ಸಿಯೋಲ್: ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಧರಿಸುವುದು ಕಡ್ಡಾಯ. ಜನ ಕೂಡ ವಿವಿಧ ಮಾಸ್ಕ್‌ಗಳನ್ನು ಧರಿಸಿ ಕೊರೊನಾದಿಂದ ಪಾರಾಗುತ್ತಿದ್ದಾರೆ. ಈ ನಡುವೆ ಇದೀಗ ಮಾರ್ಕೆಟ್‍ನಲ್ಲಿ ʼಕೊಸ್ಕ್ʼ ಮಾಸ್ಕ್ ಸದ್ದು ಮಾಡುತ್ತಿದೆ.
Advertisement
ಕೊರೊನಾ ಬರದಂತೆ ತಡೆಗಟ್ಟಲು ಪ್ರತಿಯೊಬ್ಬರು ವಿಶ್ವದಾದ್ಯಂತ ಮಾಸ್ಕ್ ಧರಿಸುತ್ತಿದ್ದಾರೆ. ಕೆಲ ದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇನ್ನೂ ಕೆಲ ದೇಶಗಳಲ್ಲಿ ಮಾಸ್ಕ್‌ನಿಂದ ಜನಸಾಮಾನ್ಯರಿಗೆ ಮುಕ್ತಿ ಸಿಕ್ಕಿದೆ. ಮಾಸ್ಕ್ ಕೂಡ ಹಾಗೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಮಾಸ್ಕ್‌ಗಳು ರಾರಾಜಿಸುತ್ತಿವೆ. ಕೊರೊನಾ ವಿರುದ್ಧ N95 ಮಾಸ್ಕ್ ಧರಿಸಿದರೆ ಉತ್ತಮವೆಂದು ಸರ್ಕಾರ ತಿಳಿಸಿದರು ಕೂಡ ಜನ ಬಟ್ಟೆ ಮಾಸ್ಕ್ ಮತ್ತು ಯೂಸ್ ಆ್ಯಂಡ್ ಥ್ರೋ ಮಾಸ್ಕ್‌ಗಳಿಂದ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಇದನ್ನೂ ಓದಿ: 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ: ಕೇಂದ್ರ
Advertisement
Advertisement
ಕೆಲ ಮಾಸ್ಕ್‌ಗಳು ಮೂಗು ಮತ್ತು ಬಾಯಿ ಜೊತೆ ಮುಖಕ್ಕೆ ಆವರಿಸಿಕೊಂಡಿರುವುದರಿಂದ ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಮಾಸ್ಕ್ ಎಂಟ್ರಿ ಕೊಡುತ್ತಿದೆ. ಇದೀಗ ಹೊಸ ಸೇರ್ಪಡೆ ಎಂಬಂತೆ ಕೊಸ್ಕ್ ಮಾಸ್ಕ್ ಇದೀಗ ಹೊಸದಾಗಿ ಬಂದಿದೆ. ಇದನ್ನೂ ಓದಿ: ಹಿಜಬ್‍ಗೆ ಬ್ರೇಕ್ – ಏಕರೂಪ ವಸ್ತ್ರಸಂಹಿತೆ ಜಾರಿಮಾಡಿದ ಸರ್ಕಾರ
Advertisement
ಕೊಸ್ಕ್ ಮಾಸ್ಕ್‌ನ ವಿಶೇಷತೆ:
ಸೌತ್ ಕೊರಿಯಾದ ಮಾಸ್ಕ್ ತಯಾರಿಕಾ ಕಂಪನಿಯೊಂದು ಕೊಸ್ಕ್ ಮಾಸ್ಕ್‌ನ್ನು ತಯಾರಿಸಿದೆ. ಪ್ರಸ್ತುತ ಮಾಸ್ಕ್‌ಗಳನ್ನು ಧರಿಸಿದ ಬಳಿಕ ಆಹಾರ, ನೀರು ಕುಡಿಯಬೇಕೆಂದರೆ ಮಾಸ್ಕ್‌ಗಳನ್ನು ತೆಗೆಯುವ ಅನಿವಾರ್ಯತೆ ಇದೆ. ಆದರೆ ಕೊಸ್ಕ್ ಮಾಸ್ಕ್‌ನ್ನು ನೀವು ಒಮ್ಮೆ ಧರಿಸಿದರೆ ಆಹಾರ ತಿನ್ನಲು, ನೀರು ಕುಡಿಯಲು ತೆಗೆಯಬೇಕೆಂದಿಲ್ಲ. ಬದಲಾಗಿ ಇದನ್ನು ಮಡಚಿಕೊಳ್ಳುವಂತಹ ವಿಧಾನದಲ್ಲಿ ಈ ಮಾಸ್ಕ್‌ನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಇದನ್ನು ಧರಿಸಿಕೊಂಡೇ ಆಹಾರವನ್ನು ಸೇವಿಸಬಹುದಾಗಿದೆ. ಈ ಮಾಸ್ಕ್‌ಗೆ ಕೋಸ್ಕ್ ಎಂದು ಹೆಸರಿಡಲಾಗಿದ್ದು, ಇದು ಮೂಗನ್ನು ಮಾತ್ರ ಕವರ್ ಮಾಡುತ್ತದೆ. ಹಾಗಾಗಿ ಮಾಸ್ಕ್‌ನಿಂದ ಉಂಟಾಗುತ್ತಿದ್ದ ಕಿರಿಕಿರಿಗೆ ಮುಕ್ತಿ ಸಿಕ್ಕಂತಾಗಿದೆ. ಅಲ್ಲದೇ ಇದೀಗ ಸಾಮಾಜಿಕ ಜಾಲತಾಣದಲ್ಲೂ ಕೂಡ ಕೊಸ್ಕ್ ಮಾಸ್ಕ್ ಸಖತ್ ಟ್ರೆಂಡ್ ಸೃಷ್ಟಿಸುತ್ತಿದೆ.