ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್(ಕೆಝಡ್‌ಎನ್) ಪ್ರದೇಶದಲ್ಲಿ ಇತ್ತೀಚೆಗೆ ಭಾರೀ ಪ್ರವಾಹ ಉಂಟಾಗಿದ್ದು, ಸಾವಿನ ಸಂಖ್ಯೆ 443 ಕ್ಕೆ ಏರಿದೆ. ಭಾರೀ ಮಳೆಯ ಪ್ರವಾಹ ಹಾಗೂ ಮಣ್ಣಿನ ಕುಸಿತದಿಂದಾಗಿ ಹಲವರು ನಾಪತ್ತೆಯಾಗಿದ್ದಾರೆ.
Advertisement
ಪ್ರವಾಹದಿಂದಾಗಿ ಸಾವಿರಾರು ಜನರು ನಿರಾಶ್ರಿತರಾಗಿದ್ದು, ವಿದ್ಯುತ್ ಹಾಗೂ ನೀರಿಗಾಗಿ ಜನರು ಪರದಾಡುವಂತಾಗಿದೆ. ಆಫ್ರಿಕಾದ ಅತ್ಯಂತ ಜನನಿಬಿಡ ಬಂದರುಗಳಲ್ಲಿ ಒಂದಾದ ಡರ್ಬನ್‌ನಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಪ್ರವಾಹದಿಂದಾಗಿ ಸುಮಾರು 684.6 ಮಿಲಿಯನ್ ಡಾಲರ್(ಸುಮಾರು 5 ಸಾವಿರ ಕೋಟಿ ರೂ.)ಗೂ ಹೆಚ್ಚು ಮೂಲಸೌಕರ್ಯ ಹಾನಿಯಾಗಿದೆ ಎಂದು ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಹಂಪಿಯಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಪ್ರಚಾರ ಆರಂಭಿಸಿದ ಜೆಪಿ ನಡ್ಡಾ
Advertisement
Advertisement
ಪ್ರವಾಹದಿಂದಾಗಿ ಸಾವಿನ ಸಂಖ್ಯೆ 443 ಕ್ಕೆ ಏರಿದ್ದು, 63 ಜನರು ನಾಪತ್ತೆಯಾಗಿದ್ದಾರೆ ಎಂದು ಕ್ವಾಝುಲು-ನಟಾಲ್‌ನ ಪ್ರೀಮಿಯರ್ ಸಿಹ್ಲೆ ಜಿಕಲಾಲಾ ಹೇಳಿದ್ದಾರೆ. ಇದನ್ನೂ ಓದಿ: ಹನುಮಜಯಂತಿ ವೇಳೆ ಹಿಂಸಾಚಾರ – 4 ರಾಜ್ಯಗಳ 140 ಪುಂಡರು ಅರೆಸ್ಟ್
Advertisement