3ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು – ಸರಣಿ ವಶಪಡಿಸಿಕೊಂಡ ಆಫ್ರಿಕಾ

Public TV
1 Min Read
TEAM INDIA 1 2

ಕೇಪ್‍ಟೌನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಆಫ್ರಿಕಾ ಗೆದ್ದಿದೆ. ಈ ಮೂಲಕ 2-1 ಅಂತರದಿಂದ ಸರಣಿ ಗೆದ್ದು Freedom Trophy ಎತ್ತಿಹಿಡಿದಿದೆ.

FREEDOM TROPHY

ಟೀಂ ಇಂಡಿಯಾ, ಆಫ್ರಿಕಾ ಗೆಲುವಿಗೆ 212 ರನ್ ಟಾರ್ಗೆಟ್ ನೀಡಿತ್ತು. 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿದ್ದ ಆಫ್ರಿಕಾ ನಾಲ್ಕನೇ ದಿನದಾಟ ಆರಂಭಿಸಿತು. ಕೀಗನ್ ಪೀಟರ್ಸನ್ ಆಫ್ರಿಕಾ ಗೆಲುವಿಗೆ ಆರಂಭಿದಲ್ಲೇ ಸೂಚನೆ ನೀಡಿದರು. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಜೊತೆ 3ನೇ ವಿಕೆಟ್‍ಗೆ 54 ರನ್ (100 ಎಸೆತ) ಜೊತೆಯಾಟವಾಡಿ ಗೆಲುವಿಗೆ ಶ್ರಮಿಸಿದರು. ಇನ್ನೆನ್ನೂ ಶತಕ ಸಿಡಿಸುವ ಭರದಲ್ಲಿದ್ದ ಪೀಟರ್ಸನ್ 82 ರನ್ (113 ಎಸೆತ, 10 ಬೌಂಡರಿ) ಸಿಡಿಸಿ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

TEAM INDIA 2 2

ಪೀಟರ್ಸನ್ ವಿಕೆಟ್ ಬಿದ್ದ ಬಳಿಕ ಎಚ್ಚರಿಕೆಯಿಂದ ಆಡಿದ ತೆಂಬ ಬವುಮ ಅಜೇಯ  38 ರನ್ (58 ಎಸೆತ, 5 ಬೌಂಡರಿ) ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 41 ರನ್ (95 ಎಸೆತ, 3 ಬೌಂಡರಿ) ಸಿಡಿಸಿ, 63.3 ಓವರ್‌ಗಳಲ್ಲಿ 212 ರನ್‌ ಬಾರಿಸಿ ಆಫ್ರಿಕಾಗೆ 7 ವಿಕೆಟ್‌ಗಳ ಗೆಲುವು ತಂದು ಕೊಟ್ಟರು. ಇದನ್ನೂ ಓದಿ: ಶಾಕಿಂಗ್‌ ಡಿಆರ್‌ಎಸ್‌ ವಿಡಿಯೋಗೆ ಕೊಹ್ಲಿ ಕಿಡಿ – ರಿವ್ಯೂ ಸಕ್ಸಸ್‌ ಎಂದು ವಾಹಿನಿಯಿಂದ ಸಮರ್ಥನೆ

Keegan Petersen

ಭಾರತದ ಪರ ಬುಮ್ರಾ, ಶಮಿ ಮತ್ತು ಠಾಕೂರ್ ತಲಾ 1 ವಿಕೆಟ್ ಪಡೆದರು. ಸರಣಿಯುದ್ದಕ್ಕೂ ಅದ್ಭುತ ಬೌಲಿಂಗ್ ಮಾಡಿದ ಭಾರತದ ಬೌಲರ್‌ಗಳು ಸೈ ಎನಿಸಿಕೊಂಡರೆ, ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ಸೋಲು ಕಾಣಬೇಕಾಯಿತು.

Share This Article