ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಟೆಕೆಟ್ ಪಡೆಯಬೇಕಿತ್ತು. ಆದರೆ ಇನ್ನು ಮುಂದೆ ನಿಮ್ಮ ಲಗೇಜಿಗೂ ನೀವೂ ಟಿಕೆಟ್ ಪಡೆಯಬೇಕಿದೆ. ಪ್ರಯಾಣಿಕರು ತಾವು ತೆಗೆದುಕೊಂಡು ಹೋಗುವ ಪ್ರತ್ಯೇಕ ಬ್ಯಾಗ್ ಗಳಿಗೆ ಪ್ರತ್ಯೇಕ ಹಣವನ್ನು ಪಾವತಿಸಬೇಕಾಗಿದೆ.
ಬಿಎಂಆರ್‍ಸಿಎಲ್ ಪ್ರಯಾಣಿಕರು ತಮ್ಮ ಜೊತೆ ತೆಗೆದುಕೊಂಡು ಹೋಗುವ ಪ್ರತಿ ಬ್ಯಾಗ್ ಗೆ 30 ರೂ. ಪಡೆಯುತ್ತಿದೆ. ಬಿಎಂಆರ್‍ಸಿಎಲ್ ನ ಈ ಹೊಸ ನಿಯಮಗಳಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವು ನಿಲ್ದಾಣಗಳಲ್ಲಿ ಗುರುವಾರದಿಂದಲೇ ಬ್ಯಾಗ್ ಗಳಿಗೆ ಹಣ ಪಡೆಯಲಾಗುತ್ತಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
Advertisement
Advertisement
Advertisement
ಎಷ್ಟು ತೂಕದ ಬ್ಯಾಗ್ ಗಳಿಗೆ ಟೆಕೆಟ್ ಪಡೆಯಬೇಕು ಎಂಬುದನ್ನು ಇದೂವರೆಗೂ ಬಿಎಂಆರ್‍ಸಿಎಲ್ ಸ್ಪಷ್ಟನೆ ನೀಡಿಲ್ಲ. ನಮ್ಮ ಮೆಟ್ರೋದಲ್ಲಿ ಯಾವುದೇ ಸೂಚನೆ ನೀಡದೇ ಬ್ಯಾಗ್ ಗಳಿಗೆ ಟೆಕೆಟ್ ನಿಗದಿ ಮಾಡಿದೆ. ಟಿಕೆಟ್ ಬಗ್ಗೆ ನಿಲ್ದಾಣಗಳಲ್ಲಿ ಯಾವುದೇ ಸೂಚನ ಫಲಕಗಳನ್ನು ಅಳವಡಿಸಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Advertisement