ಜೋಹಾನ್ಸ್‌ಬರ್ಗ್: ಬಸ್ ಮತ್ತು ಶಸ್ತ್ರಸಜ್ಜಿತ ಟ್ರಕ್ ಪರಸ್ಪರ ಡಿಕ್ಕಿಯಾಗಿ 20 ಜನರು ಸಾವಿಗೀಡಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ದಕ್ಷಿಣ ಆಫ್ರಿಕಾದ (South Africa) ಸರ್ಕಾರ ತಿಳಿಸಿದೆ.
ಜಿಂಬಾಬ್ವೆಯ ಗಡಿಯಲ್ಲಿರುವ ಲಿಂಪೊಪೋದಲ್ಲಿನ ರಾಷ್ಟ್ರೀಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಟ್ರಕ್ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ 20 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಎಲ್‌ಟಿಟಿಇ ಮುಖ್ಯಸ್ಥ ಜೀವಂತವಾಗಿದ್ದಾನಾ? – ಇದು ತಮಾಷೆ ಎಂದ ಶ್ರೀಲಂಕಾ
Advertisement
Advertisement
ಪೊಲೀಸ್ ತಂಡವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಅಪಘಾತವಾದ ರಸ್ತೆ ಕೆಳಗಿರುವ ನದಿಯಲ್ಲಿ ಕೊಚ್ಚಿ ಹೋದವರ ರಕ್ಷಣೆಗಾಗಿ ಹುಡುಕಾಟ ನಡೆಸುತ್ತಿದೆ. ಈ ಪ್ರದೇಶ ಭಾರೀ ಮಳೆಗೆ ತತ್ತರಿಸಿದೆ ಎನ್ನಲಾಗಿದೆ.
Advertisement
Advertisement
ದಕ್ಷಿಣ ಆಫ್ರಿಕಾ ಹಲವು ದಿನಗಳಿಂದ ಮಳೆಯಿಂದ ತತ್ತರಿಸಿದ್ದು, ಅನೇಕ ಪ್ರಾಂತ್ಯಗಳಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದಿಂದಾಗಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವರು ಕಾಣೆಯಾಗಿದ್ದಾರೆ. ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಸಂಸ್ಥೆಯು, ಬೇಸಿಗೆಯ ಮಧ್ಯದಲ್ಲಿ ಇನ್ನೂ ಹಲವು ದಿನಗಳವರೆಗೆ ದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k