ಶ್ರೀಹರಿಕೋಟಾ: ಕಡಿಮೆ ವೆಚ್ಚದಲ್ಲಿ ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾಯಿಸಿದ್ದ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದೆ. ಸಾರ್ಕ್ ರಾಷ್ಟ್ರಗಳ ಬಾಂಧವ್ಯವೃದ್ಧಿಗೆ ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ಕೊಟ್ಟಿದ್ದ ‘ಸೌತ್ ಏಷ್ಯಾ ಸ್ಯಾಟಲೈಟ್’ ಅನ್ನು ಜಿಎಸ್‍ಎಲ್‍ವಿ ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಸಂಜೆ 4.57ಕ್ಕೆ ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಡಾವಣೆಯಾದ ಜಿಸ್ಯಾಟ್–9 ಉಪಗ್ರಹ ಯಶಸ್ವಿಯಾಗುತ್ತಿದ್ದಂತೆಯೇ ಇಸ್ರೋ ಮತ್ತು ಸಾರ್ಕ್ ರಾಷ್ಟ್ರಗಳ ಪ್ರತಿನಿಧಿಗಳು ಸಂಭ್ರಮಿಸಿದ್ರು. ಪಾಕಿಸ್ತಾನ ಹೊರತುಪಡಿಸಿ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ, ಅಫ್ಘಾನಿಸ್ತಾನ ಇದರ ಸೇವೆ ಪಡೆಯಲಿದೆ.
Advertisement
ಪ್ರಧಾನಿ ಮೋದಿ ಮಾತನಾಡಿ ಇದೊಂದು ಐತಿಹಾಸಿಕ ಹೆಜ್ಜೆ. ಸಾರ್ಕ್ ರಾಷ್ಟ್ರಗಳ ಪರಸ್ಪರ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದರೆ, ಸಾರ್ಕ್ ರಾಷ್ಟ್ರಗಳ ಪ್ರಧಾನಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡ್ರು.
Advertisement
ಉಪಗ್ರಹದ ವಿಶೇಷತೆ ಏನು?
235 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಉಪಗ್ರಹ 2,230 ಕೆ.ಜಿ ತೂಕ, 50 ಮೀಟರ್ ಉದ್ದ, 12 ವರ್ಷ ಕಾರ್ಯಾವಧಿಯನ್ನು ಹೊಂದಿದೆ. ಇಸ್ರೋದ ಐ-2ಕೆ ಬಸ್ ಮಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿಯಾಗಿದ್ದು, ದೂರಸಂಪರ್ಕ, ದೂರಸಂವಹನ, ಡಿಟಿಎಚ್, ವಿಸ್ಯಾಟ್, ದೂರಶಿಕ್ಷಣ ಮತ್ತು ಟೆಲಿ ಮೆಡಿಸಿನ್ ಕ್ಷೇತ್ರಕ್ಕೆ ಉಪಯೋಗವಾಗಲಿದೆ. ಅಷ್ಟೇ ಅಲ್ಲದೇ ಪ್ರಕೃತಿ ವಿಕೋಪ ಸಂಭವಿಸಿದಾಗ ಹಾಟ್‍ಲೈನ್ ಸಂಪರ್ಕ ಮೂಲಕ ಪರಿಹಾರ ಕಾರ್ಯಾಚರಣೆ ನಡೆಸಬಹುದಾಗಿದೆ.
Advertisement
ಮುಂದಿನ ವರ್ಷದ ಆರಂಭದಲ್ಲಿ ಇಸ್ರೋ ಚಂದ್ರಯಾನ-2 ಉಡಾವಣೆ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷರಾದ ಎಎಸ್ ಕಿರಣ್ ಕಿಮಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
India Successfully launches South Asia Satellite GSAT-9https://t.co/v9TC9LxCeF pic.twitter.com/QulTnOgttU
— ISRO (@isro) May 5, 2017
भारत???????? ने श्रीहरीकोटा स्थित सतीश धवन अंतरिक्ष केंद्र से किया #SouthAsiaSatellite जीसैट-9 का प्रक्षेपण, #SAARC के 6 देश इस परियोजना में शामिल pic.twitter.com/HyKegW2hRs
— दूरदर्शन न्यूज़ (@DDNewsHindi) May 5, 2017
Launch of South Asia Satellite is a first of its kind project with several benefits for our region. History was created with today's launch.
— Narendra Modi (@narendramodi) May 5, 2017
ISRO team has led from the front in developing the South Asia Satellite as per the regions' requirements and flawlessly launching it: PM
— PMO India (@PMOIndia) May 5, 2017