ಧಾರವಾಡ: ನಿನ್ನೆ ಹಿಜಬ್ ಕುರಿತು ನ್ಯಾಯಾಲಯ ಐತಿಹಾಸಿಕ ತೀರ್ಪನ್ನು ನೀಡಿತು. ಆದರೆ ಈ ತೀರ್ಪಿನ ಕುರಿತು ಕೆಲವರು ಕೆಟ್ಟದಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
Advertisement
ಧಾರವಾಡದಲ್ಲಿ ಮಾತನಾಡಿದ ಅವರು, ನಿನ್ನೆ 6 ವಿದ್ಯಾರ್ಥಿನಿಯರು ಹೈ-ಕೋರ್ಟ್ ಆದೇಶವನ್ನು ಗೌರವಿಸದೇ ಅಗೌರವವಾಗಿ ನಡೆದುಕೊಂಡಿದ್ದಾರೆ. ಸಿಎಫ್‍ಐ ಅಧ್ಯಕ್ಷ ಅತಾವುಲ್ಲಾ ನಿನ್ನೆಯ ಹಿಜಬ್ ಹೈಕೋರ್ಟ್ ಆದೇಶವನ್ನು ಅಸಂವಿಧಾನಿಕ ಎಂದು ಹೇಳುವ ಮೂಲಕ ಕೊರ್ಟ್‍ಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಲ್ಪಸಂಖ್ಯಾತರನ್ನು ರಕ್ಷಿಸುವುದು ಮುಸ್ಲಿಮರ ಕರ್ತವ್ಯ: ಅಸ್ಸಾಂ ಸಿಎಂ
Advertisement
Advertisement
ನ್ಯಾಯಾಲಯ ಇರುವುದೇ ಸಂವಿಧಾನದ ಮೇಲೆ. ಈ ರೀತಿಯ ಹೇಳಿಕೆ ಸರಿಯಲ್ಲ. ನಾವು ಅತಾವುಲ್ಲಾ ಅವರ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಹಾಕಲು ಎಜಿ ಅವರಿಗೆ ಅನುಮತಿ ಕೇಳಿದ್ದೇವೆ. ಧಾರವಾಡ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಎಜಿ(ಸಹಾಯಕ ನಿರ್ದೇಶಕಿ) ವಿದ್ಯಾವತಿ ಅವರಿಗೆ ಮನವಿ ನೀಡಿದ್ದೇವೆ ಎಂದ ಅವರು, ಮೇಲಾಧಿಕಾರಿ ಕೇಳಿ ಕೇಸ್ ಬಗ್ಗೆ ತಿಳಿಸ್ತಾರೆ ಎಂದು ವಿವರಿದರು.
Advertisement
ಅರ್ಜಿದಾರರು ಮೇಲ್ಮನವಿ ಸಲ್ಲಿಸುವ ಅವಕಾಶ ಇದೆ. ಅದಕ್ಕೆ ಈ ರೀತಿ ಮಾತನಾಡಿದವರ ಮೇಲೆ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಬೇಕು. ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಅನುಮತಿ ಬೇಕು ಎಂದು ಕೇಳಿದರು. ಇದನ್ನೂ ಓದಿ: ಕರೀನಾ ಕಪೂರ್ ಕಮ್ ಬ್ಯಾಕ್ – ಜಪಾನಿ ಲೇಖಕನ ಕೃತಿಗೆ ಮಿಲ್ಕಿ ಬ್ಯೂಟಿ ಹೀರೋಯಿನ್