ಸಿಯೋಲ್: ಚರ್ಚ್‍ನಲ್ಲಿ 8 ಜನ ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದ ಧರ್ಮ ಗುರುವಿಗೆ ದಕ್ಷಿಣ ಕೊರಿಯಾ ಕೋರ್ಟ್ 15 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಸಿಯೋಲ್‍ನ ಮಮಿನ್ ಸೆಂಟ್ರಲ್ ಚರ್ಚ್‍ನ ಲೀ ಜೇ ರಾಕ್ (75) ಜೈಲು ಶಿಕ್ಷೆಗೆ ಗುರಿಯಾದ ಧರ್ಮಗುರು. ಇತನು ಕ್ರಿಶ್ಚಿಯನ್ನರು ನಡೆಸುತ್ತಿದ್ದ ಸಂಸ್ಥೆಯ ಮುಖ್ಯಸ್ಥನಾಗಿದ್ದು, 1.30 ಲಕ್ಷ ಅನುಯಾಯಿಗಳನ್ನು ಹೊಂದಿದ್ದ. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪದಡಿ ಮೇ ತಿಂಗಳಿನಲ್ಲಿ ಬಂಧಿಸಲಾಗಿದ್ದ ಲೀ ಜೇ ರಾಕ್‍ಗೆ ಬುಧವಾರ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
Advertisement
ಕೆಲಸ ಮಾಡುವಂತೆ ದೇವರಿಂದ ಆದೇಶ ಬಂದಿತ್ತು. ನಾನು ದೇವಮಾನವನಾಗಿದ್ದು ಹೀಗಾಗಿ ಮಾಡಿರುವೆ ಎಂದು ಲೀ ಜೇ ರಾಕ್, ಕೋರ್ಟ್ ಆದೇಶ ಬಳಿಕ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.
Advertisement
Advertisement
ಏನಿದು ಪ್ರಕರಣ?:
ಲೀ ಜೇ ರಾಕ್ ತನ್ನ ಅಪಾರ್ಟಮೆಂಟ್‍ಗೆ ಬರುವಂತೆ ಹಾಗೂ ಲೈಂಗಿಕ ಕ್ರಿಯೆಗೆ ಒಳಗಾಗುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಮೂರು ಜನರ ಮಹಿಳೆ ದೂರು ನೀಡಿದ್ದರು. ನಾನು ಅವನ ವಿರುದ್ಧ ನಿಲ್ಲಲು ಸಾಧ್ಯವಾಗುತ್ತಿಲ್ಲ. ಅವನು ರಾಜ, ದೇವರು ಇದ್ದಂತೆ ಎಂದು ಸಂತ್ರಸ್ತ ಮಹಿಳೆಯೊಬ್ಬಳು ಭಯದಿಂದಲೇ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದಳು. ಈ ಮಹಿಳೆ ಹುಟ್ಟಿನಿಂದಲೇ ಚರ್ಚ್‍ನಲ್ಲಿ ವಾಸ್ತವ್ಯ ಪಡೆದಿದ್ದಳು.
Advertisement
ಒಟ್ಟು 8 ಜನ ಸಂತ್ರಸ್ತ ಮಹಿಳೆಯರು ಲೀ ಜೇ ರಾಕ್ ವಿರುದ್ಧ ಧ್ವನಿ ಎತ್ತಿದ್ದರು. ಆರೋಪ ಬಂದ ಹಿನ್ನೆಲೆಯಲ್ಲಿ ಆತನನ್ನು ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು. ಆರೋಪಿಯು ಸಂತ್ರಸ್ತ ಮಹಿಳೆಯರ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಹಾಗೂ ಕಿರುಕುಳ ನೀಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಕೋರ್ಟ್ ವಿಚಾರಣೆ ವೇಳೆ ಧರ್ಮಗುರುವಿನ ಮೇಲಿನ ಆರೋಪ ಸಾಬೀತಾಗಿತ್ತು.
ನಾನು ದೇವಮಾನವ, ಪವಿತ್ರವಾದ ವ್ಯಕ್ತಿ, ಪರಿಶುದ್ಧ ಆತ್ಮ, ದೈವಿಕ ಶಕ್ತಿಯನ್ನು ಹೊಂದಿರುವುದಾಗಿ ಹೇಳಿಕೊಂಡು ಚರ್ಚ್ ಪ್ರಾರ್ಥನೆಗೆ ಬಂದು ಭಕ್ತರಿಗೆ ಮೋಸ ಮಾಡುತ್ತಿದ್ದ ಎಂದು ವರದಿಯಾಗಿದೆ.
ಮಹಿಳೆಯ ಚರ್ಚ್ ಪ್ರವೇಶವನ್ನು ತಡೆದಿದ್ದಕ್ಕೆ ಲೈಂಗಿಕ ದೌರ್ಜನ್ಯ ಕೇಸ್ ಹಾಕಲಾಗಿದೆ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಆರೋಪ ಸಾಬೀತು ಆಗುತ್ತಿದ್ದಂತೆ ಕೋರ್ಟ್ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv