ಕೇಪ್ ಟೌನ್: 3ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದಾಗಿ ಭಾರತ 223ಕ್ಕೆ ಆಲೌಟ್ ಆಗಿದೆ. ನಂತರ ಬ್ಯಾಟಿಂಗ್ ಆರಂಭಿಸಿದ ಆಫ್ರಿಕಾ 1 ವಿಕೆಟ್ ಕಳೆದುಕೊಂಡು 206 ರನ್ ಹಿನ್ನಡೆಯಲ್ಲಿದೆ.
Advertisement
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಆರಂಭಿಕ ಜೋಡಿ ಕೆ.ಎಲ್ ರಾಹುಲ್ 12 ರನ್ (35 ಎಸೆತ, 1 ಬೌಂಡರಿ) ಮತ್ತು ಮಯಾಂಕ್ ಅರ್ಗವಾಲ್ 15 ರನ್ (35 ಎಸೆತ, 3 ಬೌಂಡರಿ) ಸಿಡಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡಿತು. ಇದನ್ನೂ ಓದಿ: ವಯಸ್ಸಾಗುತ್ತಿದ್ದಂತೆ ಬರ್ತ್ ಡೇ ಶುಭಾಶಯಕ್ಕೆ ಮರು ಉತ್ತರ ಸಿಗುತ್ತಿಲ್ಲ: ರಾಹುಲ್ ದ್ರಾವಿಡ್
Advertisement
Advertisement
ನಂತರ ಒಂದಾದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ ಮೂರನೇ ವಿಕೆಟ್‍ಗೆ 62 ರನ್ (153 ಎಸೆತ) ಒಟ್ಟುಗೂಡಿಸಿತು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಪೂಜಾರ 43 ರನ್ (201 ಎಸೆತ, 12 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ನಂತರ ಬಂದ ಅಜಿಂಕ್ಯಾ ರಹಾನೆ 9 ರನ್ (12 ಎಸೆತ, 2 ಬೌಂಡರಿ) ಬಾರಿಸಿ ನಿರಾಸೆ ಮೂಡಿಸಿದರು. ನಂತರ ಜೊತೆಯಾದ ರಿಷಭ್ ಪಂತ್ ಮತ್ತು ಕೊಹ್ಲಿ ಇನ್ನೊಂದು ಅಲ್ಪಮೊತ್ತದ ಜೊತೆಯಾಟವಾಡಿದರು ಈ ಜೋಡಿ 5ನೇ ವಿಕೆಟ್‍ಗೆ 51 ರನ್ (113 ಎಸೆತ) ಒಟ್ಟುಗೂಡಿಸಿತು. ಈ ವೇಳೆ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಪಂತ್ 27 ರನ್ (50 ಎಸೆತ, 4 ಬೌಂಡರಿ) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಇತ್ತ ತಂಡಕ್ಕೆ ಏಕಾಂಗಿಯಾಗಿ ಹೋರಾಡಿದ ಕೊಹ್ಲಿ, ಅರ್ಧಶತಕ ಸಿಡಿಸಿ ಮಿಂಚಿದರು. ಇದನ್ನೂ ಓದಿ: ವಿವೋ ಐಪಿಎಲ್ ಅಂತ್ಯ ಇನ್ಮುಂದೆ ಟಾಟಾ ಐಪಿಎಲ್
Advertisement
ವೇಗಿಗಳ ವಿಕೆಟ್ ಬೇಟೆ:
ಇನ್ನೊಂದು ಕಡೆ ಆಫ್ರಿಕಾ ವೇಗಿಗಳು ಭಾರತದ ಬ್ಯಾಟ್ಸ್‌ಮ್ಯಾನ್‌ಗಳಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಅವಕಾಶ ಕಲ್ಪಿಸಿಕೊಡಲಿಲ್ಲ. ರವಿಚಂದ್ರನ್ ಅಶ್ವಿನ್ 2, ಶಾರ್ದೂಲ್ ಠಾಕೂರ್ 12, ಜಸ್ಪ್ರೀತ್ ಬುಮ್ರಾ 0, ಮೊಹಮ್ಮದ್ ಶಮಿ 7 ರನ್‍ಗಳಿಗೆ ಸುಸ್ತಾದರು. ಕೊನೆಯದಾಗಿ ಕೊಹ್ಲಿ ಕೂಡ 79 ರನ್ (201 ಎಸೆತ, 12 ಬೌಂಡರಿ, 1 ಸಿಕ್ಸ್) ಬಾರಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಉಮೇಶ್ ಯಾದವ್ ಅಜೇಯ 4 ರನ್ ಸೇರಿ ಭಾರತ ತಂಡ 77.3 ಓವರ್‌ಗಳಲ್ಲಿ 223 ರನ್‍ಗಳಿಗೆ ಆಲೌಟ್ ಆಯಿತು.
ಆಫ್ರಿಕಾ ಪರ ಮಾರಕ ದಾಳಿ ಸಂಘಟಿಸಿದ ಕಗಿಸೊ ರಬಾಡ 4 ಮತ್ತು ಮಾರ್ಕೊ ಜಾನ್ಸೆನ್ 3 ವಿಕೆಟ್ ಕಿತ್ತು ಮಿಂಚಿದರು. ಉಳಿದಂತೆ ಡುವೆನ್ನೆ ಒಲಿವಿ, ಕೇಶವ್ ಮಹರಾಜ್, ಲುಂಗಿ ಎನ್‍ಗಿಡಿ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಮೋರಿಸ್ ವಿದಾಯ
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ ಆರಂಭದಲ್ಲೇ ನಾಯಕ ಡೀನ್ ಎಲ್ಗರ್ 3 ರನ್ (16 ಎಸೆತ) ವಿಕೆಟ್ ಕಳೆದುಕೊಂಡಿದೆ. ದಿನದಾಟದ ಅಂತ್ಯಕ್ಕೆ 8 ಓವರ್‌ಗಳಲ್ಲಿ 17 ರನ್‍ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಮಕ್ರಾರ್ಮ್ ಅಜೇಯ 8 ರನ್ (20 ಎಸೆತ, 1 ಬೌಂಡರಿ) ಮತ್ತು ಕೇಶವ್ ಮಹರಾಜ್ 6 ರನ್ (12 ಎಸೆತ, 1 ಬೌಂಡರಿ) ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.