ಸಿಯೋಲ್: ಹಠಾತ್ ಬೆಳವಣಿಗೆಯಲ್ಲಿ ದಕ್ಷಿಣ ಕೊರಿಯಾದ (South Korea) ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಲ್ (Yoon Suk Yeol) ಅವರು ಮಂಗಳವಾರ ರಾತ್ರಿ ದೂರದರ್ಶನ ಭಾಷಣದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು (Martial Law) ಘೋಷಣೆ ಮಾಡುವುದಾಗಿ ಪ್ರಕಟಿಸಿದರು.
Advertisement
Military helicopters landing on South Korean parliament roof after martial law declared…
I thought South Korea was the good one.pic.twitter.com/ySXz0RUIh5
— Geiger Capital (@Geiger_Capital) December 3, 2024
Advertisement
ಉತ್ತರ ಕೊರಿಯಾದ (North Korea) ಕಮ್ಯುನಿಸ್ಟ್ ಪಡೆಗಳ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ಜನರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಲೂಟಿ ಮಾಡುವ ರಾಜ್ಯ ವಿರೋಧಿ ಅಂಶಗಳನ್ನು ನಿರ್ಮೂಲನೆ ಮಾಡಲು ತುರ್ತು ಸಮರ ಕಾನೂನನ್ನು ಘೋಷಿಸುತ್ತೇನೆ ಎಂದು ಯೂನ್ ಸುಕ್ ಯೆಲ್ ತಮ್ಮ ಭಾಷಣದಲ್ಲಿ ತಿಳಿಸಿದರು.
Advertisement
ಜನರ ಜೀವನೋಪಾಯವನ್ನು ಪರಿಗಣಿಸದೆ, ವಿರೋಧ ಪಕ್ಷವು ಕೇವಲ ದೋಷಾರೋಪಣೆ ಮಾಡುತ್ತಿದೆ. ವಿಶೇಷ ತನಿಖೆಗಳು ಮತ್ತು ತಮ್ಮ ನಾಯಕನನ್ನು ನ್ಯಾಯದಿಂದ ರಕ್ಷಿಸುವ ಸಲುವಾಗಿ ಆಡಳಿತವನ್ನು ನಿಷ್ಕ್ರಿಯಗೊಳಿಸಿದೆ ಎಂದು ದೂರಿದರು.
Advertisement
🇰🇷 SOUTH KOREA UNDER MARTIAL LAW—FIRST TIME SINCE 1980
In a historic and deeply unsettling move, South Korean President Yoon Suk Yeol has declared martial law, citing threats of “anti-state” activities by opposition leaders.
This is the first such declaration since the… pic.twitter.com/9Covz5MFwO
— Mario Nawfal (@MarioNawfal) December 3, 2024
ದಕ್ಷಿಣ ಕೊರಿಯಾದಲ್ಲಿ 1980 ರ ನಂತರ ಮೊದಲ ಬಾರಿಗೆ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ಮಿಲಿಟರಿ ಆಡಳಿತದ ಸಮಯದಲ್ಲಿ ಸಂಸತ್ತು ಮತ್ತು ರಾಜಕೀಯ ಪಕ್ಷಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮಾಧ್ಯಮಗಳು ಮಿಲಿಟರಿ ನಿಯಂತ್ರಣದಲ್ಲಿರುತ್ತಾರೆ ಎಂದು ವರದಿಯಾಗಿದೆ.