ಸ್ವಚ್ಛತೆಯಲ್ಲಿ ದೇಶದಲ್ಲೇ ನಂಬರ್ ಒನ್ ನೈರುತ್ಯ ರೈಲ್ವೆ ವಿಭಾಗ

Public TV
3 Min Read
south western railway

– ದೇಶದ 17 ವಿಭಾಗಗಳನ್ನು ಹಿಂದಿಕ್ಕಿ ಸತತ 2ನೇ ಬಾರಿ ಪ್ರಶಸ್ತಿ ಗೆದ್ದ ನೈರುತ್ಯ ರೈಲ್ವೆ

ಹುಬ್ಬಳ್ಳಿ: ವಿಶ್ವದಲ್ಲೇ ಉದ್ದದ ಪ್ಲಾಟ್‌ಫಾರ್ಮ್ ಹೊಂದಿರುವ ನೈರುತ್ಯ ರೈಲ್ವೆ ಇಲಾಖೆಗೆ ಈಗ ಮತ್ತೊಂದು ಗರಿ ಲಭಿಸಿದೆ. ನಿತ್ಯ ಕೋಟ್ಯಂತರ ಜನರಿಗೆ ಸುಖಕರ ಪ್ರಯಾಣ ಒದಗಿಸುವ ನೈರುತ್ಯ ವಿಭಾಗದ ಈಗ ದೇಶದ ಅತೀ‌ ಸ್ವಚ್ಛ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಸತತವಾಗಿ ಎರಡನೇ ಬಾರಿ ಈ ಕೀರ್ತಿಗೆ ನೈರುತ್ಯ ರೈಲ್ವೆ ಇಲಾಖೆ ಭಾಜನವಾಗುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನಕ್ಕೆ ತನ್ನ ಕೊಡುಗೆ ನೀಡಿದೆ.

ನೈರುತ್ಯ ರೈಲ್ವೆ ಇಲಾಖೆ ರೈಲ್ವೆ ಸಂಪರ್ಕದಲ್ಲಿ ತನ್ನ ವಿಭಿನ್ನತೆಯಿಂದ ಅತ್ಯುತ್ತಮ ಸೇವೆ ನೀಡುತ್ತಿದೆ. ದೇಶದ ಇತರೇ ವಿಭಾಗಗಳ ಪೈಕಿ ಜನರಿಗೆ ವಿಶೇಷ ಅನುಭೂತಿ ನೀಡುವಲ್ಲಿ ನೈರುತ್ಯ ಇಲಾಖೆ ಸದಾ ಮುಂಚೂಣಿಯಲ್ಲಿರುತ್ತದೆ. ಇಂತಹ ವಿಭಾಗಕ್ಕೆ ಮತ್ತೊಂದು ಗರಿ ಲಭ್ಯವಾಗಿದೆ. ಗಾಂಧಿ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರೈಲ್ವೆ ಇಲಾಖೆ ನಡೆಸುವ ಸ್ವಚ್ಛತಾ ಪಾಕ್ಷಿಕ 2023 ರಲ್ಲಿ ನೈಋತ್ಯ ರೈಲ್ವೆ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷವೂ ನೈಋತ್ಯ ರೈಲ್ವೆ ವಲಯ ಮೊದಲ ಸ್ಥಾನ ಪಡೆದುಕೊಂಡಿತ್ತು. ಈಗ ಸತತ ಎರಡನೇ ಬಾರಿಗೆ ಆಯ್ಕೆಯಾಗಿ ದಾಖಲೆ ಸೃಷ್ಟಿ ಮಾಡಿದೆ. ಇನ್ನೂ ಈಶ್ಯಾನ ಹಾಗೂ ದಕ್ಷಿಣ ಸೆಂಟ್ರಲ್ ರೈಲ್ವೆ ಎರಡು ಹಾಗೂ ಮೂರನೇ ಸ್ಥಾನ ಗಳಿಸಿವೆ. ಇದನ್ನೂ ಓದಿ: ದೇಶದ ವ್ಯವಸ್ಥೆಯಲ್ಲಿ ಕಳ್ಳರು ಒಂದೇ, ಸುಳ್ಳರು ಒಂದೇ.. ಭಗವಂತ ಇದ್ದಾನೆ: ಹೆಚ್‌ಡಿಕೆ

