ಕೋಲ್ಕತ್ತಾ: ಸೌರವ್ ಗಂಗೂಲಿ (SouravGanguly) ಅವರು ಬಿಜೆಪಿ (BJP) ಸೇರಲು ನಿರಾಕರಿಸಿದ್ದರಿಂದಲೇ 2ನೇ ಬಾರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಆಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (TMC) ಹೇಳಿದೆ.
Advertisement
ಈ ಕುರಿತು ಮಾತನಾಡಿರುವ ಟಿಎಂಸಿ (TMC) ವಕ್ತಾರ ಕುನಾಲ್ ಘೋಷ್ (Kunal Ghosh), ಕಳೆದ ವಿಧಾನಸಭೆ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ (West Bengal) ಜನಪ್ರಿಯತೆ ಗಳಿಸಿರುವ ಸೌರವ್ ಗಂಗೂಲಿ ಅವರು ಪಕ್ಷಕ್ಕೆ ಸೇರುತ್ತಾರೆ ಎಂದು ಬಿಜೆಪಿ ಬಿಂಬಿಸಿತ್ತು. ಆದರೆ ಗಂಗೂಲಿ ಅವರು ಪಕ್ಷಕ್ಕೆ ಸೇರಲು ನಿರಾಕರಿಸಿದ್ದರಿಂದ ಬಿಜೆಪಿ ಅವರನ್ನು ಅವಮಾನಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಬಿಸಿಸಿಐ ಅಧ್ಯಕ್ಷರನ್ನಾಗಿ (BCCI President) ರೋಜರ್ ಬಿನ್ನಿ (Roger Binny) ಅವರನ್ನ ಬದಲಿಸಲು ಮುಂದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡಿಗ ರೋಜರ್ ಬಿನ್ನಿಗೆ BCCI ಅಧ್ಯಕ್ಷ ಪಟ್ಟ?
Advertisement
Advertisement
1983ರ ವಿಶ್ವಕಪ್ (WorldCup) ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಮಂಗಳವಾರ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಪುತ್ರ ಜಯ್ ಶಾ ಸಹ ನಾಮಪತ್ರ ಸಲ್ಲಿಸಿದ್ದಾರೆ. ಜಯ್ ಶಾ (Jay Shah) 2ನೇ ಬಾರಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಬಹುದು. ಆದರೆ ಗಂಗೂಲಿ ಅವರನ್ನು ಹಾಗೆ ಮಾಡುತ್ತಿಲ್ಲ. ಇದು ಸೇಡಿನ ರಾಜಕಾರಣದ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.
Advertisement
ಇಂತಹ ವಿಷಯಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಬಿಜೆಪಿಯು ಇಂತಹ ಪ್ರಚಾರವನ್ನು ಮಾಡಿದ್ದರಿಂದ, ಊಹಾಪೋಹಗಳಿಗೆ ಪ್ರತಿಕ್ರಿಯಿಸುವುದು ನಮ್ಮ ಜವಾಬ್ದಾರಿ. ಗಂಗೂಲಿ ಅವರು 2ನೇ ಬಾರಿಗೆ ಬಿಸಿಸಿಐಗೆ ಆಯ್ಕೆಯಾಗದಿರುವ ಹಿಂದೆ ರಾಜಕೀಯವಿದೆ. ಸೌರವ್ ಅವರನ್ನು ಅವಮಾನಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ – ಭಾರತಕ್ಕೆ 7 ವಿಕೆಟ್‌ಗಳ ಜಯ
ಈ ಆರೋಪ ತಳ್ಳಿಹಾಕಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್, ಟಿಎಂಸಿ ಆರೋಪ ಆಧಾರ ರಹಿತವಾಗಿದೆ. ಬಿಜೆಪಿ ಎಂದಿಗೂ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಯಸಿಲ್ಲ. ಗಂಗೂಲಿ ಒಂದು ದಂತಕತೆ. ಆದರೆ ಬಿಸಿಸಿಐ ಅಧ್ಯಕ್ಷರಾದ ಮೇಲೆ ಅವರ ಪಾತ್ರ ಏನಾದರೂ ಇದೆಯೇ? ಟಿಎಂಸಿ ಪ್ರತಿಯೊಂದು ವಿಷಯವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದ್ದಾರೆ.