Connect with us

Latest

ಪ್ರಧಾನಿ ಮೋದಿ ಆಹ್ವಾನ ಸ್ವೀಕರಿಸಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ

Published

on

ನವದೆಹಲಿ: 2019ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಆಹ್ವಾನವನ್ನು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೊಸಾ ಒಪ್ಪಿಕೊಂಡಿದ್ದಾರೆ.

ಅಧ್ಯಕ್ಷ ಸಿರಿಲ್ ರಮಫೊಸಾ ಅವರ ಭಾರತ ಭೇಟಿಯ ಬಗ್ಗೆ ದಕ್ಷಿಣ ಆಫ್ರಿಕ ವಿದೇಶಾಂಗ ಕಾರ್ಯಾಲಯ ಶನಿವಾರ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದೆ. ಸಿರಿಲ್ ರಮಫೊಸಾರವರು ಭಾರತದ 2019ನೇ ಸಾಲಿನ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನವನ್ನು ಪುರಸ್ಕರಿಸಿದ್ದಾರೆ. ಹೀಗಾಗಿ ಜನವರಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಅವರು ಭಾರತಕ್ಕೆ ಆಗಮಿಸುತ್ತಾರೆಂದು ತಿಳಿಸಿದ್ದಾರೆ.

ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ದಕ್ಷಿಣ ಆಫ್ರಿಕ ಅಧ್ಯಕ್ಷರಿಗೆ ಭಾರತ ಸರ್ಕಾರ ಮನವಿಯನ್ನು ಮಾಡಿಕೊಂಡಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಅಧ್ಯಕ್ಷ ಸಿರಿಲ್ ರಮಫೋಸ ಭಾರತಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

ಯಾರಿದು ಸಿರಿಲ್ ರಮಫೊಸಾ?
ಆಫ್ರಿಕಾದ ಗಾಂಧಿ ಎಂದೇ ಹೆಸರು ಪಡೆದಿದ್ದ ನೆಲ್ಸನ್ ಮಂಡೇಲಾರ ಪರಮಾಪ್ತರೇ ಸಿರಿಲ್ ರಮಫೋಸ. ಇವರನ್ನು ದಕ್ಷಿಣ ಆಫ್ರಿಕಾದ ಮುಂದಿನ ಅಧ್ಯಕ್ಷೀಯ ಗಾದಿಗೆ ಸ್ವತಃ ನೆಲ್ಸನ್ ಮಂಡೇಲಾರೇ ಶಿಫಾರಸ್ಸು ಮಾಡಿದ್ದರು. ಸಿರಿಲ್ ರಮಫೋಸಾ ಕೂಡ ಗಾಂಧಿವಾದಿಗಳಾಗಿದ್ದಾರೆ. ಹೀಗಾಗಿ ಭಾರತ ಸರ್ಕಾರ ಸಿರಿಲ್ ಅವರಿಗೆ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಆಯ್ಕೆಮಾಡಿತ್ತು.

ಇದಕ್ಕೂ ಮುನ್ನ ಭಾರತ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಗಣರಾಜ್ಯೋತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡಿತ್ತು. ಆದರೆ ಟ್ರಂಪ್ ರವರ ಬಿಡುವಿನ ಸಮಯ ಸಿಗದ ಕಾರಣ, ಶ್ವೇತಭವನದ ಅಧಿಕಾರಿಗಳು ಭಾರತದ ಮನವಿಯನ್ನು ತಿರಸ್ಕರಿಸಿದ್ದವು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *