CinemaLatestMain PostSouth cinema

ರತನ್ ಟಾಟಾ ಬಯೋಪಿಕ್‌ಗೆ ಸುಧಾ ಕೊಂಗರಾ ಆ್ಯಕ್ಷನ್ ಕಟ್

`ಸೂರರೈ ಪೊಟ್ರು’ (Soorarai Pottru) ಚಿತ್ರದ ಭರ್ಜರಿ ಸಕ್ಸಸ್ ಬಳಿಕ ನಿರ್ದೇಶಕಿ ಸುಧಾ ಕೊಂಗರ ಈ ಚಿತ್ರವನ್ನ ಹಿಂದಿಗೂ ರಿಮೇಕ್ ಮಾಡುತ್ತಿದ್ದಾರೆ. ಇದರ ನಡುವೆ ಅವರ ಮುಂದಿನ ಚಿತ್ರದ ಬಗ್ಗೆ ಸೂಪರ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯಶಸ್ವಿ ಉದ್ಯಮಿ ರತನ್ ಟಾಟಾ(Ratan Tata) ಬಯೋಪಿಕ್ ಮಾಡಲು ನಿರ್ದೇಶಕಿ ಸುಧಾ (Sudha Kongara) ಸಜ್ಜಾಗಿದ್ದಾರೆ.

2020ರಲ್ಲಿ ಸೂರ್ಯ (Actor Surya) ನಟನೆಯ `ಸೂರರೈ ಪೊಟ್ರು’ ಸಿನಿಮಾಗೆ ಹಲವು ಪ್ರಶಸ್ತಿಗಳು ಲಭಿಸಿತ್ತು. ಇದರ ಹಿಂದಿ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್‌ಗೆ ಸುಧಾ ಡೈರೆಕ್ಷನ್ ಮಾಡ್ತಿದ್ದಾರೆ. ಇದರ ಜೊತೆ ಹೊಸ ಸಿನಿಮಾಗೂ ಪ್ಲ್ಯಾನ್‌ ಮಾಡಿದ್ದಾರೆ. ರತನ್ ಟಾಟಾ ಕಥೆಯನ್ನ ತೆರೆಯ ಮೇಲೆ ತರಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಕ್ಸಸ್‌ ಸಂಭ್ರಮದಲ್ಲಿ ʻಕಾಂತಾರʼ ಸಿನಿಮಾ ತಂಡ

ರತನ್ ಟಾಟಾ ಅವರು ಈ ದೇಶ ಕಂಡ ಹೆಸರಾಂತ ಉದ್ಯಮಿ. ಅವರ ಕುರಿತು ಸಿನಿಮಾ ಮಾಡುವುದು, ಅದನ್ನು ಬೆಳ್ಳಿತೆರೆ ಮೇಲೆ ತರುವುದು ಎಲ್ಲರ ಹೆಮ್ಮೆ ಆಗಿದೆ. ರತನ್ ಟಾಟಾ ಅವರ ಕುರಿತು ಸಮಾಜಕ್ಕೆ ಗೊತ್ತಿರದ ಒಂದಷ್ಟು ವಿಶೇಷತೆಗಳನ್ನು ಈ ಸಿನಿಮಾದ ಮೂಲಕ ಹೇಳುವ ಉದ್ದೇಶವಿದೆ. ಸದ್ಯ ಸ್ಕ್ರಿಪ್ಟ್ ವರ್ಕ್ ಕೆಲಸ ಕೂಡ ಜಾರಿಯಲ್ಲಿದೆ. 2023ರ ನವೆಂಬರ್ ವೇಳೆ ಶೂಟಿಂಗ್ ಆರಂಭಿಸುವ ಕುರಿತು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಇನ್ನೂ ರತನ್ ಟಾಟಾ ಪಾತ್ರಕ್ಕೆ ಅಕ್ಷಯ್ ಕುಮಾರ್ ಅಥವಾ ತಮಿಳು ನಟ ಸೂರ್ಯ ಇಬ್ಬರಲ್ಲಿ ಒಬ್ಬರು ಈ ಪಾತ್ರ ಮಾಡಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಅದ್ಯಾವ ನಟ ರತನ್‌ ಟಾಟಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

Live Tv

Leave a Reply

Your email address will not be published. Required fields are marked *

Back to top button