ಬೆಂಗಳೂರು: ಬಹುಮಹಡಿ ಕಟ್ಟಡದಿಂದ ಬಿದ್ದು ಸೋಫಿಯಾ ಸ್ಕೂಲ್ (Sophia HighSchool) ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ್ ವೃತ್ತದ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ ಹಿಂದಿನ ಅಸಲಿ ಕಾರಣ ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಅಪಾರ್ಟ್ಮೆಂಟ್‌ನ 10ನೇ ಮಹಡಿಯಿಂದ ಬಿದ್ದು ಬಾಲಕಿ ಆತ್ಮಹತ್ಯೆ
Advertisement
Advertisement
ಹೌದು. ಸೋಫಿಯಾ ಸ್ಕೂಲ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಕೃತಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಈ ಹಿಂದೆ ಎರಡು ಬಾರಿ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಿಳಿದುಬಂದಿದೆ.
Advertisement
ಭಾನುವಾರ ಸಂಜೆಯೂ ಸಹ ದಿನೇ ದಿನೇ ಸಣ್ಣ ಆಗ್ತಾ ಇದ್ದೀನಿ ಸರಿಯಾಗಿ ಆಸ್ಪತ್ರೆಗೆ ತೋರಿಸುತ್ತಿಲ್ಲ ಎಂದು ಪೋಷಕರೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಬಂದಿದ್ದಳು. ಮಗಳು ಹೊರಗೆ ಹೋಗಿದ್ದಾಳೆ ಎಂದು ಪೋಷಕರು ಮನೆಯಲ್ಲೇ ಇದ್ದರು. ಆದರೆ ಹೊರಗೆ ಬಂದವಳೇ ಮೊದಲು ತಾನು ಓದುತ್ತಿದ್ದ ಸೋಫಿಯಾ ಸ್ಕೂಲ್‌ನಲ್ಲೇ ಆತ್ಮಹತ್ಯೆ (Suicide) ಮಾಡಿಕೊಳ್ಳಬೇಕೆಂದು ಹೋಗಿದ್ದಾಳೆ. ಆದರೆ ಭಾನುವಾರ ರಜಾದಿನ ಆಗಿದ್ದರಿಂದ ಭದ್ರತಾ ಸಿಬ್ಬಂದಿ ಶಾಲೆ ಆವರಣಕ್ಕೆ ಬಿಡಲು ನಿರಾಕರಿಸಿದ್ದಾರೆ.
Advertisement
ಅಲ್ಲಿಂದ ಸೀದಾ ಹೊರಟವಳೇ ನಿತ್ಯ ಓಡಾಡಿಕೊಂಡಿದ್ದ ಪಕ್ಕದ ಅಪಾರ್ಟ್ಮೆಂಟ್ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರ ಹೇಳಿಕೆ ಆಧಾರದ ಮೇಲೆ ಹೈಗ್ರೌಂಡ್ ಠಾಣೆಯ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ – ಸಚಿವರ ಆರೋಪದ ಬಳಿಕ ಭುಗಿಲೆದ್ದ ವಿವಾದ
ಏನಿದು ಘಟನೆ?: ಬಹುಮಹಡಿ ಕಟ್ಟಡದಿಂದ ಬಿದ್ದು ಭಾನುವಾರ ವಿದ್ಯಾರ್ಥಿನಿ ಪ್ರಕೃತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. 11ನೇ ಮಹಡಿಯಿಂದ ಬಿದ್ದ ರಭಸಕ್ಕೆ ಕಟ್ಟಡದ ಕೆಳಗೆ ಪಾರ್ಕ್ ಮಾಡಿದ್ದ ಕಾರಿನ ಗಾಜುಗಳು ಪುಡಿ-ಪುಡಿಯಾಗಿದ್ದವು. ಈ ಕುರಿತು ಪರಿಶೀಲನೆ ನಡೆಸಿದ್ದ ಹೈಗ್ರೌಂಡ್ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.