ಬೆಳಗಾವಿ: ಇತ್ತೀಚೆಗಷ್ಟೇ ತಮ್ಮ ಆರೋಗ್ಯದ ಬಗ್ಗೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಆನಂದ ಮಾಮನಿ (Ananda Mamani) ಅವರು, ಶೀಘ್ರದಲ್ಲೇ ಗುಣಮುಖವಾಗಿ ಜನ ಸೇವೆಗೆ ಬರುತ್ತೇನೆ, ಯಾರೂ ಆತಂಕಪಡಬೇಡಿ. ಊಹಾಪೋಹಗಳಿಗೆ ಕಿವಿಗೊಡಬೇಡಿ ನಾನು ಚೆನ್ನಾಗಿದ್ದೇನೆ ಎಂದಿದ್ದರು.
Advertisement
ಇದಲ್ಲದೇ ಕಳೆದ ಎರಡು ದಿನಗಳ ಹಿಂದಷ್ಟೇ ತಮ್ಮ ದೊಡ್ಡಪ್ಪನ ಸಾವಿಗೆ ಸಂತಾಪವನ್ನ ಆನಂದ ಮಾಮನಿ ಸೂಚಿಸಿದ್ದರು. ತಮ್ಮ ಹೆಸರಿನಲ್ಲಿರುವ ಟ್ವಿಟ್ಟರ್ (Twitter) ಖಾತೆಯಿಂದ ದುಃಖ ವ್ಯಕ್ತಪಡಿಸಿದ್ದರು. ನನ್ನ ದೊಡ್ಡಪ್ಪ ಕರಬಸಪ್ಪ ಮಲ್ಲಿಕಾರ್ಜುನಪ್ಪ ಮಾಮನಿ ಅವರು ಲಿಂಗೈಕ್ಯರಾಗಿದ್ದಾರೆಂದು ತಿಳಿಸಲು ವಿಷಾದವೆನಿಸುತ್ತಿದೆ. (ಅ.21ರಂದು)ಇಂದು ಮಧ್ಯಾಹ್ನ 2 ಗಂಟಗೆ ಗಂಟೆಗೆ ಸವದತ್ತಿ ಪಟ್ಟಣದ ಕೆಂಚಲಾರಕೊಪ್ಪ ತೋಟದ ಜಮೀನಿನಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೇರವೇರಿಸಲಾಗುವುದು ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.
Advertisement
ನನ್ನ ದೊಡ್ಡಪ್ಪ ಶ್ರೀ ಕರಬಸಪ್ಪ ಮಲ್ಲಿಕಾರ್ಜುನಪ್ಪ ಮಾಮನಿ ಅವರು ಲಿಂಗೈಕ್ಯರಾಗಿದ್ದಾರೆಂದು ತಿಳಿಸಲು ವಿಷಾದವೆನಿಸುತ್ತಿದೆ.
ಇಂದು ಮಧ್ಯಾಹ್ನ 2:00 ಗಂಟೆಗೆ ಸವದತ್ತಿ ಪಟ್ಟಣದ ಕೆಂಚಲಾರಕೊಪ್ಪ ತೋಟದ ಜಮೀನಿನಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೇರವೇರಿಸಲಾಗುವುದು. pic.twitter.com/hPKOvrMHNe
— RATNA ANAND MAMANI (@ratnamamanibjp) October 21, 2022
Advertisement
ಕುಟುಂಬಸ್ಥರಿಂದ 30 ವರ್ಷ ಅಧಿಕಾರ: ಆನಂದ ಮಾಮನಿ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ 6 ಬಾರಿ ಗೆದ್ದು ಜನ ಸೇವೆ ಮಾಡಿದ್ದಾರೆ. ಆನಂದ ಮಾಮನಿ ತಂದೆ ಚಂದ್ರಶೇಖರ ಮಾಮನಿ 1998ರಲ್ಲಿ ವಿಧಾನಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ತಂದೆಯ ನಿಭಾಯಿಸಿದ್ದ ಹುದ್ದೆ ಪಡೆದುಕೊಳ್ಳುವಲ್ಲಿ ಆನಂದ ಮಾಮನಿ ಯಶಸ್ವಿಯಾಗಿದ್ದಾರೆ. ಚಂದ್ರಶೇಖರ್ ಮಾಮನಿ 1985 ಪಕ್ಷೇತರ ಹಾಗೂ 1994ರಲ್ಲಿ ಜನತಾ ದಳದಿಂದ ಜಯಗಳಿಸಿದ್ದರು. ನಂತರ 1999ರಲ್ಲಿ ಗಂಗೂತಾಯಿ ಮಾಮನಿ ಸಹ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ
Advertisement
ಸವದತ್ತಿ ಬಿಜೆಪಿ ಶಾಸಕ, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ (18-01-1966) ರಂದು ಜನಿಸಿದ್ದರು. ತಂದೆ ಚಂದ್ರಶೇಖರ್ ಮಾಮನಿ ಹಾಗೂ ತಾಯಿ ಗಂಗಮ್ಮ ಮಾಮನಿ ಅವರ ಸುಪುತ್ರರಾಗಿದ್ದ ಆನಂದ ಮಾಮನಿ ಅವರಿಗೆ ಪತ್ನಿ ರತ್ನಾ ಆನಂದ ಮಾಮನಿ ಹಾಗೂ ಇಬ್ಬರು ಮಕ್ಕಳಿದ್ದರು. 15 ವರ್ಷದ ಚೇತನಾ ಮಾಮನಿ ಹೆಣ್ಣು ಮಗು ಹಾಗೂ 13 ವರ್ಷದ ಚಿನ್ಮಯ ಮಾಮನಿ ಗಂಡು ಮಗ ಇದ್ದು ಆನಂದ ಮಾಮನಿಯವರು ಬಿಕಾಂ ಪದವೀಧರರಾಗಿದ್ದರು.
2000, 2002 ರಲ್ಲಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿದ್ದರು. 2005, 2008ರಲ್ಲಿ ಸವದತ್ತಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅದರ ಜೊತೆಗೆ 2004ರಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶ 2008ರಲ್ಲಿ ಬಿಜೆಪಿ ಸೇರ್ಪಡೆಯಾಗಿ 2008ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮೊದಲ ಬಾರಿ ಶಾಸಕರಾಗಿ ಸವದತ್ತಿ ವಿಧಾನಸಭೆ ಮತಕ್ಷೇತ್ರಕ್ಕೆ ಆಯ್ಕೆ ಆಗಿದ್ದರು.
ನಂತರ 2013ರಲ್ಲಿ ಮತ್ತೆ ಬಿಜೆಪಿ (BJP) ಯಿಂದ ಎರಡನೇ ಬಾರಿಗೆ ಶಾಸಕರಾಗಿ ಹಾಗೂ 2018ರಲ್ಲಿ ಮತ್ತೆ ಮೂರನೇ ಬಾರಿಗೆ ಶಾಸಕರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಸವದತ್ತಿ ಮತಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದರು. ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ವಿಧಾನಸಭಾ ಡೆಪ್ಯುಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆನಂದ ಮಾಮನಿ ನಿಧನ ನಾಡಿಗೆ ತುಂಬುಲಾರದ ನಷ್ಟ ಮಾಡಿದೆ.