ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಡೇಟ್ ಫಿಕ್ಸ್ ಆದ ಬೆನ್ನಲ್ಲೇ ಉಪೇಂದ್ರ ಅವರ `UI’ ಚಿತ್ರದ ಮೇಲಿನ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈಗ ಬರ್ತಿರೋ ಅಭಿಮಾನಿಗಳಿಗೆ ಇದೇ ಶುಭ ಶುಕ್ರವಾರ 6 ಗಂಟೆ 3 ನಿಮಿಷಕ್ಕೆ ಯುಐ ಜಗತ್ತಿನ ಬಿಜಿಎಂ ದರ್ಶನ ಮಾಡಿಸಲು ಸಜ್ಜಾಗಿದೆ ಟೀಮ್.
????#SoundOfUi ???? From #UiTheMovie will rule your Playlists ????️ From Tomorrow 6:03pm#UppiDirects #Upendra @nimmaupendra #GManoharan @Laharifilm @enterrtainers @kp_sreekanth #NaveenManoharan @AJANEESHB @shivakumarart @Reeshmananaiah @LahariMusic pic.twitter.com/dyHxkUTva2
— Upendra (@nimmaupendra) August 22, 2024
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ದೂರದ ಹಂಗೇರಿ ದೇಶದ ಬುಡಾಪೆಸ್ಟ್‌ನಲ್ಲಿ ಸಾಂಗ್ ರೆಕಾರ್ಡಿಂಗ್ ಮಾಡಿತ್ತು ಯುಐ ತಂಡ, ಇದೀಗ ಅಲ್ಲಿ ಕ್ರಿಯೇಟ್ ಆಗಿದ್ದ ಯುಐ ಸೌಂಡ್ ಮ್ಯಾಜಿಕ್ ಬಿಡಲು ತಯಾರಾಗಿದೆ. ಸೌಂಡ್ ಆಫ್ ಎಂದು ಬರೆದು ವಾಯಲಿನ್ ಫೋಟೋ ತೋರಿಸಿದ್ದಾರೆ.
ವಯೊಲಿನ್ ಮ್ಯೂಸಿಕ್ ಝಲಕ್‌ನ್ನೇ ರಿಲೀಸ್ ಮಾಡಬಹುದಾ ಎಂಬ ನಿರೀಕ್ಷೆ ಇದೆ. ಆದರೆ ಇದು ಉಪ್ಪಿ ಸಿನಿಮಾ ಅಲ್ವೇ ಇಲ್ಲಿ ಏನ್‌ಬೇಕಾದ್ರೂ ಆಗಬಹುದು. ಆದರೆ ಈ ಬಾರಿ ಕಿವಿಗೆ ಇಂಪು ಕೊಡುವ ಸಂಗೀತ ಬರೋದಂತೂ ಫಿಕ್ಸ್.
ಉಪೇಂದ್ರ ಬಹುವರ್ಷಗಳ ಬಳಿಕ ನಿರ್ದೇಶಿಸಿರುವ ಚಿತ್ರ `ಯುಐ’. ಲಹರಿ ಫಿಲ್ಮ್ಸ್ ಜೊತೆ ವೀನಸ್ ಎಂಟರ್‌ಪ್ರೈಸ್ ಜಂಟಿಯಾಗಿ ನಿರ್ಮಿಸಿರುವ ಚಿತ್ರ. `ಯುಐ’ ಮೂಲಕ ಸ್ಯಾಂಡಲ್‌ವುಡ್ ಇನ್ನೊಮ್ಮೆ ಜಗತ್ತಿನಾದ್ಯಂತ ವಿಜಯಪತಾಕೆ ಹಾರಿಸುವ ನಿರೀಕ್ಷೆಯೂ ಇದೆ. ಒಟ್ಟಿನಲ್ಲಿ ರಿಯಲ್ ಸ್ಟಾರ್ ಫ್ಯಾನ್ಸ್ ಅಂತೂ ಯುಐ ಸಾಂಗ್ ಮಾಧುರ್ಯವನ್ನ ಕಿವಿಗೆ ಅಪ್ಪಳಿಸಿಕೊಳ್ಳಲು ಕಾದಿದ್ದಾರೆ.