ಪಾಟ್ನಾ: ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು (Sanitary Napkins) ಉಚಿತವಾಗಿ ನೀಡಬೇಕೆಂಬ ಯುವತಿಯರ ಮನವಿಗೆ ಬಿಹಾರದ ಮಹಿಳಾ ಸಮಿತಿಯ ಮುಖ್ಯಸ್ಥೆ (Bihar women’s panel chief ) ಹರ್ಜೋತ್ ಕೌರ್ (Harjot Kaur) ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತಂತೆ ಕ್ಷಮೆಯಾಚಿಸಿದ್ದಾರೆ.
Advertisement
ಬುಧವಾರ ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು, ಸರ್ಕಾರ 20-30 ರೂಪಾಯಿಯ ಸ್ಯಾನಿಟರಿ ಪ್ಯಾಡ್‍ಗಳನ್ನು ಉಚಿತವಾಗಿ ನೀಡಬಹುದಾ ಎಂದು ಬಿಹಾರ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್ ಕೌರ್ ಅವರನ್ನು ಕೇಳಿದ್ದರು. ಇದಕ್ಕೆ ಇಂದು, ನೀವು ಸ್ಯಾನಿಟರಿ ಪ್ಯಾಡ್‍ಗಳನ್ನು ಕೇಳುತ್ತಿದ್ದೀರಿ, ನಾಳೆ ನೀವು ಕಾಂಡೋಮ್ (Condom) ಕೂಡ ಕೇಳುತ್ತೀರಾ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.
Advertisement
A simple request for good quality sanitary pads (costing Rs 20-30) was met with a snarky response from Bihar’s IAS officer Harjot Kaur.
“Tomorrow you’ll say the Govt can give jeans too. And why not some beautiful shoes after that… family planning method, nirodh too.” pic.twitter.com/b98VWA3b8H
— Marya Shakil (@maryashakil) September 28, 2022
Advertisement
ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಈ ಸಂಬಂಧ ಹರ್ಜೋತ್ ಕೌರ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‍ಸಿಡಬ್ಲ್ಯು) ಗುರುವಾರ ನೋಟಿಸ್ ಕಳುಹಿಸಿದೆ. ಈ ಬಗ್ಗೆ ತನಿಖೆ ನಡೆಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಕೂಡ ಆದೇಶಿಸಿದ್ದರು. ಇದನ್ನೂ ಓದಿ: ಇಂದು ಸ್ಯಾನಿಟರಿ ಪ್ಯಾಡ್, ನಾಳೆ ಕಾಂಡೋಮ್ ಕೇಳ್ತೀರಿ- ಮಹಿಳಾ IAS ಅಧಿಕಾರಿ ವೀಡಿಯೋ ವೈರಲ್
Advertisement
ಆದರಿಂದು ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಕ್ಷಮೆಯಾಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಳಸಿದ ಪದ ಯಾವುದಾದರೂ ಹುಡುಗಿಯರಿಗೆ ನೋವಾಗಿದ್ದಾರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಅವರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಯುವತಿಯರನ್ನು ಮುಂದೆ ಸಾಗಲು ಪ್ರೇರೇಪಿಸುವುದು ನನ್ನ ಉದ್ದೇಶವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.