ಕೇಪ್‍ಟೌನ್: ಲಾಕ್‍ಡೌನ್ ಮಧ್ಯೆಯೂ ಮದುವೆಯಾಗುತ್ತಿದ್ದ ವಧು-ವರ ಸೇರಿ 40 ಜನ ಅತಿಥಿಗಳನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ಕೊರೊನಾ ವೈರಸ್ ಭೀತಿಯಿಂದ ವಿಶ್ವವ್ಯಾಪಿ ಹಲವಾರು ರಾಷ್ಟ್ರಗಳು ಲಾಕ್‍ಡೌನ್ ಆಗಿದೆ. ದಕ್ಷಿಣ ಆಫ್ರಿಕಾದಲ್ಲೂ ಕೊರೊನಾ ಪ್ರಕರಣಗಳು ಕಂಡು ಬಂದ ಕಾರಣ ಅಲ್ಲಿನ ಸರ್ಕಾರ ದೇಶವನ್ನೇ ಲಾಕ್‍ಡೌನ್ ಮಾಡಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದೆ. ಆದರೆ ಇದನ್ನೂ ಮೀರಿ ಮದುವೆಯಾಗುತ್ತಿದ್ದ ಜೋಡಿಯನ್ನು ಈಗ ಅರೆಸ್ಟ್ ಮಾಡಲಾಗಿದೆ.
Advertisement
A bride and groom were been arrested in Nseleni, northern KwaZulu-Natal, a short while ago. Police sources have confirmed to @TimesLIVE that the pastor, groomsmen and bridesmaids were also arrested for contravening regulations around the lockdown. @SundayTimesZA pic.twitter.com/4C0tru2fXr
— Orrin Singh (@orrin417) April 5, 2020
Advertisement
ಅರೆಸ್ಟ್ ಆದ ವಧು-ವರರನ್ನು ಜುಬುಲಾನಿ ಜುಲು ಮತ್ತು ನೊಮ್ತಂಡಜೊ ಮ್ಖೈಜ್ ಎಂದು ಗುರುತಿಸಲಾಗಿದೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ವಿಶ್ ನಾಯ್ಡೋ, ನಾವು ಮದುವೆ ಬಗ್ಗೆ ತಿಳಿದು ಅಲ್ಲಿಗೆ ಹೋದಾಗ, ಅಲ್ಲಿನ ಪಾದ್ರಿಯನ್ನು ಅರೆಸ್ಟ್ ಮಾಡಿದ್ದೇವೆ. ಪಾದ್ರಿ ಜೊತೆಗೆ ವಧು-ವರ ಮತ್ತು ಇಬ್ಬರು ಮನೆಯವರ ಅಥಿತಿಗಳನ್ನು ಸೇರಿ 40 ಜನರನ್ನು ಅರೆಸ್ಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
Advertisement
ನಾನು ಅರೆಸ್ಟ್ ಆದ ವಧು, ವರ ಇಬ್ಬರನ್ನು ವಿಚಾರಣೆ ಮಾಡಿದ್ದೇನೆ. ಆದರೆ ಅವರ ಬಳಿ ಲಾಕ್‍ಡೌನ್ ಮಧ್ಯೆಯೂ ಮದುವೆಯಾಗುವುದಕ್ಕೆ ಸೂಕ್ತ ಕಾರಣಗಳು ಇಲ್ಲ. ಅದರಿಂದ ಅವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೇಸ್ ಹಾಕಲಾಗಿದೆ. ನಂತರ ಅವರು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ ಎಂದು ನಾಯ್ಡೋ ಮಾಹಿತಿ ನೀಡಿದ್ದಾರೆ.
Advertisement
ಈ ವೇಳೆ ಪಾದ್ರಿಯವರಿಗೆ ಲಾಕ್‍ಡೌನ್ ಬಗ್ಗೆ ಅರಿವು ಇಲ್ಲ. ಸೋಂಕಿನ ಬಗ್ಗೆ ತಿಳಿ ಹೇಳಬೇಕಾದ ಅವರೇ ಮದುವೆ ಮಾಡಿಸುತ್ತಿದ್ದಾರೆ. ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಬಗ್ಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಆದರೆ ನಮ್ಮ ಜನರು ಇನ್ನೂ ಈ ವೈರಸ್‍ನ ಗಂಭೀರತೆಯನ್ನು ಅರಿತುಕೊಂಡಿಲ್ಲ. ಮನೆಯಲ್ಲಿ ಇರದೇ ಚಾನ್ಸ್ ತಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಾಯ್ದೋ ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಭಾರತದಂತೆ ಸೌತ್ ಆಫ್ರಿಕಾದಲ್ಲೂ ರಾಷ್ಟ್ರವ್ಯಾಪಿ ಲಾಕ್‍ಡೌನ್ ಮಾಡಲಾಗಿದೆ. ಈಗ ಅಲ್ಲಿ ಲಾಕ್‍ಡೌನ್ ಎರಡನೇ ವಾರದಲ್ಲಿದೆ. ಕೊರೊನಾ ವೈರಸ್ ನಿಂದ ದಕ್ಷಿಣ ಅಫ್ರಿಕಾದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 1,600ಕ್ಕೂ ಹೆಚ್ಚು ಜನರಿಗೆ ಸೋಂಕು ಬಂದಿದೆ.