ಬೆಂಗಳೂರು: ಬಿಜೆಪಿಯವರು ದೇವಸ್ಥಾನಗಳಿಗೆ ಕೈ ಹಾಕಿದರೆ ಸುಟ್ಟು ಹೋಗುತ್ತಾರೆ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಹಿಂದೂ ದೇವಾಲಯಗಳನ್ನು ಶೀಘ್ರವೇ ಕಾನೂನು ಮುಕ್ತ ಮಾಡುವದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರು ಸಂತೋಷದಲ್ಲಿ ತೇಲುತ್ತಿದ್ದಾರೆ ತೇಲಲಿ. ಬೆಕ್ಕಿನ ಕಣ್ಣಿಗಾದರು ನನ್ನ ಹಾಕಲಿ, ಹುಲಿ ಕಣ್ಣಿಗಾದರು ಹಾಕಲಿ, ಇಲಿ ಕಣ್ಣಿಗಾದರು ಹಾಕಲಿ, ಪೀಳ್ಳಾರತಿಗಾದರು ಹಾಕಲಿ ಬಿಡಿ. ಇಲಿ ಗಣೇಶನ ವಾಹನ, ಬೊಮ್ಮಾಯಿ ಏನಾದರು ಹೇಳಿಕೊಳ್ಳಲಿ ಅವರಿಗೆ ಒಳ್ಳೆಯದಾಗಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಸ್ ಮೇಲೆ ದಾಳಿಗೈದ ಮೂವರು ಉಗ್ರರ ಹತ್ಯೆ
Advertisement
ಮುಜರಾಯಿ ಇಲಾಖೆಯಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳು ಇದ್ದಾರೆ. ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಇದೆ. ಅದನ್ನ ತಮ್ಮ ಕಾರ್ಯಕರ್ತರಿಗೆ ನೀಡಲು ಹೋಗಿದ್ದಾರೆ. ನಾವು ಕೂಡ ಹಿಂದೂಗಳು, ನಮಗೂ ಸಂಸ್ಕೃತಿ ಇದೆ. ಬಿಜೆಪಿಯವರು ಜನರ ಕಲ್ಯಾಣಕ್ಕೆ ಬೇಕಾದ ಕಾನೂನು ಮಾಡಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ, ದೇವಸ್ಥಾನ ಕಾಯ್ದೆ ತರುತ್ತಿದ್ದಾರೆ. ಚುನಾವಣೆಯಲ್ಲಿ ಸೋಲುತ್ತಿರುವ ಹಿನ್ನೆಲೆಯಲ್ಲಿ ಭಾವನಾತ್ಮಕವಾದ ವಿಚಾರ ತರುತ್ತಿದ್ದಾರೆ ಎಂದು ದೂರಿದರು.
Advertisement
Advertisement
ದೇವಸ್ಥಾನಗಳು ಈಗ ಹೇಗಿದೆಯೋ ಹಾಗೇ ಇರಬೇಕು. ದೇವಸ್ಥಾನಕ್ಕೆ ಕೈ ಹಾಕಿದರೆ ಸುಟ್ಟು ಹೋಗುತ್ತಾರೆ. ಎಷ್ಟು ಕಠೋರ ಹೃದಯ ಬಿಜೆಪಿಯವರದ್ದು, ದೇವಾಲಯಕ್ಕೆ ಕೈ ಹಾಕುತ್ತಿದ್ದಾರೆ. ನಾವು ಹಿಂದೂ ವಿರೋಧಿಗಳಲ್ಲ. ಅವರು ಹಿಂದೂ ವಿರೋಧಿಗಳು. ನಾವು ಹಿಂದೂಗಳ ಪರವಾಗಿಯೇ ಇದ್ದೀವೆ. ಜನವರಿ 4ರಂದು ಹಿರಿಯ ನಾಯಕರ ಸಭೆ ಇದ್ದು, ಅವತ್ತು ಈ ವಿಷಯದ ಕುರಿತು ಚರ್ಚೆ ಮಾಡುತ್ತೇವೆ. ಇದನ್ನ ಖಡಾಖಂಡಿತವಾಗಿಯೂ ವಿರೋಧಿಸುತ್ತೇವೆ ಎಂದು ಸಿಡಿದರು. ಇದನ್ನೂ ಓದಿ: ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು: ಸಿ.ಟಿ.ರವಿ
ಈಗ ಬನಶಂಕರಿ ದೇವಾಲಯ, ಕಬ್ಬಾಳಮ್ಮ ದೇವಾಲಯ ಎಲ್ಲಾ ಇದೆ. ಪುರೋಹಿತರು ಅವರ ಪಾಡಿಗೆ ಅವರು ಪೂಜೆ ಮಾಡುತ್ತಾ ಹೋಗುತ್ತಿಲ್ಲವೇ ಏನಾಗಿದೆ ಈಗ? ಎಂದು ಪ್ರಶ್ನೀಸಿದರು.