hubballi railway

ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸ್ವಚ್ಛತಾ ಪಾಡಾ 2023 ಅಭಿಯಾನ ಆರಂಭವಾಗಿತ್ತು. ಈ ಅಭಿಯಾನದಲ್ಲಿ ರೈಲ್ವೆ ಇಲಾಖೆಯ ರೈಲ್ವೆ ನಿಲ್ದಾಣ, ರೈಲ್ವೆ ಹಳಿಗಳು, ಕಚೇರಿಗಳು ಸ್ವಚ್ಛವಾಗಿಡುವುದು, ಪ್ರಯಾಣಿಕರ ಹಾಗೂ ರೈಲ್ವೆ ಸಿಬ್ಬಂದಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ದಿನನಿತ್ಯದ ವರದಿಗಳ ಮೌಲ್ಯಮಾಪನದ ಆಧಾರದ ಮೇಲೆ ನೈಋತ್ಯ ರೈಲ್ವೆಯು ಎಲ್ಲಾ ವಲಯ ರೈಲ್ವೆಗಳಲ್ಲಿ ಅತ್ಯುತ್ತಮವೆಂದು ಗುರುತಿಸಲ್ಪಟ್ಟಿದೆ. ಗಾಂಧಿ ಜಯಂತಿ ಹಿನ್ನೆಲೆ ಒಂದು ತಿಂಗಳ ಕಾಲ ಸ್ವಚ್ಛತಾ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಳ್ಳಲಾಗತ್ತೆ. ಪ್ರತಿ ವರ್ಷ ಭಾರತ ಸರ್ಕಾರ ಸ್ವಚ್ಛತೆಯೇ ಸೇವೆ ಅಡಿಯಲ್ಲಿ ಸ್ವಚ್ಛತಾ ಪಾಕ್ಷಿಕ ಆಚರಣೆ ಮಾಡಲಾಗತ್ತೆ. ಒಂದು ತಿಂಗಳ ಕಾಲ ಜಾಗೃತಿ ಅಭಿಯಾನ ಮೂಡಿಸೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗತ್ತೆ.

ಈ ಬಾರಿ ವಿನೂತನವಾಗಿ ಪ್ಲಾಸ್ಟಿಕ್ ಅಸುರ ಅನ್ನೋ ಅಭಿಯಾನ ಹಮ್ಮಿಕೊಂಡಿತ್ತು. ಪ್ಲಾಸ್ಟಿಕ್ ಅಸುರ ಅಂದ್ರೆ ಬೆಂಗಳೂರ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್‌ನಲ್ಲಿಯೇ ರಾವಣನ ವೇಷ ಹಾಕಿ ಜಾಗೃತಿ ಮೂಡಿಸಿದ್ದು, ಇನ್ನೊಂದು ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳಿಂದಲೇ ಪ್ರಯಾಣಿಕರು ಎಸೆಯಲ್ಪಟ್ಟ ನೀರಿನ ಬಾಟಲ್ ಕಲೆಕ್ಟ್ ಮಾಡಿ ಭೂಮಿಯ ಆಕೃತಿ ರಚಿಸಲಾಗಿತ್ತು. ಈ ಮೂಲಕ ಪ್ಲಾಸ್ಟಿಕ್ ಭೂಮಿಗೆ ಹೇಗೆ ಕಂಟಕವಾಗತ್ತೆ ಅನ್ನೋದನ್ನ ತೋರಿಸಲಾಗಿತ್ತು. ಈ ಎರಡು ಅಭಿಯಾನಗಳು ವಿಶೇಷ ಅನಿಸಿದ ಹಿನ್ನೆಲೆ ಮೊದಲ ಪ್ರಶಸ್ತಿ ಸಿಕ್ಕಿದೆ. ಇದನ್ನೂ ಓದಿ: ಪುತ್ರನ ಚುನಾವಣೆಗೆ ಸಿಎಂ ಇಬ್ರಾಹಿಂ ನನ್ನಿಂದ ಹಣ ಪಡೆದಿದ್ದಾರೆ: ಟಿಎ ಶರವಣ

hubballi railway officer

ಸೆಪ್ಟೆಂಬರ್ 16 ರಂದು ಬೆಂಗಳೂರಿನ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಲ್ಲಿ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ, ಸ್ವಚ್ಛತಾ ಪಾಕ್ಷಿಕ -2023 ಗೆ ಚಾಲನೆ ನೀಡಿದ್ದರು. ರೈಲ್ವೆ ನಿಲ್ದಾಣಗಳು ಮತ್ತು ಇತರ ಆವರಣಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಹೆಚ್ಚಿಸಲು ಸಕ್ರಿಯವಾಗಿ ಭಾಗವಹಿಸಿದವು. ನೈಋತ್ಯ ರೈಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು 915 ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಅಭಿಯಾನದಲ್ಲಿ 23,744 ಜನರು ಭಾಗವಹಿಸಿದ್ದು, ಬರೋಬ್ಬರಿ 5.27 ಕೋಟಿ ಚ.ಕಿಮೀ ಪ್ರದೇಶ ಸ್ವಚ್ಛಗೊಳಿಸಿದ್ದಾರೆ. ಈ ಸ್ವಚ್ಛತಾ ಅಭಿಯಾನದಲ್ಲಿ 252 ಸಸಿಗಳನ್ನ ನೆಟ್ಟು, 17 ಟನ್ ಪ್ಲಾಸ್ಟಿಕ್ ತೆಗೆಯಲಾಗಿದೆ. 22 ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಸ್ವಚ್ಛತೆ ಕುರಿತು ರೈಲ್ವೆ ನಿಲ್ದಾಣಗಳಲ್ಲಿ ನಾಟಕ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಪ್ರಯಾಣಿಕರಿಗೆ ಬಿತ್ತಿ ಪತ್ರ ಹಾಗೂ ಕರಪತ್ರ ಹಂಚಲಾಗಿದೆ. ಒಟ್ಟಿನಲ್ಲಿ ಸತತ ಎರಡು ವರ್ಷಗಳ ಕಾಲ ನೈಋತ್ಯ ರೈಲ್ವೆ ವಲಯ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು ಸಂತಸದ‌ ಸಂಗತಿ.

Share This Article