ಕೋಲ್ಕತ್ತಾ: ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದ ಮೊದಲ 3 ದಿನಗಳ ಟಿಕೆಟ್ ಮಾರಾಟವಾಗಿದ್ದು, ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಆನ್‍ಲೈನ್‍ನಲ್ಲಿ ಪಂದ್ಯದ ಮಾರಾಟಕ್ಕಿಟ್ಟ ಟಿಕೆಟ್‍ಗಳು ಖಾಲಿಯಾಗಿದ್ದು, ಟೆಸ್ಟ್ ಪಂದ್ಯದ ಎಲ್ಲಾ ಟಿಕೆಟ್‍ಗಳು ಮಾರಾಟವಾಗಿರುವುದರಿಂದ ಗಂಗೂಲಿ ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಕೋಟಾ ಟಿಕೆಟ್‍ಗಳು ಮಾತ್ರವೇ ಮಾರಾಟಕ್ಕಿದ್ದು. ಅವು ಕೂಡ ವೇಗವಾಗಿ ಮಾರಾಟವಾಗುತ್ತಿದೆ ಎಂದು ಗಂಗೂಲಿ ತಿಳಿಸಿದ್ದಾರೆ. ಇದನ್ನು ಓದಿ: ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಅಮಿತ್ ಶಾ
Advertisement
Looks who's here – unboxing the Pink cherry ????????#TeamIndia had a stint with the Pink Ball at the nets today in Indore #INDvBAN ???????? pic.twitter.com/JhAJT9p6CI
— BCCI (@BCCI) November 12, 2019
Advertisement
ನ.22 ರಿಂದ 26ರವರೆಗೂ ಕೋಲ್ಕತ್ತಾ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ನಡೆಯಲಿದ್ದು, ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಬಾಂಗ್ಲಾ ಕ್ರಿಕೆಟ್ ಮಂಡಳಿಯನ್ನು ಒಪ್ಪಿಸಿ ಪಂದ್ಯವನ್ನು ಆಯೋಜಿಸುತ್ತಿದ್ದಾರೆ. ಇದಕ್ಕೂ ಮುನ್ನವೇ ಡೇ-ನೈಟ್ ಪಂದ್ಯ ಆಯೋಜಿಸುವ ಅವಕಾಶವಿದ್ದರೂ ಬಿಸಿಸಿಐ ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ಸದ್ಯ ಗಂಗೂಲಿ ಅವರ ಸಮ್ಮತಿಯ ಹಿನ್ನೆಲೆಯಲ್ಲಿ ಡೇ-ನೈಟ್ ಪಂದ್ಯ ನಡೆಯುತ್ತಿರುವ ಕಾರಣ ಕ್ರಿಕೆಟ್ ಅಭಿಮಾನಿಗಳು ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಲು ಟಿಕೆಟ್ ಖರೀದಿ ಮಾಡಿದ್ದಾರೆ. ಇದನ್ನು ಓದಿ: ಮೊದಲ ಡೇ ನೈಟ್ ಟೆಸ್ಟ್ – ಧೋನಿ ಸೇರಿ ಮಾಜಿ ನಾಯಕರ ಕಾಮೆಂಟ್ರಿ