ಚಂಡೀಗಢ: ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಹಿಂದಿರುಗಿದ 39 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ ಎಂದು ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 21ರಂದು ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಆಗಮಿಸಿದ ಪ್ರಯಾಣಿಕನಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂದಿತ್ತು. ಆದರೂ ಅವರನ್ನು ಹೋ ಕ್ವಾರಂಟೈನ್‍ಗೊಳಿಸಲಾಗಿತ್ತು. ಆದರೆ 7 ದಿನಗಳ ಬಳಿಕ ಇದೀಗ ವ್ಯಕ್ತಿಗೆ ವ್ಯಕ್ತಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ: ಮೂರು ಕೃಷಿ ಕಾನೂನು ವಾಪಸ್ – ಖುಷಿಯಾಗದ ಕಾಂಗ್ರೆಸ್ ನಾಯಕರು
Advertisement
Advertisement
ವ್ಯಕ್ತಿ ಜೊತೆಗೆ ಸಂಪರ್ಕ ಹೊಂದಿದ್ದ ಇಬ್ಬರನ್ನು ಮತ್ತು ಕುಟುಂಬಸ್ಥರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ಎಲ್ಲರಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ. ಕೊರೊನಾ ವೈರಸ್‍ನ ರೂಪಾಂತರ ತಳಿ ಓಮಿಕ್ರಾನ್ ಪತ್ತೆಹಚ್ಚಲು ಅಧಿಕಾರಿಗಳು ವ್ಯಕ್ತಿಯ ಮಾದರಿಗಳನ್ನು ದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್‍ಸಿಡಿಸಿ) ಕಳುಹಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ CEO ಜಾಕ್ ಡಾರ್ಸಿ ರಾಜೀನಾಮೆ – ಭಾರತೀಯ ಪರಾಗ್ ಅಗರ್‌ವಾಲ್‌ಗೆ ಒಲಿಯಿತು ಪಟ್ಟ
Advertisement
Advertisement
ಕೊರೊನಾ ರೂಪಾಂತರ ತಳಿಯನ್ನು ನಿಯಂತ್ರಿಸಲು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದ್ದು, ಅದರಂತೆ ಕೊರೊನಾ ಪಾಸಿಟಿವ್ ಬಂದವರಿಗೆ ಪ್ರತ್ಯೇಕವಾಗಿ ಕ್ವಾರಂಟೈನ್ ಗೊಳಿಸಲಾಗುತ್ತದೆ. ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು ಹೋಲ್ ಜೀನೋಮ್ ಸೀಕ್ವೆನ್ಸಿಂಗ್‍ಗಾಗಿ ದೆಹಲಿಯ ಎನ್‍ಸಿಡಿಸಿಗೆ ಕಳುಹಿಸಲಾಗುತ್ತದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.