ಸಿಯೋಲ್: ದಕ್ಷಿಣ ಕೊರಿಯಾದಲ್ಲಿ (South Korea) ಜಾರಿಗೊಳಿಸಿದ್ದ ಸೇನಾಡಳಿತವನ್ನು ಮತ್ತೆ ವಾಪಸ್ ತೆಗೆದುಕೊಂಡಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್ (Yoon Suk Yeol), ಬುಧವಾರ ಮಾರ್ಷಲ್ ಕಾನೂನನ್ನು ಹೇರುವ ಅಲ್ಪಾವಧಿಯ ಕ್ರಮವನ್ನು ಕೈಬಿಟ್ಟಿದ್ದಾರೆ.
ಶಾಸಕರು ಭದ್ರತಾ ಪಡೆಗಳನ್ನು ಧಿಕ್ಕರಿಸಿ ಅವರ ಘೋಷಣೆಗೆ ವಿರುದ್ಧವಾಗಿ ಮತ ಚಲಾಯಿಸಿದರು. ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು ಹೋರಾಟ ನಡೆಸಿದರು. ಇದರ ಬೆನ್ನಲ್ಲೇ ಸೇನಾಡಳಿತ ವಾಪಸ್ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ದೇಶದ ವಿಪಕ್ಷಗಳು ಸಂಸತ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿವೆ ಎಂದು ಆರೋಪಿಸಿ ಯುನ್ ಈ ಕ್ರಮ ಕೈಗೊಂಡಿದ್ದರು. ನಾಲ್ಕು ದಶಕಗಳಲ್ಲಿ ದಕ್ಷಿಣ ಕೊರಿಯಾದ ಮೊದಲ ಸೇನಾಡಳಿತ ಕಾನೂನನ್ನು (Martial Law) ಹೇರಲು ಯುನ್‌ನ ಆಘಾತಕಾರಿ ಯತ್ನವು ದೇಶವನ್ನು ಪ್ರಕ್ಷುಬ್ಧತೆಗೆ ತಳ್ಳಿತು.
ಪರಮಾಣು-ಸಜ್ಜಿತ ಉತ್ತರದಿಂದ ರಕ್ಷಿಸಲು ದಕ್ಷಿಣ ಕೊರಿಯಾದಲ್ಲಿ ಅಮೆರಿಕ ಸುಮಾರು 30,000 ಸೈನಿಕರನ್ನು ಇರಿಸಿದೆ. 2022 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಪ್ರದಾಯವಾದಿ ರಾಜಕಾರಣಿ ಮತ್ತು ಮಾಜಿ ಸ್ಟಾರ್ ಪಬ್ಲಿಕ್ ಪ್ರಾಸಿಕ್ಯೂಟರ್ ಯುನ್ ಅವರ ಭವಿಷ್ಯವನ್ನು ದೇಶದಲ್ಲಾಗುತ್ತಿರುವ ಬೆಳವಣಿಗೆಗಳು ಅಪಾಯಕ್ಕೆ ಸಿಲುಕಿಸಿವೆ. ಇದನ್ನೂ ಓದಿ: ಒತ್ತೆಯಾಳುಗಳನ್ನ ಬಿಡುಗಡೆ ಮಾಡದಿದ್ರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತೆ: ಹಮಾಸ್‌ಗೆ ಟ್ರಂಪ್ ವಾರ್ನಿಂಗ್