ಬೆಂಗಳೂರು: ಡಿಜಿಟಲ್ ಯುಗದಲ್ಲಿ ಏನ್ ಇಲ್ಲ ಅಂದ್ರೂ ನಡೆಯುತ್ತೆ. ಆದರೆ ಕೈಯಲ್ಲಿ ಒಂದು ಫೋನ್ (Phone) ಇರಲೇಬೇಕು. ಹಳ್ಳಿಯಿಂದ ಡೆಲ್ಲಿವರೆಗೆ ಸಹ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ (Mobile) ಇದೆ. ಇದರಿಂದ ಎಷ್ಟು ಲಾಭವೋ ಅಷ್ಟೇ ಅಪಾಯವು ಇದೆ. ಜನ ವಂಚನೆಗೆ ಒಳಗಾಗುತ್ತಿರುವ ಘಟನೆಯು ಹೆಚ್ಚಾಗುತ್ತಿದೆ. ಇದೀಗ ಸ್ಮಾರ್ಟ್ ಫೋನ್‌ಗೆ (Smartphone) ಹೊಸ ವೈರಸ್ ಒಂದು ಲಗ್ಗೆ ಇಟ್ಟಿದೆ.
Advertisement
ಸೈಬರ್ ಕ್ರೈಮ್ ಬಗ್ಗೆ ಸಾರ್ವಜನಿಕರಿಗೆ ಅಷ್ಟಾಗಿ ಮಾಹಿತಿ ಇರಲ್ಲ. ಅದರಲ್ಲೂ ಮೊಬೈಲ್‍ನಲ್ಲಿರೋ ಡೇಟಾ, ಬ್ಯಾಂಕ್ ಡಿಟೈಲ್ಸ್ ಸೇರಿದಂತೆ ಫೋಟೋ, ವೀಡಿಯೋ ಕದಿಯಬಲ್ಲ ವೈರಸ್ ಒಂದು ನಮ್ಮ ದೇಶಕ್ಕೆ ಕಾಲಿಟ್ಟಿದೆ. ಹೌದು ಈ ಖತರ್ನಾಕ್ ವೈರಸ್‍ಗೆ ಸೋವಾ (SOVA) ಎಂದು ಕರೆಯುತ್ತಿದ್ದು ಇದು ರಷ್ಯಾದಿಂದ ಬಂದಿರುವ ಮೊಬೈಲ್ ವೈರಸ್. ರಷ್ಯಾ (Russia) ಭಾಷೆಯಲ್ಲಿ ಸೋವಾ ಅಂದ್ರೆ ಗೂಬೆ ಅನ್ನೋ ಅರ್ಥವಿದೆ. ಸೈಬರ್ ಖದೀಮರು ಈ ವೈರಸ್‌ನ್ನು 2021ರಲ್ಲಿ ಅಭಿವೃದ್ಧಿ ಪಡಿಸಿ ಈಗ ಅದರ ಹೊಸ ವರ್ಷನ್ 5.0ವನ್ನು (SOVA-5.0) ಹಣ ಮಾಡಲು ಬಳಸುತ್ತಿದ್ದಾರೆ. ಆ್ಯಂಡ್ರಾಯ್ಡ್, ಸ್ಮಾರ್ಟ್‌ಫೋನ್‌ಗಳಲ್ಲಿನ ಮೊಬೈಲ್ ಬ್ಯಾಂಕಿಂಗ್ (Mobile Banking) ಅಪ್ಲಿಕೇಶನ್‌ಗಳನ್ನು ಗುರಿಯಾಗಿಸಿಕೊಂಡು ಈ ವೈರಸ್ ದಾಳಿ ಮಾಡುತ್ತಿದೆ. ಅಮೆರಿಕ (America), ರಷ್ಯಾ ಮತ್ತು ಸ್ಪೇನ್‌ನ ಬಳಿಕ ಈಗ ಭಾರತೀಯ ಬ್ಯಾಂಕಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಇದನ್ನೂ ಓದಿ: ಜ್ಯೂಸ್ ಜಾಕಿಂಗ್ ಮೂಲಕ ಡೇಟಾ ಕಳವು – ಪವರ್ ಬ್ಯಾಂಕ್ ಚಾರ್ಚಿಂಗ್‍ನಿಂದ ಆಪತ್ತು!
