ನವದೆಹಲಿ: ಬಾಂಗ್ಲಾ ದೇಶದ ವಿರುದ್ಧದ ನಡೆಯಲಿರುವ ಐತಿಹಾಸಿಕ ಡೇ-ನೈಟ್ ಪಂದ್ಯದಲ್ಲಿ ಆಡಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿರನ್ನು ಕೇವಲ 3 ಸೆಕೆಂಡ್‌ಗಳಲ್ಲಿ ಒಪ್ಪಿಸಿದ್ದೆ ಎಂದು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಡೇ-ನೈಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಡಲು ಬಿಸಿಸಿಐ ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಕೆಲ ದಿನಗಳಲ್ಲೇ ಪಂದ್ಯಕ್ಕೆ ಸಿದ್ಧತೆ ನಡೆಸಿ ಬಾಂಗ್ಲಾ ತಂಡವನ್ನು ಕೂಡ ಒಪ್ಪಿಸಲು ದಾದಾ ಯಶಸ್ವಿಯಾಗಿದ್ದರು.
Advertisement
Advertisement
ಈ ಹಿಂದೆ ಬಿಸಿಸಿಐನಲ್ಲಿ ನಡೆದಿರುವ ಚರ್ಚೆ ಬಗ್ಗೆ ನನಗೆ ತಿಳಿದಿಲ್ಲ. ಆಡಿಲೇಡ್‌ನಲ್ಲೂ ಟೀಂ ಇಂಡಿಯಾ ಡೇ-ಅಂಡ್ ನೈಟ್ ಪಂದ್ಯವನ್ನು ಏಕೆ ಆಡಲಿಲ್ಲ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಆದರೆ ಕೋಲ್ಕತ್ತಾದಲ್ಲಿ ನಡೆಯಲಿರುವ ಪಂದ್ಯದ ಕುರಿತು ಕೊಹ್ಲಿರೊಂದಿಗೆ 1 ಗಂಟೆ ಅವಧಿ ಚರ್ಚೆ ನಡೆಸಿದ್ದೆ. ಅಂದು ಕೊಹ್ಲಿಗೆ ಮೊದಲ ಪ್ರಶ್ನೆಯನ್ನು ಡೇ-ನೈಟ್ ಪಂದ್ಯದ ಕುರಿತು ಕೇಳಿದ್ದೆ. ಇದಕ್ಕೆ ಸಮ್ಮತಿ ಸೂಚಿಸಿದ ಕೊಹ್ಲಿ 3 ಸೆಕೆಂಡ್‌ಗಳಲ್ಲೇ ಮುಂದಕ್ಕೆ ಹೋಗೋಣ ಎಂದಿದ್ದರು. ಏಕೆಂದರೆ ಖಾಲಿ ಕ್ರೀಡಾಂಗಣದಲ್ಲಿ ಆಡಿದರೆ ಲಾಭವಿಲ್ಲ ಎಂಬುವುದನ್ನು ಕೊಹ್ಲಿ ಕೂಡ ಗ್ರಹಿಸಿದ್ದರು. ಇಂದಿನ ದಿನಗಳಲ್ಲಿ ಜನರು ಕೆಲಸವನ್ನು ಬಿಟ್ಟು ಮ್ಯಾಚ್ ನೋಡಲು ಬರುವ ಸ್ಥಿತಿ ಇಲ್ಲ ಎಂದು ಗಂಗೂಲಿ ಹೇಳಿದ್ದಾರೆ.
Advertisement
ಮ.22 ರಿಂದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬಾಂಗ್ಲಾ ದೇಶದ ವಿರುದ್ಧ ಭಾರತ ಮೊದಲ ಡೇ ನೈಟ್ ಆರಂಭವಾಗಲಿದೆ. ಈಗಾಗಲೇ ಬಿಸಿಸಿಐ ಈ ಐತಿಹಾಸ ಪಂದ್ಯಕ್ಕೆ ಬೇಕಾದ ತಯಾರಿಗಳನ್ನುನಡೆಸುತ್ತಿದೆ.