾರು ಸಮಯದಲ್ಲಿ ಹೆಸರು, ಉದ್ದು, ಶೇಂಗಾ, ತೊಗರಿ ಹಾಗೂ ಸೋಯಾಬಿನ್ ಬೆಳೆಯನ್ನ ಬಿತ್ತುತ್ತಾರೆ. ಈ ಬಾರಿ ಸೋಯಾ ಒಂದನ್ನು ಬಿಟ್ಟರೆ ಉಳಿದ ಬೆಳೆಯ ಬೀಜದ ಎಲ್ಲ ದರ ಹೆಚ್ಚಳವಾಗಿವೆ. ಸದ್ಯ ಧಾರವಾಡ ಜಿಲ್ಲೆಯಲ್ಲಿ 25 ಕಿಲೋಗೆ ಕಳೆದ ಬಾರಿಯ ದರಕ್ಕಿಂತ ಹೆಚ್ಚಿನ ದರ ಮಾಡಲಾಗಿದೆ. ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಈ ಬೆಲೆ ಹೆಚ್ಚಳವಾಗಿದ್ದು, ರೈತರ ಬೆನ್ನೆಲುಬು ಎನ್ನುವ ಸರ್ಕಾರ ಯಾಕೆ ಇಷ್ಟು ಬೆಲೆ ಹೆಚ್ಚಳ ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಹವಾಮಾನ ವೈಪರಿತ್ಯ – 24 ಗಂಟೆಯಲ್ಲಿ 250ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ!

ಚಿಕ್ಕಬಳ್ಳಾಪುರದಲ್ಲಿ ರಾಗಿ, ನೆಲಗಡಲೆ, ತೊಗರಿ ಹಾಗೂ ಮೆಕ್ಕೆಜೋಳವನ್ನ ಮಳೆಯಾಧಾರಿತ ಬೆಳೆಗಳಾಗಿ ಬೆಳೆಯಲಿದ್ದು, ಕಳೆದ ವರ್ಷ 5 ಕೆಜಿಯ ಬಿತ್ತನೆ ರಾಗಿಯ ಬೆಲೆ ಸಾಮಾನ್ಯ ವರ್ಗದ ರೈತರಿಗೆ 190 ರೂ. ಇದೆ. ಈ ವರ್ಷ 235 ರೂ. ಆಗಿದ್ದು, 45 ರೂ. ಹೆಚ್ಚಳ ಕಂಡಿದೆ. ಎಸ್‌ಸಿ, ಎಸ್‌ಟಿ ರೈತರಿಗೆ ಕಳೆದ ವರ್ಷ 145 ರೂ. ಇದ್ದು, ಈ ವರ್ಷ 190 ರೂ. ಆಗಿದೆ. 5 ಕೆಜಿಯ ಬ್ಯಾಗ್ ತೊಗರಿ 565 ರೂ. ಇದ್ದದ್ದು, ಈ ವರ್ಷ 765 ರೂ. ಆಗಿದೆ. ನೆಲಗಡಲೆಯ 30 ಕೆಜಿ ಬ್ಯಾಗ್ ಕಳೆದ ವರ್ಷ 3,000 ರೂ. ಇದ್ದದ್ದು, ಈ ವರ್ಷ 3,420 ರೂ. ಆಗಿದೆ. ಮೆಕ್ಕೆಜೋಳವೂ ಸಹ ಕಳೆದ ವರ್ಷ 909 ರೂ. ಇದ್ದದ್ದು, ಈ ವರ್ಷ 996 ರೂ. ಆಗಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share This Article