ಬೆಂಗಳೂರು: ಕೆಇಎ (KEA) ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ನನ್ನು (RD Patil) ಆದಷ್ಟು ಬೇಗ ಪೊಲೀಸರು ಬಂಧಿಸಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
ಪೊಲೀಸರ ನಿರ್ಲಕ್ಷ್ಯದಿಂದ ಆರ್.ಡಿ. ಪಾಟೀಲ್ ಎಸ್ಕೇಪ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆರ್‌ಡಿ ಪಾಟೀಲ್ ಎಸ್ಕೇಪ್ ಪ್ರಕರಣದಲ್ಲಿ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಆರ್‌ಡಿ ಪಾಟೀಲ್ ಬಂಧನ ಮಾಡಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ತಪ್ಪಿಸಿಕೊಂಡು ಹೋಗಿರೋ ಬಗ್ಗೆ ಮಾಹಿತಿ ಇದೆ. ಪೊಲೀಸರು ಅವರನ್ನು ಅರೆಸ್ಟ್ ಮಾಡಿಕೊಂಡು ಬರುತ್ತಾರೆ. ಒಂದು ದಿನ ತಪ್ಪಿಸಿಕೊಂಡು ಹೋಗಬಹುದು. ಯಾರಾದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿ ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೊದ್ಲು ಕೇಂದ್ರದ ಬಳಿ ಹಣ ಕೊಡಿಸಲಿ- ಬಿಜೆಪಿ ಬರ ಅಧ್ಯಯನಕ್ಕೆ ಸಿಎಂ ಕಿಡಿ
ಈಗಾಗಲೇ ಆರ್‌ಡಿ ಪಾಟೀಲ್ ಮೇಲೆ ಕೇಸ್‌ಗಳು ಇವೆ. ಪಿಎಸ್‌ಐ (PSI) ಕೇಸ್‌ನಲ್ಲೂ ಅವರ ಮೇಲೆ ಕೇಸ್ ಇದೆ. ಕೆಇಎ ಕೇಸ್‌ನಲ್ಲಿ ಇದ್ದಾರೆ ಅಂದರೆ ನಮಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಕ್ಷಿ ಆಧಾರಗಳು ಸಿಗುತ್ತವೆ. ಹೀಗಾಗಿ ನಾವು ಅವರನ್ನು ಅರೆಸ್ಟ್ ಮಾಡಿಕೊಂಡು ತರುತ್ತೇವೆ ಎಂದರು. ಇದನ್ನೂ ಓದಿ: ಇಂದಿನಿಂದ 9 ದಿನ ಬಲದಂಡೆ ಕಾಲುವೆಗೆ ಹರಿಯಲಿದೆ ಮಲಪ್ರಭಾ ನೀರು
ಐಎಪಿ ಅಧಿಕಾರಿಗೆ ಆರ್‌ಡಿ ಪಾಟೀಲ್ ಇರುವ ಬಗ್ಗೆ ಮಾಹಿತಿ ಗೊತ್ತಿತ್ತು. ಆದರೂ ಬಂಧನ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ವಿಚಾರಣೆ ಮಾಡುತ್ತೇನೆ. ಒಂದು ವೇಳೆ ನಿರ್ಲಕ್ಷ್ಯ ಇದ್ದರೆ ಐಪಿಎಸ್ ಅಧಿಕಾರಿ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಆತ ತಪ್ಪಿಸಿಕೊಂಡು ಎಷ್ಟು ದಿನ ಹೋಗ್ತಾನೆ? ತಪ್ಪಿಸಿಕೊಂಡು ಹೋದರೂ ಅವರನ್ನು ಹಿಡಿದುಕೊಂಡು ಬರಲು ಆದೇಶ ಮಾಡಿದ್ದೇವೆ. ಪೊಲೀಸರು ಆತನನ್ನು ಅರೆಸ್ಟ್ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಸನಾತನ ಧರ್ಮವನ್ನು ಕೊನೆವರೆಗೂ ವಿರೋಧಿಸುತ್ತೇನೆ: ಉದಯನಿಧಿ ಸ್ಟಾಲಿನ್
ಕೆಇಎ ಪರೀಕ್ಷೆ ಅಕ್ರಮ ಪ್ರಕರಣದ ಕುರಿತು ಪರಿಶೀಲನೆ ಮಾಡುತ್ತೇವೆ. ಅಗತ್ಯ ಇದ್ದರೆ ಸಿಐಡಿಗೆ (CID) ಕೊಡುತ್ತೇವೆ. ನಮಗೆ ಒಟ್ಟಾರೆ ತನಿಖೆ ಆಗಬೇಕು. ಸತ್ಯಾಸತ್ಯತೆ ಹೊರಗೆ ಬರಬೇಕು. ಅವರ ಮೇಲೆ ಕ್ರಮ ಆಗಬೇಕು. ಅದಕ್ಕೆ ಸಿಐಡಿ ತನಿಖೆ ಅವಶ್ಯಕತೆ ಇದ್ದರೆ ಕೊಡುತ್ತೇವೆ ಎಂದರು. ಕೆಇಎ ಮರು ಪರೀಕ್ಷೆ ಬಗ್ಗೆ ಕೆಇಎ ಅವರು ತೀರ್ಮಾನ ಮಾಡಬೇಕು. ನಾವು, ಪೊಲೀಸರು ಆ ಬಗ್ಗೆ ತೀರ್ಮಾನ ಮಾಡಲ್ಲ. ನಮಗೆ ದೂರು ಕೊಟ್ಟಿದ್ದಾರೆ. ದೂರಿನ ಆಧಾರದಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಮರು ಪರೀಕ್ಷೆ ತೀರ್ಮಾನ ಕೆಇಎ ತೀರ್ಮಾನ ಮಾಡಬೇಕು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೆಇಎ ಪರೀಕ್ಷಾ ಅಕ್ರಮದ ಕಿಂಗ್‌ಪಿನ್ ಬೆನ್ನಿಗೆ ಎಟಿಎಂ ಸರ್ಕಾರ ನಿಂತಿದೆ: ಆರೋಪಿ ಟ್ರೋಲ್ ಮಿನಿಸ್ಟರ್ ಖರ್ಗೆ ಆಪ್ತ ಎಂದ ಬಿಜೆಪಿ
ಇನ್ನು ಆರ್‌ಡಿ ಪಾಟೀಲ್‌ಗೆ ಕಾನೂನು ಭಯ ಇಲ್ಲದೇ ಇರೋದಕ್ಕೆ ಇಷ್ಟು ದಿನ ಹೀಗೆ ಮಾಡುತ್ತಿದ್ದ. ಇನ್ನು ಮುಂದೆ ಭಯ ಬರೋ ಹಾಗೆ ನಾವು ಮಾಡಬೇಕು. ಭಯ ಇರೋದಕ್ಕೆ ಏನು ಮಾಡಬೇಕೋ ಆ ಎಲ್ಲಾ ಕ್ರಮ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗ ವರದಿ ಜಾರಿಗೆ ಸಿಎಂಗೆ ಮನವಿ: ಪರಮೇಶ್ವರ್