ಸಿಯೋಲ್: ತನ್ನ ಅಣ್ಣ-ಅತ್ತಿಯು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ್ದಕ್ಕಾಗಿ ದಕ್ಷಿಣ ಕೊರಿಯಾದ ಫುಟ್‌ಬಾಲ್ (South Korean Footballer) ಆಟಗಾರ ಹ್ವಾಂಗ್ ಉಯಿ-ಜೊ ಕ್ಷಮೆ ಕೇಳಿದ್ದಾರೆ.
31 ವರ್ಷ ವಯಸ್ಸಿನ ಫುಟ್‌ಬಾಲರ್ 2022ರ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಈ ನಾಲ್ಕು ಸಂದರ್ಭದಲ್ಲಿ ಅವರಿಬ್ಬರ ಒಪ್ಪಿಗೆಯಿಲ್ಲದೇ ಖಾಸಗಿ ಕ್ಷಣಗಳನ್ನು ವೀಡಿಯೋ ಚಿತ್ರೀಕರಣ ಮಾಡಿದ್ದಾನೆ ಎಂದು ಸಿಯೋಲ್ ಕೋರ್ಟ್‌ನ (Seoul Court) ಪ್ರಾಸಿಕ್ಯೂಟರ್ ಹೇಳಿದ್ದಾರೆ. ಇದನ್ನೂ ಓದಿ: ಕಣ್ತೆರೆದ ನ್ಯಾಯದೇವತೆ – ಇಲ್ಲಿಯವರೆಗೂ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆರವುಗೊಳಿಸಿದ ಸುಪ್ರೀಂ ಕೋರ್ಟ್
Advertisement
Advertisement
ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಿಯೋಲ್ ಕೋರ್ಟ್‌ನಲ್ಲಿ ಪ್ರಾಸಿಕ್ಯೂಟರ್ ಫುಟ್‌ಬಾಲ್ ಆಟಗಾರನಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು. ಈ ವೇಳೆ ವೀಡಿಯೋ ಚಿತ್ರೀಕರಿಸಿದ್ದಕ್ಕಾಗಿ ಫುಟ್‌ಬಾಲ್ ಪಟು ಕ್ಷಮೆಯಾಚಿಸಿದ್ದಾನೆ. ಇದನ್ನೂ ಓದಿ: ಬೆಳಗಾವಿ| ತಂದೆಯ ಸಾವಿನ ಬಗ್ಗೆ ಮಗಳ ಅನುಮಾನ – ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ
Advertisement
ವೀಡಿಯೋ ಹಿಂದಿನ ರಹಸ್ಯ ಏನು?
ಕಳೆದ ತಿಂಗಳಷ್ಟೇ ಹ್ವಾಂಗ್, ಟರ್ಕಿಯ ಅಲನ್ಯಾಸ್ಪೋರ್‌ಗೆ ಹೋಗಲು ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್ ಅರಣ್ಯದಿಂದ ಹೊರಟಿದ್ದರು. ಅಲ್ಲಿಗೆ ಹೋದ ನಂತರ ತನ್ನ ಅತ್ತಿಗೆಗೆ ಬ್ಲ್ಯಾಕ್‌ಮೇಲ್ ಮಾಡಲೆಂದು ಪತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯಗಳನ್ನು ರಹಸ್ಯವಾಗಿ ವೀಡಿಯೋ ಮಾಡಿದ್ದ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ಹೊರತಾಗಿಯೂ ಆಕೆಯ ವಿರುದ್ಧ ಹ್ವಾಂಗ್ ಮೊಕದ್ದಮ್ಮೆ ಹೂಡಿದ ನಂತರ ಆಕೆಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
Advertisement
ಬಳಿಕ ಬ್ಲ್ಯಾಕ್‌ಮೇಲ್ ಆರೋಪದ ಮೇಲೆ ವಕೀಲರು ಪ್ರಕರಣ ಮುಂದುವರಿಸಿದರು. ಕೋರ್ಟ್ ವಿಚಾರಣೆ ವೇಳೆ ಹ್ವಾಂಗ್ ತಾನೇ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೇ ಭವಿಷ್ಯದಲ್ಲಿ ನಾನು ಯಾವುದೇ ತಪ್ಪು ಮಾಡುವುದಿಲ್ಲ. ನನ್ನ ಕ್ರಮಗಳಿಂದ ಸಂತ್ರಸ್ತರಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಫುಟ್ಬಾಲ್ ಆಟಗಾರನಾಗಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ಕೇಳಿಕೊಂಡರು.
ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಸಿಯೋಲ್ ಕೋರ್ಟ್ ಡಿಸೆಂಬರ್ 18ಕ್ಕೆ ವಿಚಾರಣೆ ಮುಂದೂಡಿದೆ.