ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ, ಕೋಲ್ಕತ್ತಾ ಕ್ರಿಕೆಟ್ ಅಸೋಶಿಯೇಷನ್ ಕಾರ್ಯದರ್ಶಿ ಸೌರವ್ ಗಂಗೂಲಿ ಸದ್ಯ ಇಂಡಿಯನ್ ಕ್ರಿಕೆಟ್ ಪರಿಸ್ಥಿತಿ ಅಪಾಯದಲ್ಲಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಬಿಸಿಸಿಐ ಆಡಳಿತ ನಿಯಂತ್ರಣ ಮಂಡಳಿ ನಡುವೆ ನಾಯತ್ವದ ಗೊಂದಲ ಹಾಗೂ ಮೀಟೂ ಕಿರುಕುಳ ಆರೋಪದ ಬಗೆಗಿನ ಅಭಿಪ್ರಾಯ ಬೇಧ ಇದಕ್ಕೆ ಕಾರಣ ಎಂದು ಗಂಗೂಲಿ ಅಂತಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಿಸಿಸಿಐಗೆ ಪತ್ರವನ್ನು ಬರೆದಿರುವ ಸೌರವ್ ಗಂಗೂಲಿ, ಬಿಸಿಸಿಐ ನಾಯಕತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಗಂಗೂಲಿ ಅವರ ಪತ್ರದಲ್ಲಿ ಪ್ರಮುಖವಾಗಿ ಬಿಸಿಸಿಐ ಸಿಇಒ ಅವರ ಮೇಲೆ ಬಂದ ಲೈಂಗಿಕ ಕಿರುಕುಳದ ಮೀಟೂ ಆರೋಪದ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದು ನಿಜವಾ ಅಥವಾ ಸುಳ್ಳ ನನಗೆ ಗೊತ್ತಿಲ್ಲ. ಆದರೆ ಭಾರತದಲ್ಲಿ ಕ್ರಿಕೆಟ್ ಬಹಳ ವರ್ಷಗಳಿಂದ ಬೆಳೆದು ಬಂದಿದ್ದು, ಸದ್ಯದ ಆರೋಪ ಭಾರತೀಯ ಕ್ರಿಕೆಟ್ ವ್ಯವಸ್ಥೆಯನ್ನೇ ಆತಂಕದಲ್ಲಿ ಉಂಟಾಗುವಂತೆ ಮಾಡಿದೆ. ಜನರು ಇದನ್ನು ಗಮನಿಸುತ್ತಿದ್ದಾರೆ ಎಂದು ಪತ್ರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸಿಇಒ ರಾಹುಲ್ ಜೋಹ್ರಿ ಅವರ ಮೇಲಿನ ಆರೋಪ ಭಾರತದ ಕೋಟ್ಯಂತರ ಪ್ರೇಮಿಗಳ ಭಾವನೆಗೆ ಧಕ್ಕೆ ತರುವಂತದ್ದು. ಈ ಕುರಿತು ಬಿಸಿಸಿಐ ಕಠಿಣ ನಿರ್ಣಯ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದ್ದು, ಗಂಗೂಲಿ ಅವರ ಈ ಪತ್ರ ಬಿಸಿಸಿಐ ಆಡಳಿತ ಮಂಡಳಿ ಮೇಲೆ ಒತ್ತಡವನ್ನು ಹೆಚ್ಚಿಸಿದೆ.
Advertisement
ಇತ್ತ ಬಿಸಿಸಿಐ ನಾಯಕತ್ವದ ಬಗ್ಗೆಯೂ ಗೊಂದಲ ಉಂಟಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಗಂಗೂಲಿ, ಕ್ರಿಕೆಟ್ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಿಗೆ ಬಿಸಿಸಿಐ ನಿಂದ ಯಾರಿಗೆ ಅಧಿಕೃತ ಆಹ್ವಾನ ನೀಡಬೇಕು ಎಂಬ ಬಗ್ಗೆಯೂ ಗೊಂದಲ ಉಂಟಾಗಿದೆ. ಈ ಬಗ್ಗೆ ವಿದೇಶಿ ಕ್ರಿಕೆಟ್ ಸಂಸ್ಥೆಯ ಸ್ನೇಹಿತರು ನನಗೆ ಪ್ರಶ್ನೆ ಮಾಡಿದ್ದು, ಏನೆಂದು ಉತ್ತರ ನೀಡಲಿ ಎಂದು ಪ್ರಶ್ನಿಸಿದ್ದಾರೆ.
Advertisement
ಬಿಸಿಸಿಐ ಸಿಇಒ ಆಗಿರುವ ರಾಹುಲ್ ಜೋಹ್ರಿ ಅವರ ಮೇಲೆ ಲೇಖಕಿ ಹರ್ನಿಧ್ ಕೌರ್ ಎಂಬವರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ತಮ್ಮ ಆರೋಪಕ್ಕೆ ಕೆಲ ಮೆಸೇಜ್ ಗಳ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದರು. ಭಾರತೀಯ ಕ್ರಿಕೆಟ್‍ನಲ್ಲಿ ಮೊದಲ ಬಾರಿಗೆ ಮೀಟೂ ಆರೋಪ ಇದಾಗಿದ್ದು, ಈ ಹಿಂದೆ ಶ್ರೀಲಂಕಾ ಕ್ರಿಕೆಟರ್ ಅರ್ಜುನ್ ರಣತುಂಗ, ಲಸಿತ್ ಮಾಲಿಂಗ ಮೇಲೆ ಮೀಟೂ ಆರೋಪ ಕೇಳಿಬಂದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Former cricketer and Cricket Association of Bengal (CAB) President Sourav Ganguly writes to BCCI Acting President CK Khanna, Secretary Amitabh Chaudhary and Treasurer Anirudh Chaudhry over Committee of Administrators (CoA) and sexual harassment allegations against Rahul Johri. pic.twitter.com/iAh8o7ECXz
— ANI (@ANI) October 30, 2018