Advertisement
Advertisement
ಡೇಟಾಗೆ ಗುನ್ನಾ:
ಹೌದು ಇದು ಮೊಬೈಲ್‍ಗೆ ಹೊಸ ಹೊಸ ಆ್ಯಪ್ ಡೌನ್ಲೋಡ್ ಮಾಡುವಾಗ ಎಂಟ್ರಿ ಕೊಡುವ ವೈರಸ್ ಆಗಿದ್ದು, ಇದು ಒಮ್ಮೆ ಮೊಬೈಲ್‍ಗೆ ಬಂದ ನಂತರ ಅದನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲದಂತೆ ಅಭಿವೃದ್ಧಿ ಪಡಿಸಿದ್ದಾರೆ. ಇದು ಮೊಬೈಲ್‍ನಲ್ಲಿ ಇರುವುದು ತಿಳಿಯದಂತೆ ಕೆಲಸ ಮಾಡತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ನಿಮ್ಮ ಖಾತೆಯಿಂದ ಹಣವನ್ನು ದೋಚುವುದರಿಂದ ಹಿಡಿದು ನಿಮ್ಮ ಮೊಬೈಲ್‍ನಲ್ಲಿ ಏನೇಲ್ಲ ಡೇಟಾ ಇದೇ ಅದನ್ನು ಕದಿಯಲಿದೆ. ಈಗಾಗಲೇ ಇಂತಹ ಅನೇಕ ಪ್ರಕರಣಗಳು ನಮ್ಮ ದೇಶದಲ್ಲೂ ಆಗಿದೆ. ಇದು ಹೇಗೆ ಬರುತ್ತೆ ಇದು ಯಾವ ರೀತಿ ಕೆಲಸ ಮಾಡುತ್ತೆ ಅನ್ನೋದನ್ನು ಸೈಬರ್ ತಜ್ಞೆ ಆಗಿರುವ ಡಾ. ಶೋಭಾ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶೋಭಾ, ಈ ವೈರಸ್ ಬರದಂತೆ ಹೇಗೆ ತಡೆಯೋದು ಅನ್ನೋ ಪ್ರಶ್ನೆ ಸಹಜವಾಗಿಯೇ ನಿಮಗೂ ಬಂದಿರುತ್ತೆ. ಹೌದು ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ. ಹೊಸ ಆ್ಯಪ್ ಡೌನ್ಲೋಡ್ ಮಾಡುವಾಗ ಅದು ಸರಿಯಾದ ಆ್ಯಪ್ ಅನ್ನೋದನ್ನು ಪರಿಶೀಲಿಸಿ. ಬೇಕಾಬಿಟ್ಟಿ ಸಿಕ್ಕಸಿಕ್ಕ ಆ್ಯಪ್ ಇನ್‍ಸ್ಟಾಲ್ ಮಾಡಬೇಡಿ. ಗೊತ್ತಿಲ್ಲದ ಲಿಂಕ್‍ಗಳನ್ನು ಓಪನ್ ಮಾಡಬೇಡಿ. ಯಾರೋ ಗೊತ್ತಿಲ್ಲದವರು ಕಳುಹಿಸಿದ ಆ್ಯಪ್ ಡೌನ್‍ಲೋಡ್ ಮಾಡಬೇಡಿ. ಜಾಹೀರಾತಿನಲ್ಲಿ ಬರುವ ಫೋಟೋ ವೀಡಿಯೋಗಳನ್ನು ಡೌನ್‍ಲೋಡ್ ಮಾಡಬೇಡಿ. ಅಧಿಕೃತ ವೈರಸ್ ರಿಮೂವ್ ಆ್ಯಪ್ ಆಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.