ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ಶಿಕ್ಷಕನೊಬ್ಬ ಹಿಂದೂ ವಿದ್ಯಾರ್ಥಿಯ ಮಣಿಕಟ್ಟಿನಿಂದ ಧಾರ್ಮಿಕ ದಾರವನ್ನು ಕತ್ತರಿಸಿರುವ ಘಟನೆ ನಡೆದಿದೆ.
ಈ ಘಟನೆ ಕಳೆದ ವಾರ ಕ್ವಾಜುಲು-ನಟಾಲ್ ಪ್ರಾಂತ್ಯದ ಡ್ರೇಕೆನ್ಸ್‌ಬರ್ಗ್ ಮಾಧ್ಯಮಿಕ ಶಾಲೆಯಲ್ಲಿ ನಡೆದಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಶಾಲೆಯು ಸಾಂಸ್ಕೃತಿಕ ಅಥವಾ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿ, ಶಿಕ್ಷಕಿ ಹಿಂದೂ ವಿದ್ಯಾರ್ಥಿಯ ಮಣಿಕಟ್ಟಿನಿಂದ ಪವಿತ್ರ ದಾರವನ್ನು ಕತ್ತರಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭಾ (SAHMS) ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಅಧಿಕಾರಿಗಳಿಗೆ ಒತ್ತಾಯಿಸಿದೆ. ಹಿಂದೂ ವಿದ್ಯಾರ್ಥಿಯ ಧಾರ್ಮಿಕ ದಾರವನ್ನು ಕತ್ತರಿಸಿದ ಶಿಕ್ಷಕನ ಅಸಂವೇದನಾಶೀಲ ಮತ್ತು ಬೇಜವಾಬ್ದಾರಿ ಕ್ರಮವನ್ನು SAHMS ಬಲವಾಗಿ ಖಂಡಿಸುತ್ತದೆ ಎಂದು ಸಂಘಟನೆ ತಿಳಿಸಿದೆ.
ಶಾಲೆಯಲ್ಲಿ ನಡೆದ ಧಾರ್ಮಿಕ ಅಸಹಿಷ್ಣುತೆ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಂಘಟನೆ ಹೇಳಿದೆ.
ದಕ್ಷಿಣ ಆಫ್ರಿಕಾದ ಅತ್ಯುನ್ನತ ನ್ಯಾಯಾಂಗ ಪ್ರಾಧಿಕಾರವಾದ ಸಾಂವಿಧಾನಿಕ ನ್ಯಾಯಾಲಯವು ಶಾಲೆಯಿಂದ ಹಿಂದೂ ವಿದ್ಯಾರ್ಥಿನಿಯೊಬ್ಬಳು ಮೂಗುತಿಯನ್ನು ಧರಿಸುವುದನ್ನು ನಿಷೇಧಿಸಿತ್ತು. ಈ ಪ್ರಕರಣವನ್ನು ತ್ರಿಕಾಮ್ಜಿ ನೆನಪಿಸಿಕೊಂಡಿದ್ದಾರೆ.