ಸೌತ್ ನಟಿ ರಾಶಿ ಖನ್ನಾಗೆ (Raashi Khanna) ಹೊಸ ಸಿನಿಮಾದ ಶೂಟಿಂಗ್‌ವೊಂದರಲ್ಲಿ ಗಾಯ ಮಾಡಿಕೊಂಡಿದ್ದಾರೆ. ನಟಿಗೆ ಪೆಟ್ಟಾಗಿದ್ದು, ಈ ಬಗ್ಗೆ ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದರ್ಶನ್ & ಗ್ಯಾಂಗ್ ಸದಸ್ಯರಿಗೆ 2 ತಿಂಗಳು ರಿಲೀಫ್
ಸಿನಿಮಾವೊಂದರ ಶೂಟಿಂಗ್‌ನಲ್ಲಿ ಆ್ಯಕ್ಷನ್ ಸೀನ್ ಚಿತ್ರೀಕರಿಸುವಾಗ (Shooting) ರಾಶಿಗೆ ಪೆಟ್ಟಾಗಿದೆ. ಯಾವ ಸಿನಿಮಾ ಸೆಟ್‌ನಲ್ಲಿ ನಟಿಯ ಗಾಯಗೊಂಡಿದ್ದಾರೆ. ಚಿಕಿತ್ಸೆಯ ನಂತರ ರಾಶಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸದ್ಯ ನಟಿಗೆ ಪೆಟ್ಟಾಗಿರುವ ಫೋಟೋಗಳನ್ನು ನೋಡಿ ಫ್ಯಾನ್ಸ್ ಗಾಬರಿಯಾಗಿದ್ದಾರೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತಿದ್ದಾರೆ.
View this post on Instagram
ಕೆಲವು ಪಾತ್ರಗಳು ನಿಮ್ಮ ದೇಹ, ನಿಮ್ಮ ಉಸಿರು, ನಿಮ್ಮ ಗಾಯವನ್ನು ಕೇಳುತ್ತವೆ. ನೀವು ಬಿರುಗಾಳಿಯಾದಾಗ ಗುಡುಗಿಗೆ ಹೆದರುವ ಅಗತ್ಯವಿಲ್ಲ. ಶೀಘ್ರದಲ್ಲೇ ಎಂದು ರಾಶಿ ಖನ್ನಾ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ʻಕಿಲ್ಲರ್ʼ ಬ್ಯೂಟಿಯ ಮಾದಕ ಲುಕ್‌ಗೆ ಪಡ್ಡೆ ಹುಡುಗರು ಫಿದಾ – ಟ್ಯಾಟೂ ಮಸ್ತ್ ಆಗಿದೆ ಅಂದ್ರು ಫ್ಯಾನ್ಸ್!
ನಟ ಸಿದ್ದು ಮತ್ತು ಶ್ರೀನಿಧಿ ಶೆಟ್ಟಿ ಜೊತೆ ರಾಶಿ ತೆಲುಸು ಕದಾ ಎಂಬ ಸಿನಿಮಾ ಮಾಡ್ತಿದ್ದಾರೆ. ಇದೊಂದಿಗೆ ಬಾಲಿವುಡ್ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.