ಸಿಯೋಲ್: ನಾಯಿ ಮಾಂಸ (Dog Meat) ಸೇವನೆ ತೆಗೆದುಹಾಕುವ ಮಸೂದೆಯನ್ನು ದಕ್ಷಿಣ ಕೊರಿಯಾ (South Korea) ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ದಕ್ಷಿಣ ಕೊರಿಯಾದ ಸಂಸತ್ತು ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಈ ಮಸೂದೆಯನ್ನು ಕಾನೂನಾಗಿ ಜಾರಿಗೆ ತರಲು ಪ್ರತಿಜ್ಞೆ ಮಾಡಿದ್ದರು. ಸರ್ವಾನುಮತದ ಮತದ ಮೂಲಕ ನಾಯಿ ಮಾಂಸ ನಿಷೇಧಿಸುವ ಮಸೂದೆ ಅಂಗೀಕಾರಗೊಂಡಿದೆ. ಇದನ್ನೂ ಓದಿ: ಭಾರತಕ್ಕೆ ಬರಲು ಮುಂದಾದ ಮಾಲ್ಡೀವ್ಸ್ ಅಧ್ಯಕ್ಷ – ವಿಪಕ್ಷದಿಂದ ಅವಿಶ್ವಾಸ ನಿರ್ಣಯ ಸಾಧ್ಯತೆ
Advertisement
Advertisement
ಆಹಾರದ ಉದ್ದೇಶಕ್ಕಾಗಿ ನಾಯಿಯನ್ನು ಕಡಿಯುವುದು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 19.12 ಲಕ್ಷ ರೂ. (30 ಮಿಲಿಯನ್ ವಾನ್) ವರೆಗೆ ದಂಡ ವಿಧಿಸುತ್ತದೆ. ನಾಯಿ ಸಂತಾನಾಭಿವೃದ್ಧಿ ಮಾಡುವುದು ಅಥವಾ ಆಹಾರಕ್ಕಾಗಿ ವಿತರಿಸುವುದು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ.
Advertisement
ಮೂರು ವರ್ಷಗಳ ಗ್ರೇಸ್ ಅವಧಿಯ ನಂತರ 2027 ರಲ್ಲಿ ಕಾನೂನು ಜಾರಿಯಾಗಲಿದೆ. ನಾಯಿ ಮಾಂಸ ಉದ್ಯಮದಲ್ಲಿರುವವರಿಗೆ ವ್ಯಾಪಾರ ಬದಲಾಯಿಸಲು ಸಹಾಯ ಮಾಡಲು ಸಬ್ಸಿಡಿ ನೀಡಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಯೂನ್ ತನ್ನ ಅಧ್ಯಕ್ಷೀಯ ಪ್ರಚಾರದಲ್ಲಿ ನಾಯಿ ಮಾಂಸದ ಸೇವನೆಯನ್ನು ಕೊನೆಗೊಳಿಸಲು ವಾಗ್ದಾನ ಮಾಡಿದ್ದರು. ಇದನ್ನೂ ಓದಿ: ಲೆಬನಾನ್ ಗುರಿಯಾಗಿಸಿ ಇಸ್ರೇಲ್‌ನ ಭಾರೀ ದಾಳಿಯಲ್ಲಿ ಹಿಜ್ಬುಲ್ಲಾ ಸೀನಿಯರ್ ಕಮಾಂಡರ್ ಬಲಿ
Advertisement
ನಾಯಿ ಮಾಂಸ ಸೇವಿಸುವ ಹಲವು ರಾಷ್ಟ್ರಗಳಲ್ಲಿ ದಕ್ಷಿಣ ಕೊರಿಯಾ ಕೂಡ ಒಂದು. ಪ್ರಾಣಿಗಳನ್ನು ಬ್ಲಡ್ಜಿಯನಿಂಗ್, ನೇಣು ಮತ್ತು ವಿದ್ಯುದಾಘಾತದ ಮೂಲಕ ಕೊಲ್ಲುವುದು ಸೇರಿದಂತೆ ವ್ಯಾಪಾರದ ಭಾಗವಾಗಿ ಮಾಡಿಕೊಂಡಿದ್ದಕ್ಕೆ ಅಂತರರಾಷ್ಟ್ರೀಯ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು.
ಸಾಕುಪ್ರಾಣಿಗಳ ಮಾಲೀಕತ್ವ ಬೆಳೆದಿದೆ. ಸಾರ್ವಜನಿಕರು ನಾಯಿ ಮಾಂಸದಿಂದ ದೂರ ಸರಿದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸೇವನೆಯು ತೀವ್ರವಾಗಿ ಕುಸಿಯುತ್ತಿದೆ. ಶ್ವಾನಗಳನ್ನು ಸಾಕುತ್ತಿದ್ದ ರೈತರು ಮತ್ತು ರೆಸ್ಟೋರೆಂಟ್ ಮಾಲೀಕರು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅವರಿಗೆ ಹಿನ್ನಡೆಯಾಗಿದೆ. ಇದನ್ನೂ ಓದಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ – ದಾಖಲೆ ಜಯದೊಂದಿಗೆ ಸತತ 5ನೇ ಬಾರಿಗೆ ಮರು ಆಯ್ಕೆ
ದಕ್ಷಿಣ ಕೊರಿಯಾದ ಸರ್ಕಾರದ ಅಂಕಿಅಂಶಗಳ ಪ್ರಕಾರ, ಪ್ರಸ್ತುತ 1,600 ರೆಸ್ಟೋರೆಂಟ್‌ಗಳಲ್ಲಿ ನಾಯಿ ಮಾಂಸವನ್ನು ಖಾದ್ಯವಾಗಿ ನೀಡಲಾಗುತ್ತಿದೆ. ಕೆಲವು 1,150 ನಾಯಿ ಸಾಕಣೆ ಕೇಂದ್ರಗಳು ದೇಶದಲ್ಲಿ ಉದ್ಯಮ ನಡೆಸುತ್ತಿವೆ.