ಬೆಂಗಳೂರು: ಕನ್ನಡ, ತೆಲುಗು, ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿ ಪ್ರಿಯಾಮಣಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಜೊತೆ ಸರಳವಾಗಿ ರಿಜಿಸ್ಟರ್ ಮದುವೆ ಆಗಿದ್ದಾರೆ.
ಜಯನಗರದ ರಿಜಿಸ್ಟರ್ ಕಛೇರಿಯಲ್ಲಿ ಸಹಿ ಹಾಕಿ, ಹಾರ ಬದಲಾಯಿಸಿಕೊಂಡು ಸಿಹಿ ಹಂಚಿ ದಾಂಪತ್ಯ ಜೀವನವನ್ನು ಪ್ರಿಯಾಮಣಿ, ಮುಸ್ತಫಾ ರಾಜ್ ಶುರು ಮಾಡಿದರು.
Advertisement
ಹಸಿರು ಸೀರೆ, ಹಳದಿ ಕಲರ್ ಬ್ಲೌಸ್‍ನಲ್ಲಿ ಪ್ರಿಯಾಮಣಿ ಕಂಗೊಳಿಸಿದರೆ, ಬಿಳಿ ಬಣ್ಣದ ಕುರ್ತಾ ಪೈಜಾಮ ತೊಟ್ಟು ಮದುಮಗ ಮುಸ್ತಫಾ ರಾಜ್ ರಿಜಿಸ್ಟರ್ ಆಫೀಸ್‍ಗೆ ಬಂದರು. 15 ರಿಂದ 20 ನಿಮಿಷ ನಡೆದ ಮದುವೆ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಆಪ್ತರು ಮಾತ್ರ ಹಾಜರಾಗಿದ್ದರು.
Advertisement
ಗುರುವಾರ ಜೆ ಪಿ ನಗರದ ‘ಇಲಾನ್ ಕನ್ವೆನ್ಷನ್ ಹಾಲ್’ ನಲ್ಲಿ ಆರತಕ್ಷತೆ ನಡೆಯಲಿದ್ದು ಸಮಾರಂಭಕ್ಕೆ ಕೆಲವೇ ಕೆಲ ಸಿನಿಮಾ ಗಣ್ಯರನ್ನ ಹಾಗೂ ಸ್ನೇಹಿತರನ್ನು ಆಹ್ವಾನಿಸಲಾಗಿದೆ. ಕಳೆದ ವರ್ಷ ಮೇ 27ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ದಾಂಪತ್ಯ ಜೀವನದ ವಸಂತಗೀತೆ ಶುರುಮಾಡಿದ್ದಾರೆ.
Advertisement
Advertisement