ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರಿಂದು ದಕ್ಷಿಣ ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯ ಪಂಡಾಲ್ (Durga Puja Pandal) ಉದ್ಘಾಟಿಸಿದರು. ಇದೇ ವೇಳೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಲಾರ್ಡ್ಸ್ ಮೈದಾನದಲ್ಲಿ (Lord’s Pavilion) ಇಂಗ್ಲೆಂಡ್ (England) ವಿರುದ್ಧ ನಡೆದ ನ್ಯಾಟ್‌ವೆಸ್ಟ್ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಭಾರತ ಸ್ಮರಣೀಯ ಗೆಲುವು ಮೆಲುಕು ಹಾಕಿದ್ದಾರೆ.
Advertisement
ಇಲ್ಲಿನ ದುರ್ಗಾಪೂಜಾ ಸಮಿತಿ ಪಕ್ಕದಲ್ಲೇ ಲಾರ್ಡ್ಸ್ ಪೆವಿಲಿಯನ್ ರೀತಿಯಲ್ಲೇ ತಾತ್ಕಾಲಿಕ ಪೆಂಡಾಲ್ ಸ್ಥಾಪಿಸಲಾಗಿದೆ. ದುರ್ಗಾಪೂಜೆ, ದುರ್ಗೋತ್ಸವ ಎಂದು ಕರೆಯುವ ಹಿಂದೂಗಳ ಈ ಆರಾಧನಾ ಮಹೋತ್ಸವವನ್ನು ಮಹಿಷಾಸುರನನ್ನು ಸಂಹಾರವನ್ನು ನೆನಪಿಸುವ ವಿಶೇಷ ಆಚರಣೆಯೂ ಆಗಿದೆ. ಇದನ್ನೂ ಓದಿ: ಸರಣಿ ಗೆದ್ದರೂ ಮುಖದಲ್ಲಿ ನಗುವಿಲ್ಲ – ಕೊಹ್ಲಿಯನ್ನು ಗುರಾಯಿಸಿದ ಪಂತ್
Advertisement
Advertisement
2002ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ನ್ಯಾಟ್‌ವೆಸ್ಟ್ ತ್ರಿಕೋನ ಸರಣಿಯಲ್ಲಿ ಭಾರತ (Team India) ಅವಿಸ್ಮರಣೀಯ ಗೆಲುವು ದಾಖಲಿಸಿತ್ತು. ಯುವರಾಜ್ ಸಿಂಗ್ (Yuvraj Singh), ಮೊಹಮ್ಮದ್ ಕೈಫ್ (Mohammad Kaif) ಬ್ಯಾಟಿಂಗ್ ಅಬ್ಬರದಿಂದ ಗೆಲುವು ದಾಖಲಿಸಿದ ನಂತರ ಸೌರವ್ ಗಂಗೂಲಿ ತಮ್ಮ ಟೀಶರ್ಟ್ ಬಿಚ್ಚಿ ಬಾಲ್ಕನಿಯಲ್ಲಿ ಬೀಸಿ ಸಂಭ್ರಮಿಸಿದ್ದರು. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ
Advertisement
16 ದೇಶಗಳೊಂದಿಗೆ 113 ಟೆಸ್ಟ್ ಪಂದ್ಯಗಳನ್ನಾಡಿರುವ ಸೌರವ್ ಗಂಗೂಲಿ 7,212 ರನ್ ಬಾರಿಸಿದ್ದಾರೆ. 35 ಅರ್ಧ ಶತಕಗಳನ್ನು ಗಳಿಸಿದ್ದಾರೆ, ಜೊತೆಗೆ 32 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಇನ್ನೂ 22 ದೇಶಗಳೊಂದಿಗೆ 311 ಏಕದಿನ ಕ್ರಿಕೆಟ್ ಪಂದ್ಯದಲ್ಲಿ 11,363 ರನ್ ಪೂರೈಸಿರುವ ಗಂಗೂಲಿ 100 ವಿಕೆಟ್ ಕಬಳಿಸಿದ್ದಾರೆ.