ಬೆಂಗಳೂರು: ಸುಂಕದಕಟ್ಟೆ ಶಾಂತಿಧಾಮ ಕಾಲೇಜು ಗೋಡೆ, ರಸ್ತೆ ಮೇಲೆ Sorry ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಕೆಟಿಎಂ ಡ್ಯೂಕ್ ನಲ್ಲಿ ಬಂದ ಇಬ್ಬರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
Advertisement
ಈ ಸಂಬಂಧ ಎಕ್ಸ್ ಕ್ಲೂಸೀವ್ ದೃಶ್ಯ ಪಬ್ಲಿಕ್ ಟಿವಿಗೆ ಲಭಿಸಿದೆ. ವೀಡಿಯೋದಲ್ಲಿ ರಾತ್ರಿ 11 ರಿಂದ 12 ಗಂಟೆ ಸಮಯದಲ್ಲಿ ಝೋಮ್ಯಾಟೊ ಬ್ಯಾಗ್ ಹಿಡಿದು ಇಬ್ಬರು ಕೆಟಿಎಂ ಡ್ಯೂಕ್ ಬೈಕಿನಲ್ಲಿ ಬಂದಿರುವುದನ್ನು ಕಾಣಬಹುದಾಗಿದೆ. ಈ ಇಬ್ಬರೇ ಎಲ್ಲಾ ಕಡೆ Sorry ಬರೆದಿದ್ದಾರೆ ಎಂದು ಶಂಕಿಸಲಾಗಿದೆ. ಫುಡ್ ಡೆಲಿವರಿ ಬ್ಯಾಗ್ ನೊಂದಿಗೆ ಇಬ್ಬರು ಬಂದಿದ್ದಾರೆ. ಅಲ್ಲದೆ ಬ್ಯಾಗ್ ನೊಳಗೆ ಕೆಂಪು ಬಣ್ಣದ ಸ್ಪ್ರೇ ತಂದಿದ್ರು. ಸ್ಪ್ರೇ ಮೂಲಕ Sorry ಎಂದು ಬರೆದಿದ್ದಾರೆ. ತನ್ನ ಪ್ರೇಯಸಿಗಾಗಿ ಈ ರೀತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮಹಿಳೆಯನ್ನು ಗುದ್ದಿ ಕೊಂದ ಟಗರಿಗೆ 3 ವರ್ಷ ಜೈಲು ಶಿಕ್ಷೆ
Advertisement
Advertisement
ರಸ್ತೆ, ಮನೆಯ ಕಾಂಪೌಂಡ್, ಗೋಡೆ, ಸ್ಕೂಲ್ ಮೆಟ್ಟಿಲು, ಸ್ಕೂಲ್ ಕಾಂಪೌಂಡ್ ಹೀಗೆ ಎಲ್ಲಾ ಕಡೆ Sorry ಅಂತಾ ಬರೆಯಲಾಗಿದೆ. ಸ್ಪ್ರೇ ಪೈಂಟ್ ನಲ್ಲಿ ಈ ರೀತಿ ಬರೆಯಲಾಗಿದೆ. ಮನೆಯ ಗೋಡೆಯೊಂದರ ಮೇಲೆ Sorry Ma, Sorry Pa ಅಂತಾ ಸಹ ಬರೆಯಲಾಗಿದೆ. ಮತ್ತೊಂದು ಕಡೆ ಹಾರ್ಟ್ ಸಿಂಬಲ್ ಸಹ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯೇ ಈ ರೀತಿ ಹುಚ್ಚಾಟ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
Advertisement
ಇಡೀ ರಸ್ತೆಯಲ್ಲಿ Sorry ಬರೆದಿರೋ ದುಷ್ಕರ್ಮಿಗಳು, ಕಾಲೇಜು ಹೆಸರಿಗೆ ಮಸಿ ಬಳಿಯೋಕೆ ಮಾಡಿದ್ದಾರೆ ಅನ್ನೊ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಶಾಂತಿಧಾಮ ಕಾಲೇಜು ಪ್ರಾಂಶುಪಾಲರಿಂದ ಮಾಹಿತಿ ನೀಡಿದ್ದಾರೆ. ಸದ್ಯ Sorry ಎಂದು ಬರೆದಿರುವ ಸೂತ್ರದಾರನ ಹಿಂದೆ ಪೊಲೀಸರು ಬಿದ್ದಿದ್ದಾರೆ.