ಮುಂಬೈ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿರುವ ಹಿರಿಯ ಆಟಗಾರರಿಗಾಗಿ ಲೆಜೆಂಡ್ಸ್ ಲೀಗ್‍ನ್ನು ಭಾರತ ಆಯೋಜಿಸುತ್ತಿದೆ. ಭಾರತ ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಯಕನಾಗಿ ಮುನ್ನಡೆಸಲಿದ್ದಾರೆ.
Advertisement
ಸೆಪ್ಟೆಂಬರ್ 15 ರಿಂದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಆರಂಭಗೊಳ್ಳುತ್ತಿದೆ. ಭಾರತದ ಒಂದು ತಂಡ ಮತ್ತು ಇತರ ದೇಶದ ಆಟಗಾರರೆಲ್ಲ ಸೇರಿ ಒಂದು ತಂಡ ರಚಿಸಲಾಗಿದೆ. ಭಾರತದ ತಂಡಕ್ಕೆ ಭಾರತ ಮಹರಾಜರು ಎಂದು ಹೆಸರು ನೀಡಲಾಗಿದೆ. ಇತರ ದೇಶಗಳ ಆಟಗಾರರನ್ನೊಳಗೊಂಡ ತಂಡಕ್ಕೆ ವರ್ಲ್ಡ್ ಜೈಂಟ್ಸ್ ಎಂದು ನಾಮಕರಣ ಮಾಡಲಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಸೆ.15ಕ್ಕೆ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಬ್ರಾವೋ ವಿಶ್ವದಾಖಲೆ – ಫ್ರಾಂಚೈಸ್ ಲೀಗ್‍ನ ಬಾದ್‍ಶಾನಾಗಿ ಮೆರೆದಾಟ
Advertisement
Advertisement
ಈಗಾಗಲೇ 2 ತಂಡಗಳನ್ನು ಅಂತಿಮಗೊಳಿಸಲಾಗಿದೆ. ಭಾರತ ತಂಡದಲ್ಲಿ ಗಂಗೂಲಿ, ಸೆಹ್ವಾಗ್, ಮೊಹಮ್ಮದ್ ಕೈಫ್ ಸೇರಿದಂತೆ ಹಿರಿಯ ಆಟಗಾರರ ದಂಡಿದ್ದರೆ, ಅತ್ತ ವರ್ಲ್ಡ್ ಜೈಂಟ್ಸ್ ತಂಡದಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡದ ದೈತ್ಯ ಆಟಗಾರರ ಬಲಿಷ್ಠ ತಂಡ ಕಟ್ಟಲಾಗಿದೆ. ಇದನ್ನೂ ಓದಿ: ಚಿನ್ನದ ಹುಡುಗಿಯ ಪರಿಸರ ಪ್ರೀತಿ – ಹುಟ್ಟುಹಬ್ಬಕ್ಕೆ ಗಿಡ ನೆಟ್ಟ ಮೀರಾಬಾಯಿ ಚಾನು
Advertisement
ತಂಡ ಹೀಗಿದೆ:
ಭಾರತ ಮಹರಾಜರು: ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸುಬ್ರಮಣ್ಯಂ ಬದರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್. ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಪ್ರಗ್ಯಾನ್ ಓಜಾ, ಅಜಯ್ ಜಡೇಜಾ, ಆರ್.ಪಿ ಸಿಂಗ್, ಜೋಗಿಂದರ್ ಶರ್ಮಾ, ರೀತೀಂದರ್ ಸಿಂಗ್ ಸೋಧಿ.
So the India vs Rest of the World game is on September 15 at Eden Gardens. Sourav Ganguly leads India and Eoin Morgan the World. Part of Legends League cricket @SGanguly99 @ramanraheja @Eoin16 pic.twitter.com/waE9GWSMEr
— Vikrant Gupta (@vikrantgupta73) August 12, 2022
ವರ್ಲ್ಡ್ ಜೈಂಟ್ಸ್: ಇಯಾನ್ ಮೋರ್ಗನ್ (ನಾಯಕ), ಲೆಂಡ್ಲ್ ಸಿಮನ್ಸ್, ಹರ್ಷಲ್ ಗಿಬ್ಸ್, ಜಾಕ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಯರ್, ನಥನ್ ಮೆಕಲಮ್, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇನ್, ಹ್ಯಾಮಿಲ್ಟನ್ ಮಸಕಝ ಮುಶ್ರಫೆ ಮೊರ್ತಜಾ, ಅಸ್ಗರ್ ಅಫಘಾನ್, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಕೆವಿನ್ ಒ ಬ್ರಿಯಾನ್, ದಿನೇಶ್ ರಾಮ್‍ದಿನ್