ಕೇಪ್ ಟೌನ್: ದಕ್ಷಿಣ ಆಫ್ರಿಕಾದ (South Africa) ಅತಿದೊಡ್ಡ ನಗರ ಜೋಹಾನ್ಸ್‌ಬರ್ಗ್‌ನಲ್ಲಿ (Johannesburg) ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿದು ಕನಿಷ್ಠ 73 ಜನರು ಸಾವನ್ನಪ್ಪಿದ್ದಾರೆ ಎಂದು ತುರ್ತು ನಿರ್ವಹಣಾ ಸೇವೆ ಗುರುವಾರ ತಿಳಿಸಿದೆ.
ಗುರುವಾರ ಮುಂಜಾನೆ ಸಂಭವಿಸಿದ ಬೆಂಕಿಯಲ್ಲಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತುರ್ತು ಸೇವಾ ವಿಭಾಗದ ವಕ್ತಾರ ರಾಬರ್ಟ್ ಮುಲಾಡ್ಜಿ ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಮಹಾಯುದ್ಧದ ನಂತರ ಅತಿ ಹೆಚ್ಚು ಸಾವುಗಳಾದ ಯುದ್ಧ ರಷ್ಯಾ-ಉಕ್ರೇನ್ ವಾರ್; ಮಡಿದವರೆಷ್ಟು?
- Advertisement
ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದುವರೆಗೆ 63 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಹೆಚ್ಚಿನ ಜನರು ಒಳಗೆ ಸಿಲುಕಿರುವ ಸಾಧ್ಯತೆಯಿದೆ ಎಂದು ರಾಬರ್ಟ್ ಮಾಹಿತಿ ನೀಡಿದ್ದಾರೆ.
- Advertisement
ಬೆಂಕಿಯನ್ನು ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಪ್ಪು ಕಟ್ಟಡದ ಡೌನ್ಟೌನ್‌ನ ಕಿಟಕಿಗಳಿಂದ ಹೊಗೆ ಇನ್ನೂ ಹರಡಿದೆ. ಬೆಂಕಿ ಬಿದ್ದ ಕಟ್ಟಡದಲ್ಲಿ ಸುಮಾರು 200 ಮಂದಿ ವಾಸವಾಗಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಯಾವ ಪ್ರಧಾನಿಯೂ 5 ವರ್ಷ ಪೂರೈಸಿಲ್ಲ – ಕಾರಣಗಳೇನು?
Web Stories