ಕರಾಚಿ: ಅಫ್ಘಾನಿಸ್ತಾನದ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ 3ನೇ ಪಂದ್ಯದಲ್ಲಿ ರಿಯಾನ್ ರಿಕಲ್ಟನ್ ಶತಕ, ಸಂಘಟಿತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ 107 ರನ್‌ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 315 ರನ್‌ಗಳನ್ನು ದಾಖಲಿಸಿ, ಅಫ್ಘಾನಿಸ್ತಾನಕ್ಕೆ 316 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಆದರೆ ಅಫ್ಘಾನ್ ತಂಡ 43.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 208 ರನ್ ಕಲೆಹಾಕಲು ಮಾತ್ರ ಶಕ್ತವಾಯಿತು.
Advertisement
ಅಫ್ಘಾನಿಸ್ತಾನ ಪರ ರಹಮತ್ ಶಾ 92 ಎಸೆತಗಳಲ್ಲಿ 1 ಸಿಕ್ಸರ್ 9 ಬೌಂಡರಿ ನೆರವಿನಿಂದ 90 ರನ್ ಕಲೆಹಾಕಿದರು. ಅದು ಬಿಟ್ಟರೆ ಉಳಿದ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶನ ಅಫ್ಘಾನ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು, ತಂಡಕ್ಕೆ ರಶೀದ್ ಖಾನ್, ಅಜ್ಮತುಲ್ಲಾ ಉಮರ್ಜೈ ತಲಾ 18 ರನ್‌ಗಳ ಕೊಡುಗೆ ಕೊಟ್ಟರು.
Advertisement
Advertisement
ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 3 ವಿಕೆಟ್ ಪಡೆದರೆ, ಲುಂಗಿ ಎನ್‌ಗಿಡಿ ಮತ್ತು ವಿಯಾನ್ ಮುಲ್ಡರ್ ತಲಾ 2 ವಿಕೆಟ್ ಪಡೆದರು. ಮಾರ್ಕೊ ಯಾನ್ಸನ್ ಮತ್ತು ಕೇಶವ್ ಮಹಾರಾಜ್ 1 ವಿಕೆಟ್ ಪಡೆದುಕೊಂಡರು.
Advertisement
ದಕ್ಷಿಣ ಆಫ್ರಿಕಾ ತಂಡದ ಪರ ರಿಯಾನ್ ರಿಕಲ್ಟನ್ 106 ಎಸೆತಗಳಲ್ಲಿ 103 ರನ್ ಗಳಿಸಿದರು. ಇವರಲ್ಲದೆ ಟೆಂಬಾ ಬವುಮಾ (58). ರಾಸ್ಸಿ ವ್ಯಾನ್ ಡೆರ್ ಡಸೆನ್ (52) ಮತ್ತು ಐಡೆನ್ ಮಾರ್ಕ್ರಾಮ್(52) ಅರ್ಧಶತಕ ಸಿಡಿಸಿ ದೊಡ್ಡ ಮೊತ್ತಕ್ಕೆ ನೆರವಾದರು.
ಟೋನಿ ಡಿ ಜಾರ್ಜಿ 11 ಎಸೆತಗಳಲ್ಲಿ 11 ರನ್ಗಳಿಸಿ ನಬಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ 2ನೇ ವಿಕೆಟ್‌ಗೆ ಆರಂಭಿಕ ರಿಕಲ್ಟನ್ ಜೊತೆಗೂಡಿದ ನಾಯಕ ಟೆಂಬ ಬವುಮಾ 129 ರನ್‌ಗಳ ಅದ್ಭುತ ಜೊತೆಯಾಟ ನೀಡಿದರು. ಈ ಜೋಡಿ 23.4 ಓವರ್ಗಳ ಕಾಲ ಬ್ಯಾಟಿಂಗ್ ತಂಡವನ್ನು ಸುಸ್ಥಿತಿಗೆ ತಂದರು. 76 ಎಸೆತಗಳನ್ನು ಎದುರಿಸಿದ ಬವುಮಾ 5 ಬೌಂಡರಿ ಸಹಿತ 58 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಅಫ್ಘಾನಿಸ್ತಾನದ ಪರ ಮೊಹಮ್ಮದ್ ನಬಿ 2 ವಿಕೆಟ್ ಪಡೆದರೆ, ಫಜ್ಲಹಾಕ್ ಫಾರೂಕಿ, ಅಜ್ಮತುಲ್ಲಾ ಒಮರ್ಜೈ ಮತ್ತು ನೂರ್ ಅಹ್ಮದ್ ತಲಾ 1 ವಿಕೆಟ್ ಪಡೆದರು.