ʻಕನ್ನಡ ಹಾಡು ಹಾಡಿʼ ಅಂದಿದ್ದಕ್ಕೆ ಉಗ್ರರ ದಾಳಿಗೆ ಹೋಲಿಕೆ ಮಾಡಿ ವಿವಾದಕ್ಕೀಡಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಹಾಡು ಹಾಡಿಸದಿರಲು ಫಿಲ್ಮ್ ಚೇಂಬರ್ ತೀರ್ಮಾನ ಕೈಗೊಂಡ ಬೆನ್ನಲ್ಲೇ ಕನ್ನಡಿಗರ ಮತ್ತು ಕರ್ನಾಟಕಕ್ಕೆ ಕ್ಷಮೆ ಕೋರಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟನ್ನೂ ಹಂಚಿಕೊಂಡಿದ್ದಾರೆ.
View this post on Instagram
ಮಾತಿನಲ್ಲಿ ಸ್ಥಿಮಿತ ಕಳೆದುಕೊಂಡು ವಿವಾದ ಸೃಷ್ಟಿಸಿದರು, ಕನ್ನಡಿಗರ ಮೇಲೆ ಆರೋಪ ಹೊರಿಸಿದ್ದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ʻಕನ್ನಡ ಹಾರು ಹಾಡಿʼ ಅಂದಿದ್ದಕ್ಕೆ ಪಹಲ್ಗಾಮ್ ಭಯೋತ್ಪಾದಕರ ಕೃತ್ಯಕ್ಕೆ ಹೋಲಿಕೆ ಮಾಡಿದ್ದರು. ಇದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಅವಮಾನ ಸಹಿಸುವಷ್ಟು ಚಿಕ್ಕವನಲ್ಲ – ಸ್ಯಾಂಡಲ್‌ವುಡ್‌ನಿಂದ ಅಸಹಕಾರದ ಬೆನ್ನಲ್ಲೇ ಸೋನು ನಿಗಮ್ ರಿಯಾಕ್ಷನ್
ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು ಎಂದು ಪಟ್ಟು ಹಿಡಿದು ಕೂತಿದ್ದರು. ಕೆಲ ಸಂಘಟನೆಗಳು ಪ್ರತಿಭಟನೆಯನ್ನು ಮಾಡಿದ್ದವು. ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದು ಕೂತಿದ್ದವು. ಈ ನಡುವೆ ಗಾಯಕನ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಇದನ್ನೂ ಓದಿ: ಸೋನು ನಿಗಮ್‌ಗೆ ಫಿಲ್ಮ್ಂ ಚೇಂಬರ್ ಶಾಕ್ – ಸ್ಯಾಂಡಲ್‌ವುಡ್‌ನಿಂದ ಗಾಯಕನಿಗೆ ಅಸಹಕಾರ
ಆದಾಗೂ ಕನ್ನಡ ಹಾಡು ಕೇಳಿದ ಯುವಕರನ್ನು ಗೂಂಡಾಗಳು ಎಂದು ಕರೆದಿದ್ದರು. ಅವಮಾನ ಸಹಿಸಿಕೊಳ್ಳುವಷ್ಟು ಸಣ್ಣವನು ನಾನಲ್ಲ ಎನ್ನುತ್ತಾ ಸುದೀರ್ಘ ಪೋಸ್ಟ್‌ವೊಂದನ್ನ ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ಇದು ಸಹ ಭಾರೀ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು. ಹೀಗಾಗಿ ಇಂದು (ಮೇ 5) ಫಿಲ್ಮ್ ಚೇಂಬರ್‌ನಲ್ಲಿ ಸೋನು ನಿಗಂ ಬ್ಯಾನ್ ಮಾಡುವ ಬಗ್ಗೆ ನಡೆದು, ಕೊನೆಗೆ ಅಸಹಕಾರ ನೀಡಲು ಒಕ್ಕೊರಲಿನಿಂದ ತೀರ್ಮಾನ ಮಾಡಲಾಗಿತ್ತು. ಇಷ್ಟೆಲ್ಲ ಬೆಳವಣಿಗಳಾದ್ಮೇಲೆ ಸೋನು ನಿಗಂ ಕೊನೆಗೂ ತಮ್ಮ ಅಹಂ ಅನ್ನು ಪಕ್ಕಕ್ಕೆ ಇಟ್ಟು ಕ್ಷಮೆಯನ್ನು ಕೇಳಿದ್ದಾರೆ. ಕ್ಷಮಿಸಿ ಕರ್ನಾಟಕ, ನನ್ನ ಪ್ರತಿಷ್ಠೆಗಿಂತ ನಿಮ್ಮ ಪ್ರೀತಿ ದೊಡ್ಡದು.. ನಿಮ್ಮನ್ನ ಯಾವಾಗಲೂ ಪ್ರೀತಿಸುತ್ತೇನೆ ಅಂತ ಕ್ಷಮೆ ಕೋರಿದ್ದಾರೆ.