LatestLeading NewsMain PostSmartphonesTech

ಶೀಘ್ರವೇ ಭಾರತದ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಏಕರೂಪದ ಚಾರ್ಜರ್

ನವದೆಹಲಿ: ದೇಶದಲ್ಲಿ ಇ-ತ್ಯಾಜ್ಯದ (E-Waste) ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸ್ಮಾರ್ಟ್ಫೋನ್‌ಗಳಿಗೂ (Smartphones) ಏಕರೂಪದ ಚಾರ್ಜರ್ (Charger) ಅನ್ನು ಕಡ್ಡಾಯಗೊಳಿಸಲು ಕೇಂದ್ರ ತೀರ್ಮಾನಿಸಿದೆ. ಶೀಘ್ರವೇ ಈ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವ ಸಾಧ್ಯತೆಯಿದೆ.

ಕಳೆದ ಕೆಲವು ವಾರಗಳಲ್ಲಿ ಭಾರತ ಸರ್ಕಾರ ವ್ಯಾಪಕ ಸಮಾಲೋಚನೆಯನ್ನು ನಡೆಸಿ, ಎಲ್ಲಾ ಸ್ಮಾರ್ಟ್ಫೋನ್‌ಗಳಿಗೂ ಒಂದೇ ರೀತಿಯ ಚಾರ್ಜರ್ ಅನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ. ಈ ನೀತಿ ಜಾರಿಗೆ ಬಂದಲ್ಲಿ ಆಪಲ್ ಸೇರಿದಂತೆ ಎಲ್ಲಾ ಸ್ಮಾರ್ಟ್ಫೋನ್ ಕಂಪನಿಗಳು ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್‌ಗಳನ್ನೊಳಗೊಂಡ ಫೋನ್‌ಗಳನ್ನೇ ಉತ್ಪಾದಿಸಬೇಕಾಗುತ್ತದೆ.

ಈ ನಿಯಮ ಕೇವಲ ಸ್ಮಾರ್ಟ್ಫೋನ್‌ಗಳಿಗೆ ಮಾತ್ರವಲ್ಲದೇ ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ. ಇದರಿಂದ ಗ್ರಾಹಕರು ಪ್ರತಿ ಬಾರಿ ಹೊಸ ಸಾಧನವನ್ನು ಖರೀದಿಸಿದಾಗ ಪ್ರತ್ಯೇಕ ಚಾರ್ಜರ್ ಅನ್ನು ಖರೀದಿಸುವ ಅವಶ್ಯಕತೆಯಿರುವುದಿಲ್ಲ. ಒಂದೇ ರೀತಿಯ ಚಾರ್ಜರ್ ಅನ್ನು ಯಾವುದೇ ಸಾಧನಗಳಿಗೂ ಬಳಸಬಹುದಾಗುತ್ತದೆ. ಇದನ್ನೂ ಓದಿ: ಮೆಟಾ ಇಂಡಿಯಾದ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್ ನೇಮಕ

ಈಗಾಗಲೇ ಯುರೋಪಿಯನ್ ಒಕ್ಕೂಟ ಎಲ್ಲಾ ಸ್ಮಾರ್ಟ್ಫೋನ್‌ಗಳಿಗೆ ಯುಎಸ್‌ಬಿ-ಸಿ (USB-C) ಚಾರ್ಜರ್ ಅನ್ನು ಕಡ್ಡಾಯಗೊಳಿಸಿದೆ. ಭಾರತದಲ್ಲೂ ಬಹುತೇಕ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿಗಳು ಯುಎಸ್‌ಬಿ-ಸಿ ಚಾರ್ಜರ್‌ನ ಫೋನ್‌ಗಳನ್ನೇ ತಯಾರಿಸುತ್ತಿವೆ. ಆದರೆ ಆಪಲ್ ಕಂಪನಿಯ ಐಫೋನ್‌ಗಳಲ್ಲಿ ಮಾತ್ರ ಲೈಟನಿಂಗ್ ಕೇಬಲ್ ಅನ್ನು ಬಳಸಲಾಗುತ್ತಿದೆ.

 

ಭಾರತ ವಿಶ್ವದ 2ನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವ ಕಾರಣ ದೇಶದಲ್ಲಿ ಇ-ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುತ್ತಿದೆ. ಇ-ತ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗ ಮಹತ್ವದ ಹೆಜ್ಜೆಯನ್ನು ಇರಿಸಲು ಸಜ್ಜಾಗುತ್ತಿದೆ. ಈಗಾಗಲೇ ಯುರೋಪಿಯನ್ ಯೂನಿಯನ್ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗೆ ಯುಎಸ್‌ಬಿ-ಸಿ ಪೋರ್ಟ್ ಕಡ್ಡಾಯ ಮಾಡಿದ್ದು, 2024ರಲ್ಲಿ ಜಾರಿಗೆ ಬರಲಿದೆ. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರ

Live Tv

Leave a Reply

Your email address will not be published. Required fields are marked *

Back to top button