65 ವರ್ಷಗಳ ಬಳಿಕ ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರಲಿದ್ದಾರೆ ಭಾರತೀಯ ಕ್ರಿಕೆಟಿಗ

Public TV
1 Min Read
sourav ganguly

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆಯ್ಕೆಯಾಗಲಿದ್ದು, ಸರಿ ಸುಮಾರು 6 ದಶಕಗಳ ಬಳಿಕ ಬಿಸಿಸಿಐ ಅಧ್ಯಕ್ಷ ಸ್ಥಾನ ಪಡೆದ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಗಂಗೂಲಿ ಪಡೆಯಲಿದ್ದಾರೆ.

ಬಿಸಿಸಿಐ ಅಧ್ಯಕ್ಷರಾಗಿ ಈ ಹಿಂದೆ ಸುನಿಲ್ ಗವಾಸ್ಕರ್, ಶಿವಲಾಲ್ ಯಾದವ್ ಅವರು ಕಾರ್ಯನಿರ್ವಹಿಸಿದ್ದರು ಕೂಡ ಅವರು ತಾತ್ಕಾಲಿಕ ಅಧ್ಯಕ್ಷರಾಗಿ ಮಾತ್ರ ಆಯ್ಕೆಯಾಗಿದ್ದರು. 65 ವರ್ಷಗಳ ಹಿಂದೆ ಮಹಾರಾಜ್ ಆಫ್ ವಿಜಯನಗರಂ ಎಂದೇ ಖ್ಯಾತಿ ಪಡೆದಿದ್ದ ವಿಜ್ಜಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದರು. ವಿವಾದಿತ ಕ್ರಿಕೆಟಿಗ ಎಂದೇ ಕರೆಯಿಸಿಕೊಂಡಿರುವ ವಿಜ್ಜಿ ಅವರು, 1954-56ರ ಅವಧಿಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಭಾರತ ಯಾವುದೇ ಕ್ರಿಕೆಟಿಗ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರಲಿಲ್ಲ.

Sourav Ganguly

ಅಕ್ಟೋಬರ್ 23 ರಂದು ಬಿಸಿಸಿಐ ಚುನಾವಣೆ ನಡೆಯಲಿದ್ದು, ಗಂಗೂಲಿ ಅವರು ಅವಿರೋಧವಾಗಿ ಈ ಸ್ಥಾನಕ್ಕೆ ಆಯ್ಕೆ ಆಗಲಿದ್ದಾರೆ. ಇತ್ತ ಗಂಗೂಲಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂಬ ಸುದ್ದಿಗಳ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ‘ಬಿಸಿಸಿಐ ನಲ್ಲಿ ದಾದಾ ಹವಾ ಆರಂಭವಾಗಿದೆ, ಬೆಂಗಾಲ್ ಟೈಗರ್ ಈಸ್ ಬ್ಯಾಕ್’ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತ ಪಶ್ವಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕೂಡ ಗಂಗೂಲಿ ಅವರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *