ಹೈದರಾಬಾದ್: ಫೀಸ್ ಕಟ್ಟದ ಕಾರಣ ಪರೀಕ್ಷೆ ನಡೆಯುತ್ತಿದ್ದ ವೇಳೆಯೇ ಕ್ಲಾಸ್ ರೂಮಿನಿಂದ ಹೊರಹಾಕಿದ್ದಕ್ಕೆ ಮನನೊಂದು 14 ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
Advertisement
ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 9ನೇ ತರಗತಿ ಬಾಲಕಿಯನ್ನ ಕ್ಲಾಸ್‍ನಿಂದ ಹೊರಹಾಕಿ ಎಲ್ಲರ ಮುಂದೆ ಅವಮಾನಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಬಾಲಕಿಯ ಮೃತದೇಹದ ಬಳಿ ಡೆತ್‍ನೋಟ್ ಪತ್ತೆಯಾಗಿದ್ದು, “ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, sorry ಅಮ್ಮಾ” ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಾಲಕಿ 2 ಸಾವಿರ ರೂ. ಫೀಸ್ ಕಟ್ಟುವುದು ಬಾಕಿ ಇತ್ತು ಎಂದು ಪೊಲೀಸರು ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
Advertisement
Advertisement
ಶಾಲೆಯವರು ನನ್ನ ಹೆಸರು ಕರೆದು ಕ್ಲಾಸ್‍ನಿಂದ ಹೊರಹಾಕಿದಾಗ ನನಗೆ ಅವಮಾನವಾಯಿತು ಎಂದು ಬಾಲಕಿ ಮನೆಗೆ ಬಂದ ನಂತರ ತನ್ನ ಸಹೋದರಿಯೊಂದಿಗೆ ಹೇಳಿಕೊಂಡಿದ್ದಳು. ಆದ್ರೆ ಬಳಿಕ ಮಲ್ಕಜ್ಗಿರಿಯ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
Advertisement
ಕುಟುಂಬಸ್ಥರ ದೂರಿನನ್ವಯ ಪೊಲೀಸರು ಶಾಲೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.