ಸಿಯೋಲ್: ದಕ್ಷಿಣ ಕೊರಿಯಾದ (South Korea) ರಾಜಧಾನಿ ಸಿಯೋಲ್‌ನಲ್ಲಿ (Seoul) ಶನಿವಾರ ನಡೆದ ಹ್ಯಾಲೋವೀನ್ (Halloween) ದುರಂತದ ಆಘಾತದಿಂದ ಅಲ್ಲಿನ ಜನತೆ ಇನ್ನೂ ಹೊರ ಬಂದಿಲ್ಲ. ಅಷ್ಟರಲ್ಲಾಗಲೇ ಘಟನೆಯಲ್ಲಿ ಮೃತಪಟ್ಟವರ ಗುಂಪಿನಲ್ಲಿ ಖ್ಯಾತ ಗಾಯಕ ಹಾಗೂ ನಟನೊಬ್ಬನೂ ಸೇರಿದ್ದ ಎಂಬ ಸುದ್ದಿ ತಿಳಿದು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಯೋಲ್‌ನ ಇಟಾವಾನ್ (Itaewon) ಜಿಲ್ಲೆಯಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ (Stampede) ನಟ, ಗಾಯಕ ಲೀ ಜಿಹಾನ್ (Lee Jihan) ಮೃತಪಟ್ಟಿರುವುದಾಗಿ ದೃಢವಾಗಿದೆ. 24 ವರ್ಷದ ತಾರೆಯ ಹಠಾತ್ ನಿಧನಕ್ಕೆ ಅವರ ಕುಟುಂಬ, ಅಭಿಮಾನಿಗಳು ಸೇರಿದಂತೆ ಅಲ್ಲಿನ ಜನತೆ ಸಂತಾಪ ವ್ಯಕ್ತಪಡಿಸಿದ್ದಾರೆ.
Advertisement
Advertisement
ಲೀ ಜಿಹಾನ್ ಅವರು ದಕ್ಷಿಣ ಕೊರಿಯಾದ ಗಾಯನ ಸ್ಪರ್ಧೆಯ ಪ್ರೊಡ್ಯೂಸ್ 101 ರಲ್ಲಿ ಮಾಜಿ ಸ್ಪರ್ಧಿಯಾಗಿದ್ದಾರೆ. ಅವರು ಟುಡೇ ವಾಸ್ ಅನದರ್ ನಾಮ್ ಹ್ಯುನ್ ಡೇ ಮೂಲಕ ನಟನಾ ಕ್ಷೇತಕ್ಕೆ ಪಾದಾರ್ಪಣೆ ಮಾಡಿದರು. ವರದಿಗಳ ಪ್ರಕಾರ, ಲೀ ಜಿ ಹಾನ್ ಅವರ ಅಂತ್ಯಕ್ರಿಯೆ ನವೆಂಬರ್ 1 ರಂದು ನಡೆಯಲಿದೆ. ಇದನ್ನೂ ಓದಿ: ಮಗಳಿಗೆ ಗಾಯ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಜೀವಂತ ಏಡಿಯನ್ನೇ ತಿಂದ ವ್ಯಕ್ತಿ ಆಸ್ಪತ್ರೆ ಸೇರಿದ
Advertisement
2 ವರ್ಷದ ಕೋವಿಡ್ ನಿರ್ಬಂಧವನ್ನು ತೆಗೆದು ಹಾಕಿದ ಬಳಿಕ ಇದು ದಕ್ಷಿಣ ಕೊರಿಯಾದ ಮೊದಲ ಹ್ಯಾಲೋವೀನ್ ಆಚರಣೆಯಾಗದೆ. ಶನಿವಾರ ಹಬ್ಬದ ವಾತಾವರಣದಲ್ಲಿ ಇಟಾವಾನ್‌ನ ಕಿರಿದಾದ ಒಂದು ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿ, ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ ಹೆಚ್ಚಿನವರು ಉಸಿರುಗಟ್ಟಿ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅದರಲ್ಲೂ ಮೃತಪಟ್ಟವರಲ್ಲಿ ಹೆಚ್ಚಿನವರು 20 ವರ್ಷದ ಆಸುಪಾಸಿನವರು ಎಂಬುದು ಇನ್ನಷ್ಟು ಆಘಾತ ತಂದಿದೆ.
Advertisement
ವರದಿಗಳ ಪ್ರಕಾರ ಸಿಯೋಲ್‌ನ ಹ್ಯಾಲೋವೀನ್ ದುರಂತದಲ್ಲಿ 151 ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್ ರಾಷ್ಟ್ರೀಯ ಶೋಕಾಚರಣೆಯ ಅವಧಿಯನ್ನು ಘೋಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ರಂಭಾ ಕಾರು ಭೀಕರ ಅಪಘಾತ : ರಂಭಾ ಪುತ್ರಿಗೆ ತೀವ್ರ ಗಾಯ