ಬೆಂಗಳೂರು: ಶೀಘ್ರವೇ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (Vande Bharat Express Train) ಬರಲಿದೆ. ಹೈದರಾಬಾದ್ (Hyderabad) ಹಾಗೂ ಬೆಂಗಳೂರು (Bengaluru) ನಡುವೆ ಸಂಚರಿಸಲಿರುವ ಹೊಸ ರೈಲು ಆಗಸ್ಟ್ ಅಂತ್ಯಕ್ಕೆ ಸಂಚಾರ ಆರಂಭಿಸುವ ಸಾಧ್ಯತೆಯಿದೆ.
ಈಗಾಗಲೇ ರಾಜ್ಯದಲ್ಲಿ ಮೈಸೂರು – ಚೆನ್ನೈ ಹಾಗೂ ಬೆಂಗಳೂರು – ಧಾರವಾಡಗಳ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗಳು ಇವೆ. ಇದೀಗ ಬೆಂಗಳೂರು – ಹೈದರಾಬಾದ್ ನಡುವೆ ಸಂಚಾರಕ್ಕೆ ಹೊಸ ರೈಲು ಸಜ್ಜುಗೊಳ್ಳುತ್ತಿದೆ. ಇದು 7 ಗಂಟೆ ಅವಧಿಯಲ್ಲಿ ಯಶವಂತಪುರದಿಂದ (Yeswanthpur) ಕಾಚಿಗುಡ ನಡುವೆ 610 ಕಿ.ಮೀ ಕ್ರಮಿಸಲಿದೆ.
Advertisement
Advertisement
ಹೊಸ ರೈಲು ಬೆಳಗ್ಗೆ ಕಾಚಿಗುಡದಿಂದ ಹೊರಟು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ತಲುಪಲಿದೆ. ಬಳಿಕ 2 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ ವೇಳೆಗೆ ಕಾಚಿಗುಡ ತಲುಪಲಿದೆ. ಯಶವಂತಪುರ, ಧರ್ನಾವರಂ, ದೋನ್ ಕರ್ನೂಲ್ ನಗರ, ಗಡ್ವಾಲ ಜಂಕ್ಷನ್, ಮೆಹಬೂಬ್ ನಗರ, ಕಾಚಿಗುಡ ಮಾರ್ಗದಲ್ಲಿ ರೈಲು ಸಂಚರಿಸಲಿದೆ. ಇದನ್ನೂ ಓದಿ: ಎಸ್ಇಪಿ ಜಾರಿಗೆ ಸರ್ಕಾರದ ಸಿದ್ಧತೆ – ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ
Advertisement
Advertisement
ಈಗಾಗಲೇ ಕಾಚಿಗುಡದಿಂದ ದೋನ್ವರೆಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ. ಶೀಘ್ರದಲ್ಲೇ ಯಶವಂತಪುರದವರೆಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಳ್ಳಲಿದೆ. ಆಗಸ್ಟ್ ಅಂತ್ಯಕ್ಕೆ ಹೊಸ ವಂದೇ ಭಾರತ್ ರೈಲು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: 5 ಡಜನ್ಗೂ ಹೆಚ್ಚು ಇನ್ಸ್ಪೆಕ್ಟರ್ ವರ್ಗಾವಣೆಗೆ ತಡೆ – ಆದೇಶಕ್ಕೆ ದಿಢೀರ್ ತಡೆ ಹಿಡಿದಿದ್ದು ಯಾಕೆ?
Web Stories