ಬೆಂಗಳೂರು: ಇನ್ನೆರಡು ದಿನದಲ್ಲಿ ಕೆಎಂಎಫ್(KMF) ನಂದಿನಿ ಹಾಲಿನ( Nandini Milk) ಬೆಲೆ ಏರಿಸುವುದು ಬಹುತೇಕ ಖಚಿತವಾಗಿದೆ.
ಸಂಜೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಲೆ ಏರಿಕೆ ವಿಚಾರ ಚರ್ಚೆಗೆ ಬಂದಿದೆ. ಮೊನ್ನೆ ನಂದಿನಿ ಹಾಲಿನ ಬೆಲೆ ಹೆಚ್ಚಳವನ್ನು ತಡೆದಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ಇಂದು ಗ್ರಾಹಕರಿಗೆ ಹೊರೆ ಆಗದ ರೀತಿ, ರೈತರಿಗೂ ತೊಂದರೆ ಆಗದ ರೀತಿಯಲ್ಲಿ ಇನ್ನೆರಡು ದಿನದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಕೆಎಂಎಫ್‍ಗೆ ಸೂಚನೆ ನೀಡಿದ್ದಾರೆ. ಹಿಂದೆ ನಿರ್ಧರಿಸಿದ್ದ ದರ ಹೆಚ್ಚಳ ಬೇಡ. ಕಡಿಮೆ ಮಾಡಿ ಎಂದು ಕೆಎಂಎಫ್‍ಗೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಮಂಗಳಮುಖಿ ಪಾಸ್ – ಛಲ ಬಿಡದೆ ಸಾಧಿಸಿದ ಪೂಜಾ
Advertisement
"ನಮ್ಮ ರಾಜ್ಯದಲ್ಲಿನ ಹಾಲಿನ ದರ ಹಾಗೂ ಇತರೆ ರಾಜ್ಯಗಳಲ್ಲಿನ ದರ ಮತ್ತು ಉತ್ಪಾದನಾ ವೆಚ್ಚದ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಹಾಲಿನ ದರವನ್ನು 3₹ ಹೆಚ್ಚಿಸುವ ಬದಲು ರೈತರಿಗೆ ನಷ್ಟವಾಗದಂತೆ, ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳದಂತೆ,
1/2 pic.twitter.com/7645qjTh3y
— CM of Karnataka (@CMofKarnataka) November 21, 2022
Advertisement
ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಯಾವ ಕಾರಣಕ್ಕೆ ಏರಿಕೆ ಮಾಡಬೇಕು ಎಂದು ಮಾಹಿತಿ ಪಡೆದಿದ್ದೇನೆ. ಸೋರಿಕೆ ತಡೆಗಟ್ಟಲು ಕೂಡಾ ಮಾರ್ಗದರ್ಶನ ಕೊಟ್ಟಿದ್ದೇನೆ. ಈಗಾಗಲೇ ಮಾಡಿರುವ 3 ರೂ. ದರ ಹೆಚ್ಚಳ ಬೇಡ ಎಂದು ಸೂಚಿಸಿದ್ದೇನೆ. ಕೆಎಂಎಫ್‌ನವರು ಏನು ತೀರ್ಮಾನ ತೆಗೆದುಕೊಂಡು ಬರುತ್ತಾರೆ ಎಂಬುದನ್ನು ನೋಡಿಕೊಂಡು ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
Advertisement
ಪ್ರೋತ್ಸಾಹ ಧನ ಕೊಡುತ್ತಿರುವ ಕಾರಣ ಮತ್ತು ರೈತರ ಹಿತಚಿಂತನೆ ಕಾರಣಕ್ಕೆ ಸರ್ಕಾರ ಕೆಎಂಎಫ್ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದೆ. ಹಾಲಿನ ದರ ಕಾಲ ಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ. ಕೆಎಂಎಫ್‌ನವರು ಎರಡು ದಿನ ಸಮಯ ತಗೊಂಡಿದ್ದು ಸದ್ಯಕ್ಕೆ ಹಾಲಿನ ದರ ಹೆಚ್ಚಳ ಇಲ್ಲ. ಯಾವ್ಯಾವ ರಾಜ್ಯದಲ್ಲಿ ಎಷ್ಟು ದರ ಇದೆ ಎಂಬ ಮಾಹಿತಿ ಕೇಳಿದ್ದೇವೆ. ಕೆಎಂಎಫ್ ಸರ್ಕಾರದ ಅಂಗವಾಗಿರುವ ಕಾರಣ ರೈತರ ಹಿತರಕ್ಷಣೆ ಸರ್ಕಾರದ ಕರ್ತವ್ಯ. ರೈತರಿಗೂ ಸಮಸ್ಯೆಯಾಗಬಾರದು, ಗ್ರಾಹಕರಿಗೂ ತೊಂದರೆಯಾಗಬಾರದು. ಕೆಎಂಎಫ್ ಆಡಳಿತ ಮಂಡಳಿಗೆ ಕೆಲವು ಸಲಹೆ ಸೂಚನೆಗಳನ್ನು ಕೊಟ್ಟಿದ್ದೇನೆ ಎಂದು ಹೇಳಿದರು.